Crime News

ಬೈಕ್‍ ಕಳವು ಪ್ರಕರಣ

ದಿನಾಂಕ: 31-10-2020 ಸೋಮವಾರಪೇಟೆ ತಾಲ್ಲೂಕು ಕುಶಾಲನಗರ ನಿವಾಸಿ ಚಂದ್ರಶೇಖರ ಎಂಬುವವರು ಅವರ ಮನೆಯ ಮುಂಭಾಗ ನಿಲ್ಲಿಸಿದ್ದ ಕೆಎ-12-ಕ್ಯೂ-1153 ರ ಬಜಾಜ್ ಪಲ್ಸಾರ್ ಬೈಕನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ದಿನಾಂಕ: 04-11-2020 ರಂದು ನೀಡಿದ ಪುಕಾರಿನ ಮೇರೆ ಕುಶಾಲನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ: 03-11-2020 ರಂದು ವಿರಾಜಪೇಟೆ ತಾಲ್ಲೂಕು ಬಾಳಲೆ ನಿವಾಸಿ ಭಾರ್ಗವ ಎಂಬುವವರು ಅವರ ಮನೆಗೆ ಹೋಗುತ್ತಿರುವಾಗ ಮಲ್ಲೂರು ಗ್ರಾಮದ ನಿವಾಸಿ ಚಕ್ಕೇರ ಜೀವನ್‍ ಎಂಬುವವರು ದಾರಿ ತಡೆದು ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಿ ನೋವುಪಡಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಪೊನ್ನಂಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ: 03-11-2020 ರಂದು ಮಡಿಕೇರಿ ನಗರದ ಸುದರ್ಶನ ಬಡಾವಣೆ ನಿವಾಸಿ ಪ್ರಜ್ವಲ್ ಎಂಬುವವರು ಹಿಲ್‍ ರಸ್ತೆ ಬಳಿ ನಡೆದುಕೊಂಡು ಹೋಗುತ್ತಿರುವಾಗ ಫೋರ್ಟ್ ವೀವ್ ಹೊಟೇಲ್‍ನಲ್ಲಿ ಕೆಲಸ ಮಾಡಿಕೊಂಡಿರುವ ಧನುಷ್‍ ಮತ್ತು ಚರಣ್ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಅವಾಚ್ಯ ಪದಗಳಿಂದ ಬೈದು ಚಾಕುವಿನಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಮಡಿಕೇರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.