Crime News

ಸ್ಕೂಟರಿಗೆ ಬೈಕ್ ಡಿಕ್ಕಿ 

ಸ್ಕೂಟರಿಗೆ ಬೈಕೊಂದು ಡಿಕ್ಕಿಯಾಗಿ ಸ್ಕೂಟರ್ ಸವಾರ ಗಾಯಗೊಂಡ ಘಟನೆ ಸೋಮವಾರಪೇಟೆ ನಗರದಲ್ಲಿ ನಡೆದಿದೆ.  ದಿನಾಂಕ 5-10-2020 ರಂದು ಸೋಮವಾರಪೇಟೆ ನಗರದ ಗಾಂಧಿನಗರದ ನಿವಾಸಿ ಹೆಚ್.ಪಿ. ಮಂಜುನಾಥ ಎಂಬವರು ತಮ್ಮ ಸ್ಕೂಟರಿನಲ್ಲಿ  ನಗರದ ಸಫಾಲಿ ಬಾರಿನ ಮುಂದಿನ ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಮೋಟಾರ್ ಸೈಕಲೊಂದು ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರ ಹೆಚ್.ಪಿ. ಮಂಜುನಾಥರವರಿಗೆ ಗಾಯಗಳಾಗಿದ್ದು, ಈ ಸಂಬಂಧ ದಿನಾಂಕ 10-10-2020 ರಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮನೆಗೆ ನುಗ್ಗಿ ಚಿನ್ನಾಭರಣ ಮತ್ತು ನಗದು ಕಳ್ಳತನ

ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಮೂದರವಳ್ಳಿ ಗ್ರಾಮದ ನಿವಾಸಿ ಎಂ.ಎ. ಸುದೀಪ ಎಂಬವರ ಮನೆಗೆ ದಿನಾಂಕ 9-10-2020 ರಂದು ಯಾರೋ ಕಳ್ಳರು ಮನೆಯ ಹಿಂದಿನ ಬಾಗಿಲ ಚಿಲಕವನ್ನು ಮೀಟಿ ಬಾಗಿಲನ್ನು ತೆರೆದು ಮನೆಯ ಒಳಗೆ ಪ್ರವೇಶ ಮಾಡಿ ಗಾಡ್ರೇಜ್ ಬೀರುವಿನಿಂದ 65,000/- ರೂ. ಮೌಲ್ಯದ ಚಿನ್ನಾಭರಣ ಹಾಗು ಬೆಳ್ಳಿಯ ಸಾಮಾಗ್ರಿ ಮತ್ತು ನಗದು 12,000/- ರೂ. ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿನಾಕಾರಣ ವ್ಯಕ್ತಿ ಮೇಲೆ ಹಲ್ಲೆ

ದಿನಾಂಕ 10-10-2020 ರಂದು ಕುಶಾಲನಗರದ ಕೂಡ್ಲೂರಿನ ನಿವಾಸಿ ನವೀನ ಎಂಬಾತನ್ನು ಕೂಡ್ಲೂರು ಗ್ರಾಮದ ನಾಲ್ಕುಜನರು ಸೇರಿ ಕುಶಾಲನಗರದ ವಾಲ್ಮೀಕಿ ಭವನದ ಹತ್ತಿರ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ ಕೊಲೆ ಬೆದರಿಕಿ ಹಾಕಿರುವ ಬಗ್ಗೆ  ಯಶ್ವಂತ್ ಎಂಬವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.