Crime News

ರಸ್ತೆ ಅಪಘಾತ ಪ್ರಕರಣ

        ದಿನಾಂಕ: 31-10-2020 ರಂದು ವಿರಾಜಪೇಟೆ ತಾಲ್ಲೂಕು ಮಾಕುಟ್ಟ ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ಎಪಿ-37-ಸಿಪಿ-2367 ರ ಕಾರನ್ನು ಅದರ ಚಾಲಕ ದಾಸು ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳೀ ಬಿದ್ದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಾಯಿ, ಜಗದೀಶ, ರಾಜಶೇಖರ, ಸುರೇಶ, ದಾಸು ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ವೆಂಕಟರಂಗರಾವ್ ಎಂಬುವವರು ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರಳು ಶೇಖರಣೆ ಪ್ರಕರಣ

        ದಿನಾಂಕ: 02-11-2020 ರಂದು ವಿರಾಜಪೇಟೆ ತಾಲ್ಲೂಕು ಟಿ.ಶೆಟ್ಟಿಗೇರಿ ಗ್ರಾಮದ ವಗರೆ ಎಂಬಲ್ಲಿ ಪೂಕೊಳ ಡೋಡು ಹಾಗು ಬಲ್ಯತೋಡು ಹೊಳೆಗಳು ಸೇರುವ ಸ್ಥಳದಿಂದ ಅದೇ ಗ್ರಾಮದ ನಿವಾಸಿಗಳಾದ ಚೊಟ್ಟೆಯಂಡಮಾಡ ಅಯ್ಯಪ್ಪ ಮತ್ತು ಕುಶಾಲಪ್ಪ ಎಂಬುವವರು ಅಕ್ರಮವಾಗಿ ಮರಳನ್ನು ಕಳ್ಳತನ  ಮಾಡಿ ತೆಗೆದು ಶೇಖರಿಸುತ್ತಿದ್ದ ಪ್ರಕರಣವನ್ನು ಶ್ರೀಮಂಗಲ ಠಾಣೆ ಪಿಎಸ್ಐ ರವಿಶಂಕರ್‍ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

        ದಿನಾಂಕ: 02-11-2020 ರಂದು ಮಡಿಕೇರಿ-ಕುಶಾಲನಗರ ನಡುವಿನ ಹೆದ್ದಾರಿ ರಸ್ತೆಯಲ್ಲಿ ಕೆದಕಲ್‍ ಗ್ರಾಮದ ಬಳಿ ಕೆಎ-09-ಎನ್‍-1442 ರ ಕಾರನ್ನು ಅದರ ಚಾಲಕ ಮೋಹನ್‍ ಭಟ್‍ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಲಾರಿಗೆ ಡಿಕ್ಕಿಪಡಿಸಿದ ನಂತರ ಪಕ್ಕದಲ್ಲಿದ್ದ ಚರಂಡಿಗೆ ಬಿದ್ದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ಮತ್ತು ಅವರ ಪತ್ನಿ ಗಾಯಗೊಂಡಿದ್ದು ಈ ಬಗ್ಗೆ ಲಾರಿ ಚಾಲಕ ವಿಜೇಶ್‍ ಕುಮಾರ್‍ ಎಂಬುವವರು ನೀಡಿದ ಪುಕಾರಿನ ಮೇರೆ ಸುಂಟಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

        ದಿನಾಂಕ: 02-11-2020 ರಂದು ಮಡಿಕೇರಿ-ಕುಶಾಲನಗರ ಹೆದ್ದಾರಿ ರಸ್ತೆಯಲ್ಲಿ ಬಸವನಹಳ್ಳಿ ಗ್ರಾಮದ ಬಳಿ ಕೆಎ-12-ಬಿ-3710 ರ ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕೆಎಲೆ-59-ಆರ್-5246 ರ ಬೈಕ್‍ ಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್‍ ಸವಾರ ಅರುಣ ಮತ್ತು ಹಿಂಬದಿ ಸವಾರ ಅನುರಾಜ್‍ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕುಶಾಲನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳವು ಪ್ರಕರಣ

        ದಿನಾಂಕ: 02-11-2020 ರಂದು ಮಡಿಕೇರಿ ತಾಲ್ಲೂಕು ಬಿಳಿಗೇರಿ ಗ್ರಾಮದ ನಿವಾಸಿ ರಾಜಗೋಪಾಲ ಎಂಬುವವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿ ಗಾಡ್ರೆಜ್ ಬೀರುವಿನಲ್ಲಿ ಇಟ್ಟಿದ್ದ 8,68,000 ರೂ ಬೆಲೆ ಬಾಳುವ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.