Crime News

ಜಿಲ್ಲೆಯ ಪೊನ್ನಂಪೇಟೆ ಪೋಲಿಸ್ ಠಾಣಾ ವ್ಯಾಪ್ತಿಯ ಡೋಬಿ ಕಾಲೋನಿಯ ಮನೆಯೊಂದರಲ್ಲಿ ದಿನಾಂಕ 11-10-2020ರ ರಾತ್ರಿ ಯಾರೋ ಕಳ್ಳರು ಮನೆಗೆ ನುಗ್ಗಿ ನಗದು ಹಣ ಮತ್ತು ಮೊಬೈಲ್ ಫೋನ್ ಕಳ್ಳತನ ಮಾಡಿದ್ದ ಪ್ರಕರಣ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಪತ್ತೆ ಕಾರ್ಯ ನಡೆಸಿದ ಪೊಲೀಸರು ಆರೋಪಿ ಚೆನ್ನಂಗಿ ಗ್ರಾಮದ ಪಂಜರಿಎರವರ ಸತೀಶ @ ಅಣ್ಣು ಎಂಬಾತನನ್ನು ದಸ್ತಗಿರಿ ಮಾಡಿ ಆತನಿಂದ ಒಂದು ಮೊಬೈಲ್ ಮತ್ತು 1,350/- ರೂ ಹಣವನ್ನು ವಶಪಡಿಸಿಕೊಳ್ಳುವಲ್ಲಿ ಪೊನ್ನಂಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಪತ್ತೆಕಾರ್ಯದಲ್ಲಿ ಪಿಎಸ್ಐ ಕುಮಾರ್, ಸಿಬ್ಬಂದಿಯವರಾದ ಎಂ.ಡಿ.ಮನು, ಸತೀಶ್, ಕುಶ, ಹರೀಶ್, ಮಹೇಂದ್ರ ಮತ್ತು ಜಾಫ್ರಿ ರವರು ಪಾಲ್ಗೋಂಡಿದ್ದು ಇವರ ಕಾರ್ಯವನ್ನು ಪ್ರಶಂಸಿಸಲಾಗಿದೆ.