Crime News

ಹಲ್ಲೆ ಪ್ರಕರಣ

ದಿನಾಂಕ 05/05/2018ರಂದು ಶನಿವಾರಸಂತೆ ಬಳಿಯ ದೊಡ್ಡಕುಂದ ನಿವಾಸಿ ತೇಜಕುಮಾರ್ ಎಂಬವರು ಅವರ ಕಾರಿನಲ್ಲಿ ಶನಿವಾರಸಂತೆ ಪಟ್ಟಣದ ಕೆಆರ್‌ಸಿ ವೃತ್ತದ ಬಳಿ ಬಂದಾಗ ಅಲ್ಲಿ ಬೆಂಬಳೂರು ಗ್ರಾಮದ ದಿನೇಶ್, ಸಂತೋಷ್, ಕವನ್, ಕಾರ್ತಿಕ್ ಶಿರಂಗಾಲದ ಶಂಕರ, ಹುಲುಸೆ ಗ್ರಾಮದ ಪರಮೇಶ ಮತ್ತು ಸಕಲೇಶಪುರದ ಉಚ್ಚಂಗಿಯ ಕೃಷಿಕ ಎಂಬವರು ಸೇರಿಕೊಂಡು ತೇಜಕುಮಾರ್‌ರವರ ಮೇಲೆ ಹಳೆ ದ್ವೇಷದಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

 ರಸ್ತೆ ಅಪಘಾತ

ದಿನಾಂಕ 25/06/2018ರಂದು ವಿರಾಜಪೇಟೆ ಬಳಿಯ ಬಾಳುಗೋಡು ಗ್ರಾಮದ ಅಂಬಟ್ಟಿ ನಿವಾಸಿ ಎ.ಎ.ಮಾದಪ್ಪ ಎಂಬವರು ಅವರ ಜೀಪಿನಲ್ಲಿ ವಿರಾಜಪೇಟೆಗೆ ಬರುತ್ತಿರುವಾಗ ದಾರಿಯಲ್ಲಿ ಅಮ್ಮತ್ತಿ ನಿವಾಸಿ ಟಿ.ಎ.ಸುದನ್ ಎಂಬವರು ಅವರ ಸ್ನೇಹಿತ ಗಗನ್ ಎಂಬಾತನೊಂದಿಗೆ ಒಂದು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಾದಪ್ಪನವರ ಜೀಪಿಗೆ ಡಿಕ್ಕಿಪಡಿಸಿರುವುದಾಗಿ ಮಾದಪ್ಪನವರು ದೂರು ನೀಡಿದ್ದು ಅದೇ ರೀತಿ ಮಾದಪ್ಪನವರು ಅವರ ಜೀಪನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ತನ್ನ ಬೈಕಿಗೆ ಡಿಕ್ಕಿಪಡಿಸಿರುವುದಾಗಿ ಟಿ.ಎ.ಸುದನ್ ಸಹಾ ಪ್ರತಿ ದೂರು ನೀಡಿದ್ದು ವಿರಾಜಪೇಟೆ ಗ್ರಾಮಾಂತರ ಪೊಲೀಸರು ಎರಡೂ ದೂರುಗಳನ್ನು  ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.