Crime News

ಬಸ್ಸು-ಲಾರಿ ಮುಖಾಮುಖಿ

ಮಡಿಕೇರಿ ಕೆ.ಎಸ್‍.ಆರ್‍.ಟಿ.ಸಿ. ಡಿಪೋ ಬಸ್‍ ಚಾಲಕರಾದ ಎಸ್‍. ಅಶೋಕ ಎಂಬವರು ದಿನಾಂಕ 27-6-2018 ರಂದು ಬೆಂಗಳೂರಿನ ಬಸ್ಸು ನಿಲ್ದಾಣದಿಂದ ಮಡಿಕೇರಿ ಕಡೆಗೆ ಬರುತ್ತಿದ್ದಾಗ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಬೋಯಿಕೇರಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ತಲುಪುವಾಗ್ಗೆ ಎದುರುಗಡೆಯಿಂದ ಬಂದ ಲಾರಿಯನ್ನು ಅದರ ಚಾಲಕ ಅಜಾಗರೂಕತೆಯಿಂದ ಚಲಾಯಿಸಿ ಬಸ್ಸಿಗೆ ಡಿಕ್ಕಿಪಡಿಸಿದ ಪರಿಣಾಮ ಬಸ್ಸು ಜಖಂ ಗೊಂದು ಬಸ್ಸಿನಲ್ಲಿದ್ದ ಚಾಲಕ ಎಸ್. ಅಶೋಕ ಮತ್ತು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬಾಗಿಲು ಮುರಿದು ಕಳ್ಳತನ:

ವಿರಾಜಪೇಟೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಟೋಳಿ ಗ್ರಾಮದ ನಿವಾಸಿ ಪಿ.ಎಸ್. ಸತೀಶ ಎಂಬವರಿಗೆ ಸೇರಿದ ಮನೆಗೆ ದಿನಾಂಕ 26-6-2018ರ ರಾತ್ರಿ ಯಾರೋ ಕಳ್ಳರು ಮನೆಯ ಹಿಂದಿನ ಬಾಗಿಲನ್ನು ಮುರಿದು ಒಳಗೆ ಪ್ರವೇಶ ಮಾಡಿ ಮನೆಯಲ್ಲಿಟ್ಟಿದ್ದ 90,000 ರೂ ಮೌಲ್ಯದ ಕರಿಮೆಣಸನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಸಂಬಂಧ ಫಿರ್ಯಾದಿ ಪಿ.ಎಸ್. ಸತೀಶ್ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು:

ಗೋಣಿಕೊಪ್ಪ ಠಾಣಾ ಸರಹದ್ದಿನ ಹೈಸೊಡ್ಲೂರು ಗ್ರಾಮದ ನಿವಾಸಿ ಚೇಮದೀರ ನಂಜಮ್ಮ ಎಂಬವರ ಮಗ ದರ್ಶನ್ ಎಂಬವರು ದಿನಾಂಕ 25-6-2018 ರಂದು ಸೀಗೆತೋಡು ಗ್ರಾಮದ ಪೌತಿ ಬೋಜಪ್ಪ ಎಂಬವರಿಗೆ ಸೇರಿದ ಕೆರೆಯಲ್ಲಿ ಮುಳುಗಿ ಸಾವನಪ್ಪಿದ್ದು ಈ ಸಂಬಂಧ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.