Crime News

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

ಮಡಿಕೇರಿ ಸಮೀಪದ ಕಡಗದಾಳು ನಿವಾಸಿ ಜನಾರ್ಧನ್‌ ಎಂಬವರು ದಿನಾಂಕ ೧೬/೧೦/೨೦೨೦೪ ರಂದು ವೈಯುಕ್ತಿಕ ಕಾರಣಕ್ಕೆ ಮನೆಯಲ್ಲಿದ್ದ ಕಳೆನಾಶಕ ಔಷಧಿಯನ್ನು ಸೇವಿಸಿ ಅಸ್ವಸ್ಥರಾಗಿ ಚಿಕಿತ್ಸೆಗಾಗಿ ಮಡಿಕೇರಿಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದವರು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ ೧೮/೧೦/೨೦೨೦ರಂದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಬಾವಿಗೆ ಬಿದ್ದು ವ್ಯಕ್ತಿ ಆತ್ಮಹತ್ಯೆ

ವಿರಾಜಪೇಟೆ ಬಳಿಯ ಬೇಟೋಳಿ ಗ್ರಾಮದ ರಾಮನಗರ ನಿವಾಸಿ ಸಂಜೀವ ಎಂಬವರು ದಿನಾಂಕ ೧೮/೧೦/೨೦೨೦ರ ಸಂಜೆ ವೇಳೆ ಮನೆ ಬಳಿಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ಸಂಜೀವರವರು ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಅಪಾಯಕಾರಿ ಬೈಕ್‌ ಚಾಲನೆ

ದಿನಾಂಕ ೧೮/೧೦/೨೦೨೦ರಂದು ಗೋಣಿಕೊಪ್ಪ ಠಾಣೆಯ ಎಎಸ್‌ಐ ಕೆ.ಸಿ.ನಾಣಯ್ಯನವರು ಹರಿಶ್ಚಂದ್ರಪುರದ ಬಳಿ ಸಂಚಾರ ನಿಯಂತ್ರಣ ಕರ್ತವ್ಯ ಮಾಡಿಕೊಂಡಿರುವಾಗ ಅಲ್ಲಿನ ರಸ್ತೆಯಲ್ಲಿ ಕೆಎ-೦೪-ಹೆಚ್‌ಕ್ಯು-೫೧೨೭ರ ಬೈಕಿನ ಚಾಲಕ ರಿಶಿನ್‌ ಎಂಬಾತನು ಹಾಗೂ ಕೆಎ-೧೨-ಆರ್-‌೨೧೫೯ ಸಂಖ್ಯೆಯ ಸ್ಕೂಟರ್‌ ಚಾಲಕ ಬೋಪಣ್ಣ ಎಂಬವರು ಅವರ ಬೈಕು ಹಾಗೂ ಸ್ಕೂಟರನ್ನು ವ್ಹೀಲಿಂಗ್‌ ಮಾಡಿಕೊಂಡು ಅಪಾಯಕಾರಿಯಾಗಿ ಚಾಲಿಸುತ್ತಿದ್ದುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.