Crime News

ಅತಿಕ್ರಮ ಪ್ರವೇಶ, ಕೊಲೆ ಬೆದರಿಕೆ.

ದಿನಾಂಕ: 08-11-2020 ರಂದು ವಿರಾಜಪೇಟೆ ತಾಲ್ಲೂಕು ನಾಲ್ಕೇರಿ ಗ್ರಾಮದ ನಿವಾಸಿ ಶ್ರೀಮತಿ ರೇವತಿ ಎಂಬುವವರ ಜಾಗಕ್ಕೆ ಅಮ್ಮಂಡಿರ ಚೇತನ್‍ ಎಂಬುವವರು ಅತಿಕ್ರಮ ಪ್ರವೇಶ ಮಾಡಿ ಅಂಜಪರವಂಡ ಅನಿಲ್‍ ಎಂಬುವವರಿಗೆ ಸೇರಿದ ಜೆ.ಸಿ.ಬಿ ಯಂತ್ರದ ಮುಖಾಂತರ ಮಣ್ಣು ತೆಗೆದು ಅಂದಾಜು 25,000 ನಷ್ಟಪಡಿಸಿದ್ದು ಇದನ್ನು ಪ್ರಶ್ನಿಸಿದಾಗ ಕೋವಿ ತೋರಿಸಿ ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆನೀಡಿದ ಪುಕಾರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಜೂಜಾಟ ಪ್ರಕರಣ

ದಿನಾಂಕ: 09-11-2020 ರಂದು ವಿರಾಜಪೇಟೆ ತಾಲ್ಲೂಕು ಹೊಸಕೋಟೆ ಗ್ರಾಮದ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಜೂಜಾಟವಾಡುತ್ತಿದ್ದ ಪ್ರಕರಣವನ್ನು ವಿರಾಜಪೇಟೆ ಗ್ರಾಮಾಂತರ ಠಾಣೆ ಪಿಎಸ್‍ಐ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಆನ್‍ ಲೈನ್‍ ವಂಚನೆ ಪ್ರಕರಣ

ದಿನಾಂಕ: 10.8.2020 ರಂದು ಸೋಮವಾರಪೇಟೆ ತಾಲ್ಲೂಕು ಹೆಬ್ಬಾಲೆ ಗ್ರಾಮದ ನಿವಾಸಿ ನವೀನ್‍ ಶ್ರೀಕಾಂತ್‍ ಎಂಬುವವರು www.digitalcspindia.in ಎಂಬ ವೆಬ್‍ ಸೈಟ್‍ ಮುಖಾಂತರ ಸಾರ್ವಜನಿಕರಿಗೆ ಪಾನ್ ಕಾರ್ಡ್‍ ಹಾಗೂ ವಾಹನ ವಿಮೆ ಮಾಡಿಸುವ ಸಂಸ್ಥೆ ತೆರೆಯಲು ನೋಂದಣಿ ಮಾಡಿಕೊಂಡಿದ್ದರು. ನಂತರ ನವೀನ್‍ ಎಂಬ ವ್ಯಕ್ತಿ 7044865548 ಸಂಖ‍್ಯೆಯಿಂದ ಕರೆಮಾಡಿ ಸಂಸ್ಥೆ ನೊಂದಾಯಿಸಲು ಮುಂಗಡ ಹಣ ಪಾವತಿಸಲು ತಿಳಿಸಿದ ಮೇರೆ ಹಂತ ಹಂತವಾಗಿ ಒಟ್ಟು 1,43,750 ರೂ ಹಣವನ್ನು ಸಂದಾಯ ಮಾಡಿದ್ದು ನಂತರ ಯಾವುದೇ ನೋಂದಣಿ ಮಾಡದೇ ಹಣವನ್ನು ಸಹಾ ಹಿಂದಿರುಗಿಸದೇ ಮೋಸ ಮಾಡಿದ್ದು ಈ ಬಗ್ಗೆ ದಿನಾಂಕ: 09-11-2020 ರಂದು ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್‍ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸಾರ್ವಜನಿಕರು ಆನ್ ಲೈನ್ ಮೂಲಕ ಹಣಕಾಸು ವ್ಯವಹಾರ ಮಾಡುವಾಗ ಜಾಗ್ರತೆ ವಹಿಸುವುದು ಅವಶ್ಯಕ. ಬ್ಯಾಂಕ್ ಅಥವಾ ಇತರೆ ಹಣಕಾಸು ಸಂಸ್ಥೆಗಳ ಹೆಸರಿನಲ್ಲಿ ಕರೆ ಮಾಡಿ ಮೋಸದಿಂದ ಆನ್ ಲೈನ್ ಮೂಲಕ ಹಣ ವರ್ಗಾವಣೆ ಮಾಡಿಕೊಂಡು ಸಾರ್ವಜನಿಕರಿಗೆ ವಂಚನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದೆ. ಯಾವುದೇ ಸಂಸ್ಥೆಯೊಂದಿಗೆ ವ್ಯವಹಾರ ಮಾಡುವಾಗ ಅವುಗಳ ಪೂರ್ವಾಪರ ತಿಳಿದುಕೊಂಡು ವ್ಯವಹರಿಸುವುದು. ನಿಮ್ಮ ಕೆಲಸ ಪೂರ್ಣಗೊಳ್ಳದೆ ಮಾತಿಗೆ ಮರುಳಾಗಿ ಮುಂಚಿತವಾಗಿ ಹಣ ವರ್ಗಾವಣೆ ಮಾಡುವುದು ಸೂಕ್ತವಲ್ಲ.