Crime News

ರಸ್ತೆ ಅಪಘಾತ ಪ್ರಕರಣ

ದಿನಾಂಕ: 01-10-2020 ರಂದು ವಿರಾಜಪೇಟೆ ತಾಲ್ಲೂಕು ಮಾಕುಟ್ಟ ಬಳಿ ಮುಖ್ಯ ರಸ್ತೆಯಲ್ಲಿ ಕೆಎಲ್-59-ಜೆ-9006 ರ ಕಾರನ್ನು ಅದರ ಚಾಲಕ ಅಮರ್‍ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕೆಎಲ್-78-6823 ರ ಬೈಕ್ ಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಸವಾರ ಶಂಶುದ್ದೀನ್ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ಅದ್ರಾಮನ್‍ ಎಂಬುವವರು ದಿನಾಂಕ: 03-10-2020 ರಂದು ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಗಾಂಜಾ ಮಾರಾಟ ಪ್ರಕರಣ

ದಿನಾಂಕ: 03-10-2020 ರಂದು ವಿರಾಜಪೇಟೆ ಪಟ್ಟಣದ ನಿಸರ್ಗ ಲೇಔಟ್‍ ಬಳಿ ಸಾರ್ವಜನಿಕರಿಗೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ವಿರಾಜಪೇಟೆ ಗ್ರಾಮಾಂತರ ಠಾಣೆ ಪಿ.ಎಸ್‍.ಐ ವೀಣಾ ನಾಯಕ್‍ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ವಿರಾಜಪೇಟೆ ನೆಹರು ನಗರ ನಿವಾಸಿ ಶಂಶುದ್ದೀನ್‍ ಎಂಬುವವನನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕ್‍ ಡಿಕ್ಕಿ, ಪಾದಚಾರಿಗೆ ಗಾಯ.

ದಿನಾಂಕ: 01-10-2020 ರಂದು ಮಡಿಕೇರಿ ನಗರದ ಗೌಡ ಸಮಾಜದ ಬಳಿ ಮುಖ‍್ಯ ರಸ್ತೆಯಲ್ಲಿ ಕೆಎ-19-ಇಡಬ್ಲ್ಯು-3270 ರ ಬೈಕನ್ನು ಸವಾರ ಕೀರ್ತನ್‍ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರಿಗೆ ಡಿಕ್ಕಿಪಡಿಸಿದ ಪರಿಣಾಮ ಮಹಿಳೆ ಗಾಯಗೊಂಡಿದ್ದು ಈ ಬಗ್ಗೆ ಮಂಜು ಎಂಬುವವರು ನೀಡಿದ ಪುಕಾರಿನ ಮೇರೆ ಮಡಿಕೇರಿ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕರ್ತವ್ಯಕ್ಕೆ ಅಡ್ಡಿಪಡಿಸಿ ಗೃಹ ರಕ್ಷಕರ ಮೇಲೆ  ಹಲ್ಲೆ.

ದಿನಾಂಕ: 03-10-2020 ರಂದು ಮಡಿಕೇರಿ ನಗರದ ಮೈಸೂರು ರಸ್ತೆಯಲ್ಲಿರುವ ಕೃಷ್ಣ ಹೊಟೇಲ್‍ ಮುಂಭಾಗದ ರಸ್ತೆಯಲ್ಲಿ ಕೆಎ-10-ಎಫ್-0472 ರ ಬಸ್‍ ಹಾಗೂ ಕೆಎ-12-ಜೆಡ್‍್- 7928 ರ ಕಾರು ಚಾಲಕರು ಕ್ಷುಲ್ಲಕ ಕಾರಣಕ್ಕೆ ಸಾರ್ವಜನಿಕ ಸ್ಥಳದಲ್ಲಿ ವಾಗ್ವಾದ ನಡೆಸಿತ್ತಿದ್ದರು. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರಿಂದ ಈಸ್ಟ್‍ ಎಂಡ್‍ ಪೆಟ್ರೋಲ್ ಬಂಕ್‍ ಬಳಿ ಸಮವಸ್ತ್ರದಲ್ಲಿ ಕರ್ತವ್ಯದಲ್ಲಿದ್ದ ಗೃಹರಕ್ಷಕ ದಳದ ಸಿಬ್ಬಂದಿಯವರಾದ ಜಾರ್ಜ್ ಮತ್ತು ರಂಜಿತ್‍ ಎಂಬುವವರು ವಾಹನಗಳನ್ನು ತೆರವುಗೊಳಿಸಲು ಚಾಲಕರುಗಳನ್ನು ಸಮಾಧಾನಪಡಿಸಲು ಮುಂದಾದಾಗ ಕೆಎ-12-ಜೆಡ್‍್- 7928 ರ ಕಾರಿನ ಚಾಲಕ ನಿಶಾಂತ್‍ ಎಂಬುವವರು ಅವಾಚ್ಯ ಪದಗಳಿಂದ ಬೈದು ಕಲ್ಲಿನಿಂದ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಮಡಿಕೇರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.