Crime News

ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ

ಮಡಿಕೇರಿ ನಿಗರದ ಡೈರಿ ಫಾರಂ ಬಳಿಯ ನಿವಾಸಿ ಶ್ರೀಧರ್‌ ಹೂವಲ್ಲಿ ಎಂಬವರ ಪತ್ನಿ ಬೆನ್ನಿ ಜೆಸಿಂತ ಡಿಸಿಲ್ವಾ ಎಂಬವರು ಬ್ಯಾಂಕಿನಿಂದ ಕೃಷಿಗಾಗಿ ಸುಮಾರು ರೂ.೨,೫೦,೦೦೦/- ಹಣವನ್ನು ಸಾಲವಾಗಿ ಪಡೆದುಕೊಂಡಿದ್ದು ಸಾಲ ತೀರಿಸಲು ಆಗದ್ದರಿಂದ ಬ್ಯಾಂಕಿನಿಂದ ನೋಟೀಸು ಬಂದಿದ್ದು ಈ ಕಾರಣಕ್ಕೆ ಮತ್ತು ಆಕೆಯು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ಕೊಡಿಸಿದರೂ ವಾಸಿಯಾಗದ ಕಾರಣ ಮನ ನೊಂದು ದಿನಾಂಕ ೧೧/೧೦/೨೦೨೦ರಂದು ಮನೆಯಲ್ಲಿದ್ದ ಇರುವೆ ಕೊಲ್ಲುವ ಔಷಧಿಯನ್ನು ಸೇವಿಸಿ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ಸಾಗಿಸಿದರೂ ಫಲಕಾರಿಯಾಗದೆ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಕಳವು ಪ್ರಕರಣ

ದಿನಾಂಕ ೧೧/೧೦/೨೦೨೦ರಂದು ರಾತ್ರಿ ಪೊನ್ನಂಪೇಟೆ ಬಳಿಯ ದೋಬಿ ಕಾಲೋನಿ ನಿವಾಸಿ ಬಿ.ಎಸ್.ಮಂಜು ಎಂಬವರ ಮಾವನವರು ಮಲಗಿದ್ದ ಕೊಠಡಿಯ ಕಿಟಕಿಯನ್ನು ರಾತ್ರಿ ವೇಳೆ ಯಾರೋ ತೆರೆದು ಮಂಜುರವರ ಮಾವನವರ ಪ್ಯಾಂಟಿನಲ್ಲಿದ್ದ ರೂ.೧೫,೦೦೦/- ನಗದು ಹಾಗೂ ಮೇಜಿನ ಮೇಲಿಟ್ಟಿದ್ದ ಸುಮಾರು ರೂ.೭,೦೦೦/- ಮೌಲ್ಯದ ಒಂದು ಮೊಬೈಲ್‌ ಫೋನನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ದಿನಾಂಕ ೧೧/೧೦/೨೦೨೦ರ ರಾತ್ರಿ ವೇಳೆ ವಿರಾಜಪೇಟೆ ಬಳಿಯ ಕೊಳತ್ತೋಡು ಬೈಗೋಡು ನಿವಾಸಿ ಪಣಿ ಎರವರ ಪುಷ್ಪ ಎಂಬವರು ಮನೆಯಲ್ಲಿ ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತರ ಮಗಳು ಕಿವುಡಿ ಹಾಗೂ ಮೂಕಿಯಾಗಿದ್ದು ಈ ಕಾರಣಕ್ಕೆ ಪುಷ್ಪರವರು ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ ೧೨/೧೦/೨೦೨೦ರಂದು ಸುಂಟಿಕೊಪ್ಪ ಬಳಿಯ ಕಂಬಿಬಾಣೆ ಗ್ರಾಮದ ಬೂದನ ಪೈಸಾರಿ ನಿವಾಸಿ ರಾಕೇಶ್‌ ಎಂಬವರು ಮನೆಯ ಮೇಲ್ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತ ರಾಕೇಶ್‌ರವರು ಯಾವುದೇ ಕೆಲಸಕ್ಕೆ ಹೋಗದೇ ಇದ್ದು ಅದನ್ನು ತಂದೆಯವರು ಪ್ರಶ್ನಿಸಿದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಖಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.