Crime News

ಕಳವು ಪ್ರಕರಣ

ದಿನಾಂಕ: 19-10-2020 ರಂದು ವಿರಾಜಪೇಟೆ ತಾಲ್ಲೂಕು ಪೊನ್ನಂಪೇಟೆ ಗ್ರಾಮದ ಶಿವ ಕಾಲೋನಿ ನಿವಾಸಿ ಶ್ರೀಮತಿ ಚೆಲುವಮ್ಮ ಎಂಬುವವರು ಅವರ ಮನೆಯಲ್ಲಿ ಇಟ್ಟಿದ್ದ ರೂ. 24000 ನಗದು ಹಣವನ್ನು ಹುಣಸೂರು ತಾಲ್ಲೂಕು ನಲ್ಲೂರು ಪಾಲ ಗ್ರಾಮದ ನಿವಾಸಿ ಹರೀಶ ಎಂಬುವವರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಪೊನ್ನಂಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆಕಸ್ಮಿಕ ಸಾವು ಪ್ರಕರಣ

ದಿನಾಂಕ: 20-10-2020 ರಂದು ಸೋಮವಾರಪೇಟೆ ತಾಲ್ಲೂಕು ಗರಗಂದೂರು ಗ್ರಾಮದ ನಿವಾಸಿ ರಮೇಶ ಎಂಬುವವರು ಕೆಲಸ ಮಾಡುತ್ತಿದ್ದ ತೋಟದ ಬಳಿ ಹಾರಂಗಿ ಹಿನ್ನೀರಿನಲ್ಲಿ  ಮೀನು ಹಿಡಿಯಲು ಹೋಗಿದ್ದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಈ ಬಗ್ಗೆ ಮೃತರ ಪತ್ನಿ ನೀಡಿದ ಪುಕಾರಿನ ಮೇರೆ ಸುಂಟಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.