Crime News

ವ್ಯಕ್ತಿ ಕಾಣೆ ಪ್ರಕರಣ

ದಿನಾಂಕ: 30-10-2020 ರಂದು ಸೋಮವಾರಪೇಟೆ ತಾಲ್ಲೂಕು ನೆಲ್ಯಹುದಿಕೇರಿ ಗ್ರಾಮದ ಸ್ಕೂಲ್‍ ರಸ್ತೆ ನಿವಾಸಿ ಸುರೇಶ್‍ ಎಂಬುವವರು ಕೆಲಸಕ್ಕೆ ಹೋಗಿಬರುವುದಾಗಿ ಹೇಳಿ ಮನೆಯಿಂದ ಹೊರಗೆ ಹೋದವರು ಈ ವರೆಗೂ ಮನೆಗೆ ವಾಪಾಸ್ಸು ಬಾರದೇ ಕಾಣೆಯಾಗಿದ್ದು ಈ ಬಗ್ಗೆ ದಿನಾಂಕ: 06-11-2020 ರಂದು ನೀಡಿದ ದೂರಿನ ಮೇರೆ ಸಿದ್ದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆನ್‍ ಲೈನ್‍ ವಂಚನೆ ಪ್ರಕರಣ

ದಿನಾಂಕ: 19-10-2020 ರಂದು ಸೋಮವಾರಪೇಟೆ ತಾಲ್ಲೂಕು ಚಿಕ್ಕಅಳುವಾರ ಗ್ರಾಮದ ನಿವಾಸಿ ಮಂಜ ಎಂಬುವವರ ಮೊಬೈಲ್‍ ಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದಾಗಿ ಬಂದ ಸಂದೇಶದ ಅನುಸಾರ ಅದರಲ್ಲಿದ್ದ ನಂಬರ್‍ ಗೆ ಕರೆ ಮಾಡಿ ವಿಚಾರಣೆ ಮಾಡಿದಾಗ ಅಶುಮಾ ಚೌಹಾಣ್ ಎಂಬ ಮಹಿಳೆ ಮಾತನಾಡಿ ಕ್ಯಾಪಿಟಲ್ ಇಂಡಿಯಾ ಫೈನಾನ್ಸ್ ಲಿ. ಕಂಪನಿಯಿಂದ 15 ಲಕ್ಷ ಸಾಲ ಪಡೆಯಲು ಪ್ರೊಸೆಸಿಂಗ್‍ ಚಾರ್ಜ್ ಎಂದು ಹೇಳಿ 1,20,000 ರೂ ಹಣ ಸಂದಾಯ ಮಾಡಿಸಿಕೊಂಡು ವಂಚನೆ ಮಾಡಿದ್ದು ಈ ಬಗ್ಗೆ ದಿನಾಂಕ: 06-11-2020 ರಂದು ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್‍ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅತಿಕ್ರಮ ಪ್ರವೇಶ, ಸರ್ಕಾರಿ ಕಟ್ಟಡ ದ್ವಂಸ.

ದಿನಾಂಕ: 04-11-2020 ರಂದು ವಿರಾಜಪೇಟೆ ತಾಲ್ಲೂಕು ಗೋಣಿಕೊಪ್ಪ ಮಟನ್‍ ಮಾರ್ಕೆಟ್ ಬಳಿ ಇರುವ ಸರ್ವೆ ನಂ: 14/3 ರಲ್ಲಿರುವ ಗ್ರಾಮ ಪಂಚಾಯಿತಿಗೆ ಸೇರಿದ ಕಟ್ಟಡವನ್ನು ನ್ಯಾಯಾಲಯದ ತಡೆಯಾಜ್ಞೆಯನ್ನು ಉಲ್ಲಂಘಿಸಿ ಗೋಣಿಕೊಪ್ಪ ನಿವಾಸಿ ಸೂರ್ಯ ಎಂಬುವವರು ಅಕ್ರಮ ಪ್ರವೇಶ ಮಾಡಿ ಜೆ.ಸಿ.ಬಿ ಮುಖಾಂತರ ಕಟ್ಟಡ ವನ್ನು ದ್ವಂಸಗೊಳಿಸಿ 2 ಲಕ್ಷ ನಷ್ಟ ಉಂಟುಮಾಡಿದ್ದು ಈ ಬಗ್ಗೆ ಪಿ.ಡಿ.ಒ ಶ್ರೀನಿವಾಸ್ ಎಂಬುವವರು ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ, ವ್ಯಕ್ತಿ ಸಾವು.

ದಿನಾಂಕ: 06-11-2020 ರಂದು ಸೋಮವಾರಪೇಟೆ ತಾಲ್ಲೂಕು ಆಲೂರು ಸಿದ್ದಾಪುರ ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ಕೆಎ-13-ಸಿ-8125 ರ ಗೂಡ್ಸ್ ಆಟೋವನ್ನು ಅದರ ಚಾಲಕ ಅನಿಲ್ ಕುಮಾರ್ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ವಾಹನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಲ್ಲುಗುಡ್ಡೆಗೆ ಡಿಕ್ಕಿಯಾಗಿ ಮಗುಚಿ ಬಿದ್ದುದರಿಂದ ರಾಜೇಗೌಡ ಎಂಬುವವರು ಗಾಯಗೊಂಡಿದ್ದು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದರೂ ಫಲಕಾರಿಯಾಗದೇ ಮೃತಪಟ್ಟಿದ್ದು ಈ ಬಗ್ಗೆ ಮೃತರ ಮಗ ಮಂಜುನಾಥ ಎಂಬುವವರು ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.