Crime News

ಹಲ್ಲೆ ಪ್ರಕರಣ

ದಿನಾಂಕ: 03-10-2020 ರಂದು ವಿರಾಜಪೇಟೆ ತಾಲ್ಲೂಕು ಚೆನ್ನಯ್ಯನಕೋಟೆ ನಿವಾಸಿಗಳಾದ ಲೋಕೇಶ್ ಮತ್ತು ಅಕ್ಷಯ್‍, ಅಜಿತ್, ಥಾನೇಶ ಎಂಬುವವರ ನಡುವೆ ವೈಯಕ್ತಿಕ ಕಾರಣದಿಂದ ಪರಸ್ಪರ ಜಗಳ ಮಾಡಿ ಹಲ್ಲೆ ಮಾಡಿಕೊಂಡಿದ್ದು ಈ ಬಗ್ಗೆ ಉಭಯಕಡೆಯವರು ನೀಡಿದ ಪುಕಾರಿನ ಮೇರೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮೊಬೈಲ್‍ ಕಳವು ಪ್ರಕರಣ

ದಿನಾಂಕ: 03-10-2020 ರಂದು ವಿರಾಜಪೇಟೆ ತಾಲ್ಲೂಕು ಸಿದ್ದಾಪುರ ನೆಲ್ಲಿಹುದಿಕೇರಿ ರಸ್ತೆಯಲ್ಲಿರುವ ಕೋಫಿಯಾ ರೆಸ್ಟೋರೆಂಟ್‍ ಗೆ ಮೈಸೂರು ನಿವಾಸಿ ತಿಲಕ್‍ ಪ್ರಸಾದ್‍ ಎಂಬುವವರು ಉಪಹಾರಕ್ಕೆ ಹೋಗಿದ್ದಾಗ ಸೋಫಾದ ಮೇಲೆ ಇಟ್ಟಿದ್ದ ರೆಡ್‍ ಮಿ ನೋಟ್‍-5 ಮೊಬೈಲ್‍ ಹ್ಯಾಂಡ್‍ ಸೆಟ್‍ ನ್ನು ಯಾರೋ ಕಳ್ಳತನ ಮಾಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಸಿದ್ದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

ದಿನಾಂಕ: 04-10-2020 ರಂದು ವಿರಾಜಪೇಟೆ ತಾಲ್ಲೂಕು ಗೋಣಿಕೊಪ್ಪ ಗ್ರಾಮದ ಮುಖ‍್ಯ ರಸ್ತೆಯಲ್ಲಿ ಕೆಎ-12-ಕ್ಯೂ-2433 ರ ಸ್ಕೂಟರನ್ನು ಸವಾರ ಪ್ರಸನ್ನ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆ ಬದಿಯಲ್ಲಿ ನಿಂತಿದ್ದ ಕೆಎ-12-ಜೆಡ್-4900 ರ ಕಾರಿನ ಹಿಂಭಾಗಕ್ಕೆ ಡಿಕ್ಕಿಪಡಿಸಿದ ಪರಿಣಾಮ ಸವಾರ ಗಾಯಗೊಂಡಿದ್ದು ಈ ಬಗ್ಗೆ ಕುಮಾರಸ್ವಾಮಿ ಎಂಬುವವರು ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ: 03-10-2020 ರಂದು ಸೋಮವಾರಪೇಟೆ ತಾಲ್ಲೂಕು ಕೂಡ್ಲೂರು ಗ್ರಾಮದ ಸುಂದರನಗರ ನಿವಾಸಿ ಕಾರ್ತಿಕ್ ಎಂಬುವವರು ಸ್ನೇಹಿತರೊಂದಿಗೆ ಮಾತನಾಡಿಕೊಂಡಿರುವಾಗ ಅದೇ ಗ್ರಾಮದ ನಿವಾಸಿ ಸಾಗರ್‍ ಎಂಬುವವರು ಭರತೀಶ್‍ ಹಾಗು ಮತ್ತೊಬ್ಬ ವ್ಯಕ್ತಿಯೊಂದಿಗೆ ಸೇರಿ ವೈಯಕ್ತಿಕ ವಿಚಾರದಲ್ಲಿ ವೈಮನಸ್ಸಿನಿಂದ ಕಾರ್ತಿಕ್, ಪ್ರಶಾಂತ್‍, ವಿಶ್ವನಾಥ್‍ ರವರಿಗೆ ಹಲ್ಲೆ ಮಾಡಿ ಗಾಯಪಡಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.