Crime News
ವ್ಯಕ್ತಿ ಆತ್ಮಹತ್ಯೆ
ದಿನಾಂಕ: 25-10-2020 ರಂದು ವಿರಾಜಪೇಟೆ ಪಟ್ಟಣದ ಮಲೆ ತಿರಿಕೆ ಬೆಟ್ಟ ನಿವಾಸಿ ಮಂಜು ಎಂಬುವವರು ವೈಯಕ್ತಿಕ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮೃತರ ಪತ್ನಿ ನೀಡಿದ ದೂರಿನ ಮೇರೆ ವಿರಾಜಪೇಟೆ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಅಶ್ಲೀಲ ಸಿ.ಡಿ ಮಾರಾಟ ಪ್ರಕರಣ.
ದಿನಾಂಕ: 26-10-2020 ರಂದು ವಿರಾಜಪೇಟೆ ಪಟ್ಟಣದ ನೂರ್ ಅಹಮ್ಮದ್ ಎಂಬುವವರು ಅವರ ನೂರ್ ವಿಡಿಯೋಸ್ ಎಂಬ ವಿಡಿಯೋ & ಆಡಿಯೋ ಅಂಗಡಿಯಲ್ಲಿ ಸಾರ್ವಜನಿಕರಿಗೆ ಅಶ್ಲೀಲ ವಿಡಿಯೋ ಚಿತ್ರೀಕರಣದ ಸಿ.ಡಿಗಳನ್ನು ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ವಿರಾಜಪೇಟೆ ಪಟ್ಟಣ ಠಾಣೆ ಪಿ.ಎಸ್.ಐ ಅಭಿಜಿತ್ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ವ್ಯಕ್ತಿ ಆತ್ಮಹತ್ಯೆ
ದಿನಾಂಕ: 25-10-2020 ರಂದು ಮಡಿಕೇರಿ ತಾಲ್ಲೂಕು ಕಿರುಂದಾಡು ಗ್ರಾಮದ ನಿವಾಸಿ ಪೊನ್ನಪ್ಪ ಎಂಬುವವರು ಅನಾರೋಗ್ಯವಿದ್ದುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮೃತರ ಪತ್ನಿ ನೀಡಿದ ದೂರಿನ ಮೇರೆ ನಾಪೋಕ್ಲು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಹಲ್ಲೆ ಪ್ರಕರಣ
ದಿನಾಂಕ: 24-10-2020 ರಂದು ಮಡಿಕೇರಿ ತಾಲ್ಲೂಕು ಕರಿಕೆ ಗ್ರಾಮದ ಚೆಂಬೇರಿ ಚೆಕ್ ಪೋಸ್ಟ್ ಬಳಿ ಯತೀನ್ ಎಂಬುವವರು ಕೆಎ-05-ಕೆಜಿ-1259 ರ ಬೈಕ್ ನಲ್ಲಿ ಹೋಗುತ್ತಿರುವಾಗ ಕೆಎ-09-ಇಎಸ್201 ರ ಬಸ್ ಚಾಲಕ ಮತ್ತು ನಿರ್ವಾಹಕ ರಸ್ತೆಯಲ್ಲಿ ವಾಹನಕ್ಕೆ ದಾರಿ ಕೊಡುವ ವಿಚಾರದಲ್ಲಿ ಜಗಳ ಮಾಡಿ ದೊಣ್ಣೆಯಿಂದ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದು ಈ ಬಗ್ಗೆ ಗಾಯಾಳುವಿನ ಸೋದರ ಸತೀಶ್ ಎಂಬುವವರು ನೀಡಿದ ಪುಕಾರಿನ ಮೇರೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.