Crime News

ಅಂಗಡಿ ಕಳವು

ಮಡಿಕೇರಿ ಬಳಿಯ ಇಬ್ನಿವಳವಾಡಿ ಗ್ರಾಮದ ಸ್ಯಾಂಡಲ್ ಕಾಡ್ ತೋಟದ ಜಂಕ್ಷನ್ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಇಬ್ರಾಹಿಂ ಎಂಬವರ ಅಂಗಡಿಗೆ ದಿನಾಂಕ 08/10/2020ರ ರಾತ್ರಿ ವೇಳೆ ಯಾರೋ ಕಳ್ಳರು ಅಂಗಡಿ ಬಾಗಿಲನ್ನು ಮೀಟಿ ತೆರೆದು ಅಂಗಡಿಯೊಳಗಿದ್ದ ಸಿಗರೇಟು, ಸೋಪು ಮುಂತಾದ ಸಾಮಗ್ರಿಗಳು ಮತ್ತು ಒಂದು ಗ್ಯಾಸ್ ಸಿಲಿಂಡರ್ ಮತ್ತು ಪಕ್ಕದ ಸುನಿಲ್ ಎಂಬವರ ಖಾಲಿ ಮನೆಯ ಬಾಗಿಲ ಬೀಗ ಮುರಿದು ಒಳ ಪ್ರವೇಶಿಸಿ ತಾಮ್ರದ ಹಂಡೆ ಮತ್ತು ತಾಮ್ರದ ಇಡ್ಲಿ ಪಾತ್ರೆ ಸೇರಿದಂತೆ ಒಟ್ಟು ರೂ. 14,000/- ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಗಂಡಸು ಕಾಣೆ ಪ್ರಕರಣ

ಮಡಿಕೇರಿಯ ಸುಬ್ರಮಣ್ಯ ನಗರದ ನಿವಾಸಿ ದಾಮಿನಿ ಎಂಬವರ ಪತಿ ಪ್ರಸನ್ನ ಎಂಬವರು ದಿನಾಂಕ 15/06/2020 ರಂದು ದಾಮಿನಿಯವರನ್ನು ಅವರ ತವರು ಮನೆಗೆ ಬಿಟ್ಟು ಮಡಿಕೇರಿಗೆ ಬಂದಿದ್ದು ಅಂದಿನಿಂದ ಯಾವುದೇ ರೀತಿಯ ಸಂಪರ್ಕವಿಲ್ಲದೆ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಬೈಕ್ ಅವಘಡ

ದಿನಾಂಕ 08/10/2020ರಂದು ಶನಿವಾರಸಂತೆ ಬಳಿಯ ಗೌಡಳ್ಳಿ ನಿವಾಸಿ ಸುರ್ಜಿತ್ ಎಂಬವರು ಅವರ ಬೈಕಿನಲ್ಲಿ ಶಾಂತವೇರಿ ಎಂಬಲ್ಲಿ ಬೈಕಿನಲ್ಲಿ ಹೋಗುತ್ತಿರುವಾಗ ಅಡ್ಡ ಬಂದ ನಾಯಿಯೊಂದನ್ನು ತಪ್ಪಿಸಲು ಬೈಕನ್ನು ಅತಿ ವೇಗದಿಂದ ಚಾಲಿಸಿದ ಪರಿಣಾಮ ಬೈಕ್ ಸುರ್ಜಿತ್‍ರವರ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಮಗುಚಿಕೊಂಡು ಸುರ್ಜಿತ್‍ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಮನೆ ಕಳವು ಪ್ರಕರಣ

ದಿನಾಂಕ 09/10/2020ರಂದು ಶನಿವಾರಸಂತೆ ಬಳಿಯ ಅಪ್ಪಶೆಟ್ಟಳ್ಳಿ ನಿವಾಸಿ ವೆಂಕಟೇಶ್ ಎಂಬವರು ಪತ್ನಿಯೊಂದಿಗೆ ಕೆಲಸದ ನಿಮಿತ್ತ ಶನಿವಾರಸಂತೆ ಪಟ್ಟಣಕ್ಕೆ ಹೋಗಿ ಮನೆಗೆ ಮರಳಿ ಬರುವಾಗ ಯಾರೋ ಕಳ್ಳರು ಮನೆಯ ಹಿಂಬಾಗಿಲನ್ನು ಒಡೆದು ಒಳಪ್ರವೇಶಿಸಿ ಮನೆಯೊಳಗಿದ್ದ ಬೀರುವನ್ನು ಒಡೆದು ಒಟ್ಟು ರೂ.96,000/- ಚಿನ್ನಾಭರಣಗಳು ಮತ್ತು ನಗದನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಕಾಫಿ ಗಿಡ ಕಡಿದು ನಾಶ

ದಿನಾಂಕ 07/10/2020ರಂದು ಶ್ರೀಮಂಗಲ ಬಳಿಯ ಬೆಳ್ಳೂರು ನಿವಾಸಿ ಬಾಚರಣಿಯಂಡ ಜೋಯಪ್ಪ ಎಂಬವರ ತೊಟಕ್ಕೆ ಅದೇ ಗ್ರಾಮದ ಬಿ.ಕೆ.ಉತ್ತಪ್ಪ, ಬಿ.ಕೆ. ಬೋಪಣ್ಣ ಮತ್ತು ಬಿ.ಕೆ.ರಾಜೇಶ್ ಎಂಬವರುಗಳು ಅಕ್ರಮವಾಗಿ ಪ್ರವೇಶಿಸಿ ಸುಮಾರು ರೂ. 10,000/- ಮೌಲ್ಯದ ಕಾಫಿ ಗಿಡಗಳನ್ನು ಕಡಿದು ನಾಶಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.