Crime News

ಅಕ್ರಮ ಬೀಟೆ ಮರ ಸಾಗಾಟ ಪ್ರಕರಣ:

ದಿನಾಂಕ: 05-10-2020 ರಂದು ಕೊಡಗು ಡಿ.ಸಿ.ಐ.ಬಿ ವಿಭಾಗದ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಎ.ಎಸ್‍.ಐ ಹಮೀದ್‍ ಮತ್ತು ಸಿಬ್ಬಂದಿಯವರು ವಿರಾಜಪೇಟೆ ತಾಲ್ಲೂಕು ಕಳಕೂರು ಗ್ರಾಮಕ್ಕೆ ತೆರಳಿ ಕುಪ್ಪಣ ಮಾಡ ರವೀಂದ್ರ ಎಂಬುವವರು ಅವರ ತೋಟದಲ್ಲಿ ಬಿದ್ದಿದ್ದ ಬೀಟೆ ಮರವನ್ನು ಸರ್ಕಾರದ ಯಾವುದೇ ಪರವಾನಗಿ ಇಲ್ಲದೇ ನಾಟಾಗಳನ್ನಾಗಿ ಮಾಡಿ ಸಾಗಾಟ ಮಾಡಿದ್ದು ಹಾಗೂ ಸಾಗಾಟ ಮಾಡಲು ಸಂಗ್ರಹಿಸಿಟ್ಟಿದ್ದ ಪ್ರಕರಣವನ್ನು ಪತ್ತೆ ಮಾಡಿ ಸ್ವತ್ತನ್ನು ಅಮಾನತ್ತುಪಡಿಸಿ ನೀಡಿದ ವರದಿಯ ಮೇರೆ ಶ್ರೀಮಂಗಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮಾರಾಟಕ್ಕಾಗಿ ಮದ್ಯ ಸಾಗಾಟ, ಪ್ರಕರಣ ದಾಖಲು.

ದಿನಾಂಕ: 05-10-2020 ರಂದು ಸೋಮವಾರಪೇಟೆ ಖಾಸಗಿ ಬಸ್‍ ನಿಲ್ದಾಣದ ಬಳಿ ಯಡೂರು ಗ್ರಾಮದ ನಿವಾಸಿ ಜಗದೀಶ್ ಎಂಬುವವರು ಅಕ್ರಮವಾಗಿ ಮನೆಯಲ್ಲಿ ಮಾರಾಟ ಮಾಡಲು ಮದ್ಯವನ್ನು ತೆಗೆದುಕೊಂಡು ಹೋಗುತ್ತಿದ್ದ ಪ್ರಕರಣವನ್ನು ಸೋಮವಾರಪೇಟೆ ಠಾಣೆ ಪಿ.ಎಸ್.ಐ ಶಿವಶಂಕರ್ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.