Crime News
ಹಲ್ಲೆ ಪ್ರಕರಣ
ದಿನಾಂಕ: 19-10-2020 ರಂದು ಮಡಿಕೇರಿ ತಾಲ್ಲೂಕು ನಾಪೋಕ್ಲು ಗ್ರಾಮದ ಕಲ್ಲುಮೊಟ್ಟೆ ನಿವಾಸಿಗಳಾದ ಇಸಾಕ್, ಬಷೀರ್ ಮತ್ತು ಹ್ಯಾರಿಸ್, ಷರೀಫ್,ಕಾದರ್ ಎಂಬುವವರ ನಡುವೆ ಕಲ್ಲುಮೊಟ್ಟೆಯಲ್ಲಿ ಮನೆಗಳನ್ನು ತೆರವುಗೊಳಿಸಲು ಸರ್ಕಾರದಿಂದ ನೀಡಲಾಗಿರುವ ನೋಟಿಸ್ ವಿಚಾರವಾಗಿ ಪರಸ್ಪರ ವೈಷಮ್ಯದಿಂದ ಹಲ್ಲೆ ಮಾಡಿಕೊಂಡು ಗಾಯಪಡಿಸಿದ್ದು ಈ ಬಗ್ಗೆ ಉಭಯಕಡೆಯವರು ನೀಡಿದ ಪುಕಾರಿನ ಮೇರೆ ನಾಪೋಕ್ಲು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ರಸ್ತೆ ಅಪಘಾತ ಪ್ರಕರಣ
ದಿನಾಂಕ: 18-10-2220 ರಂದು ಸೋಮವಾರಪೇಟೆ ತಾಲ್ಲೂಕು ಕಣಿವೆ ಗ್ರಾಮದ ಬಳಿ ಹೆದ್ದಾರಿ ರಸ್ತೆಯಲ್ಲಿ ಕೆಎ-12-ಯು-0512 ರ ಸ್ಕೂಟರನ್ನು ಸವಾರ ವಿನಾಯಕ್ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಸ್ಕೂಟರ್ ನಿಯಂತ್ರಣ ತಪ್ಪಿ ಬಿದ್ದುದರಿಂದ ಸವಾರ ಮತ್ತು ಹಿಂಬದಿ ಸವಾರ ಪ್ರಶಾಂತ್ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ಕಿರಣ್ ಎಂಬುವವರು ನೀಡಿದ ಪುಕಾರಿನ ಮೇರೆ ಕುಶಾಲನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.