News

           ಕೊಡಗು ಜಿಲ್ಲಾ ಪೊಲೀಸ್ ಕಛೇರಿಗೆ ಇಂದು ಕರ್ನಾಟಕ ಸರಕಾರದ ಮಾನ್ಯ ಗೃಹ ಸಚಿವರಾದ ಶ್ರೀ ಬಸವರಾಜ್ ಬೊಮ್ಮಾಯಿ ರವರು ಭೇಟಿ ನೀಡಿ ಪರಿಶೀಲನಾ ಸಭೆ ನಡೆಸಿದರು. ಬಳಿಕ ಮಾದ್ಯಮದವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದರು.
ಈ ಸಂದರ್ಭದಲ್ಲಿ ದಕ್ಷಿಣ ವಲಯದ ಪೊಲೀಸ್ ಮಹಾ ನಿರೀಕ್ಷಕರಾದ ಶ್ರೀ ವಿಪುಲ್ ಕುಮಾರ್, ಐಪಿಎಸ್ ರವರು ಹಾಗು ಜಿಲ್ಲೆಯ ಎಲ್ಲಾ ಪೊಲೀಸ್ ಉಪಾಧೀಕ್ಷಕರು, ಪೊಲೀಸ್ ವೃತ್ತ ನಿರೀಕ್ಷಕರು ಹಾಗು ಪೊಲೀಸ್ ನಿರೀಕ್ಷಕರವರುಗಳು ಹಾಜರಿದ್ದರು.

CRIME NEWS

ಕಳವು ಪ್ರಕರಣ

ದಿನಾಂಕ: 04-11-2020 ರಂದು ವಿರಾಜಪೇಟೆ ತಾಲ್ಲೂಕು ಅಮ್ಮತ್ತಿ ಒಂಟಿಯಂಗಡಿ ಗ್ರಾಮದ ನಿವಾಸಿ ಪ್ರವೀಣ್‍ ಎಂಬುವವರ ಅಂಗಡಿಯ ಬೀಗವನ್ನು ಯಾರೋ ಕಳ್ಳರು ಮುರಿದು ಒಳನುಗ್ಗಿ 14,000 ರೂ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆಕಸ್ಮಿಕವಾಗಿ ತೆರೆದ ಬಾವಿಗೆ ಬಿದ್ದು ಬಾಲಕ ಸಾವು

ದಿನಾಂಕ: 05-11-2020 ರಂದು ವಿರಾಜಪೇಟೆ ತಾಲ್ಲೂಕು ಬೂದಿಮಾಳ ಗ್ರಾಮದ ಕೊಕ್ಕಲೆ ಮಕ್ಕಿ ಎಂಬಲ್ಲಿ ಸುಲೇಮಾನ್‍ ಎಂಬುವವರು ಅವರ ಮಕ್ಕಳೊಂದಿಗೆ ಹೋಗಿ ತೋಟದಲ್ಲಿ ಕಾಡುಕಡಿಯುವ ಕೆಲಸ ಮಾಡುತ್ತಿರುವಾಗ ಮಕ್ಕಳೂ ಆಟವಾಡಿಕೊಂಡಿದ್ದರು. ಅವರ 2ನೇ ಮಗ ತೋಟದಲ್ಲಿದ್ದ ತೆರೆದ ಬಾವಿಯ ಸುತ್ತ ಕಾಡುಬೆಳೆದಿದ್ದುದನ್ನು ಗಮನಿಸದೇ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟಿದ್ದು ಈ ಬಗ್ಗೆ ನೀಡಿದ ದೂರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಕ್ಕಳು ಆಟವಾಡುವ ಸಮಯದಲ್ಲಿ ಇಂತಹ ಅನಿರೀಕ್ಷಿತ ಘಟನೆಗಳು ಜರುಗದಂತೆ, ಮಕ್ಕಳು ಎಂತಹುದೇ ಸಂದರ್ಭದಲ್ಲಿ ಯಾವುದೇ ರೀತಿಯಿಂದಲೂ ಅಪಾಯಕ್ಕೊಳಗಾಗದಂತೆ ಪೋಷಕರು ಮುಂಜಾಗ್ರತೆ ವಹಿಸಿ ತಮ್ಮ ಮಕ್ಕಳಿಗೆ ತಿಳುವಳಿಕೆ ನೀಡಬೇಕಾಗಿ ಕೋರಿಕೆ.

