Crime News

ರಸ್ತೆ ಅಪಘಾತ ಪ್ರಕರಣ

ದಿನಾಂಕ: 03-10-2020 ರಂದು ಸೋಮವಾರಪೇಟೆ ತಾಲ್ಲೂಕು ಕುಶಾಲನಗರ ಬೈಚನಹಳ್ಳಿ ಬಳಿ ಮುಖ್ಯ ರಸ್ತೆಯಲ್ಲಿ ಕೆಎ-03-ಎಂಸಿ-8193 ರ ಕಾರನ್ನು ಚಾಲಕ ಜಾವಿದ್‍ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಸ್ಕೂಟರ್‍ ಗೆ ಡಿಕ್ಕಿಪಡಿಸಿದ ಪರಿಣಾಮ ಸವಾರ ವರ್ಗೀಸ್‍ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ದಿನಾಂಕ: 08-10-2020 ರಂದು ಗಣೇಶ್‍ ಎಂಬುವವರು ನೀಡಿದ ಪುಕಾರಿನ ಮೇರೆ ಕುಶಾಲನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ: 08-10-2020 ರಂದು ಕುಶಾಲನಗರ ಗುಂಡೂರಾವ್‍ ಬಡಾವಣೆ ನಿವಾಸಿ ಸುರೇಶ್ ಎಂಬುವವರು ವೈಯಕ್ತಿಕ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಹಿಂಭಾಗದಲ್ಲಿದ್ದ ಮರಕ್ಕೆ ನೇಣು ಬಿಗದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮೃತರ ಪತ್ನಿ ನೀಡಿದ ದೂರಿನ ಮೇರೆ ಕುಶಾಲನಗರ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಪರಿಚಿತ ವ್ಯಕ್ತಿ ಸಾವು

ದಿನಾಂಕ: 08-10-2020 ರಂದು ವಿರಾಜಪೇಟೆ ತಾಲ್ಲೂಕು ಗೋಣಿಕೊಪ್ಪ ಬಸ್‍ ನಿಲ್ದಾಣದಲ್ಲಿ ಕಳೆದ ಕೆಲವು ದಿನಗಳಿಂದ ಇದ್ದ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ವ್ಯಕ್ತಿಯ ವಿಳಾಸ ತಿಳಿದುಬಂದಿರುವುದಿಲ್ಲ. ಮೃತ ವ್ಯಕ್ತಿಯು ಅಂದಾಜು 45 ವರ್ಷ ಪ್ರಾಯವಾಗಿದ್ದು ಈ ಬಗ್ಗೆ ಪಂಚಾಯಿತಿ ಪಿ.ಡಿ.ಒ ರವರು ನೀಡಿದ ದೂರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಕಾಣೆ ಪ್ರಕರಣ

ದಿನಾಂಕ: 05-10-2020 ರಂದು ಕೇರಳ ರಾಜ್ಯದ ಇರಿಟ್ಟಿ ನಿವಾಸಿ ಅಬ್ದುಲ್‍ ರಜಾಕ್ ಎಂಬುವವರು ವಿರಾಜಪೇಟೆ ಪಟ್ಟಣದ ಸೆಲ್ವನಗರದ ನಿವಾಸಿ ರಮೀಜ್‍ ಎಂಬುವವರ ಮನೆಗೆ ಪತ್ನಿಯೊಂದಿಗೆ ಬಂದಿದ್ದರು. ದಿನಾಂಕ: 06-10-2020 ರಂದು ಲೀಜ್‍ ಗೆ ಅಡಿಕೆ ತೋಟ ನೋಡಿಕೊಂಡುಬರುವುದಾಗಿ ಹೇಳಿ ಮನೆಯಿಂದ ಹೋಗಿದ್ದು ನಂತರ ಅವರ ಪತ್ನಿಗೆ ದೂರವಾಣಿ ಕರೆ ಮಾಡಿ ಊಟಕ್ಕೆ ಮನೆಗೆ ಬರುವುದಾಗಿ ತಿಳಿಸಿದ್ದು ಸಂಜೆಯಾದರು ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು ಈ ಬಗ್ಗೆ ರಮೀಜ್‍ ರವರು ನೀಡಿದ ದೂರಿನ ಮೇರೆ ವಿರಾಜಪೇಟೆ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.