Crime News

ರಸ್ತೆ ಅಪಘಾತ  ಪ್ರಕರಣ

ದಿನಾಂಕ: 06-10-2020 ರಂದು ಸೋಮವಾರಪೇಟೆ ತಾಲ್ಲೂಕು ಆನೆಕಾಡು ಬಳಿ ಹೆದ್ದಾರಿ ರಸ್ತೆಯಲ್ಲಿ ಕೆಎ-10-ಎಎಫ್-8514 ರ ಕಾರನ್ನು ಅದರ ಚಾಲಕ ಶಿವಪ್ಪ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆ ಬದಿಯಲ್ಲಿ ನಿಂತಿದ್ದ ಕೆಎ-01-ಎಂಕೆ-1448 ರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ನಿಂತ ಕಾರಿನಲ್ಲಿದ್ದ ರಾಕೇಶ್, ಸಂತೋಷ್, ಶ್ರೀನಾಥ್‍ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ನವೀನ್‍ ಎಂಬುವವರು ನೀಡಿದ ಪುಕಾರಿನ ಮೇರೆ ಕುಶಾಲನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆಕಸ್ಮಿಕ ಸಾವು ಪ್ರಕರಣ

ದಿನಾಂಕ: 05-10-2020 ರಂದು ರಾತ್ರಿ ವಿರಾಜಪೇಟೆ ತಾಲ್ಲೂಕು ಆರ್ಜಿ ಗ್ರಾಮದ ನಿವಾಸಿ ಸುಮಿತಾ ಎಂಬುವವರು ಅವರ ಅಣ್ಣ ಸಿದ್ದಾಪುರದಿಂದ ತಂದಿದ್ದ ಅಣಬೆಯಿಂದ ಸಾರು ಮಾಡಿ ಸುಮಿತಾ , ಅವರ ಮಗಳು ಮತ್ತು ಮಾದವಿ ಎಂಬುವವರು ಊಟ ಮಾಡಿದ ನಂತರ ವಾಂತಿ ಬೇದಿಯಾಗಿ ಅಸ್ವಸ್ಥಗೊಂಡವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಮಾದೇವಿ ರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಈ ಬಗ್ಗೆ ಚಂದ್ರ ಎಂಬುವವರು ನೀಡದ ದೂರಿನ ಮೇರೆ ವಿರಾಜಪೇಟೆ ಪಟ್ಟಣ ಠಾಣೆ ಪೊಲೀಸರು ಪ್ರರಕಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.