ರಸ್ತೆ ಅಪಘಾತ ಪ್ರಕರಣ

ದಿನಾಂಕ: 05-11-2020 ರಂದು ವಿರಾಜಪೇಟೆ ತಾಲ್ಲೂಕು ಬಿಟ್ಟಂಗಾಲ ಗ್ರಾಮದ ಬಳಿ ಮುಖ‍್ಯ ರಸ್ತೆಯಲ್ಲಿ ಕೆಎ-01-ಎಂಜೆ-0704 ರ ಕಾರನ್ನು ಅದರ ಚಾಲಕ ಬಿಪಿನ್‍ ಪೂಣಚ್ಚ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕೆಎ-12-ಆರ್‍-8938 ರ ಸ್ಕೂಟರ್‍ ಗೆ ಡಿಕ್ಕಿಪಡಿಸಿ ಪರಿಣಾಮ ಸವಾರ ಅಜಿತ್‍ ಎಂಬುವವರು ಗಾಯಗೊಂಡಿದ್ದು ಈ ಬಗ್ಗೆ ಅರವಿಂದ್‍ ಎಂಬುವವರು ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆಸ್ತಿ ವೈಷಮ್ಯ, ಗುಂಡು ಹೊಡೆದು ಕೊಲೆಗೆ ಯತ್ನ.

ಸೋಮವಾರಪೇಟೆ ತಾಲ್ಲೂಕು ಬೆಟ್ಟದಕೊಪ್ಪ ಗ್ರಾಮದ ನಿವಾಸಿ ಹೂವಯ್ಯ ಮತ್ತು ಅವರ ತಂದೆ ಹಾಗೂ ತಂಗಿಯವರೊಂದಿಗೆ ಆಸ್ತಿ  ವಿಚಾರದಲ್ಲಿ ತಕರಾರು ಇದ್ದು ಈ ಕಾರಣದಿಂದ ದಿನಾಂಕ: 05-11-2020 ರಂದು ಹೂವಯ್ಯ ರವರ ಪತ್ನಿ ಮನೆಯ ಮುಂದಿನ ರಸ್ತೆಗೆ ಹೋದಾಗ ಪಕ್ಕದ ಮನೆಯಲ್ಲಿ ವಾಸವಿರುವ ತಂದೆ ಅಯ್ಯಪ್ಪ ಎಂಬುವವರು ಕೋವಿಯೊಂದಿಗೆ ಬಂದು ಎಲ್ಲರನ್ನು ಕೊಲೆ ಮಾಡುವುದಾಗಿ ಹೇಳಿ ಪತ್ನಿಗೆ ಗುರಿ ಮಾಡಿ ಗುಂಡು ಹೊಡೆಗಾಗಿ ಅವರ ಕೈ ಮತ್ತುಎದೆಗೆ ಗುಂಡುತಾಗಿ ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ದಿನಾಂಕ: 05-11-2020 ರಂದು ಮಡಿಕೇರಿ ತಾಲ್ಲೂಕು ಮೇಕೇರಿ ಗ್ರಾಮದ ನಿವಾಸಿ ಧನೇಶ್ ಮೂರ್ತಿ ಎಂಬುವವರು ಅವರ ಕ್ಯಾಂಟಿನ್‍ ನಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಮಡಿಕೇರಿ ಗ್ರಾಮಾಂತರ ಠಾಣೆ ಪಿ.ಎಸ್‍.ಐ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.