Crime News

ರಸ್ತೆ ಅಪಘಾತ

ದಿನಾಂಕ 09/11/2020 ರಂದು ಮೈಸೂರಿನ ನಿವಾಸಿ ಗೌರೀಶ್‌ ಎಂಬವರು ಅವರ ಸ್ನೇಹಿತರೊಡನೆ ಇನ್ನೋವಾ ಕಾರಿನಲ್ಲಿ ಮೈಸೂರಿನಿಂದ ಧರ್ಮಸ್ಥಳಕ್ಕೆ ಹೋಗುತ್ತಿರುವಾಗ ಸಂಪಾಜೆ ಬಳಿಯ ದೇವರಕೊಲ್ಲಿ ಬಳಿ ಎದುರಿನಿಂದ ಒಂದು ಕಂಟೈನರ್‌ ಲಾರಿಯನ್ನು ಅದರ ಚಾಲಕ ದಾಮೋದರ ಎಂಬಾತನು ಅತಿ ವೇಗ ಮತ್ತು ಅಜಾಘರೂಕತೆಯಿಂದ ಚಾಲಿಸಿಕೊಂಡು ಬಂದು ಗೌರೀಶ್‌ರವರು ಚಾಲಿಸುತ್ತಿದ್ದ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರು ರಸ್ತೆ ಬದಿಯಲ್ಲಿ ಮಗುಚಿಕೊಂಡು ಹಾಣಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಮನೆ ಕಳವು ಪ್ರಕರಣ

ನಾಪೋಕ್ಲು ಬಳಿಯ ಕೊಟ್ಟಮುಡಿ ಬಳಿಯ ಹೊದವಾಡ ನಿವಾಸಿ ತಾಜುದ್ದೀನ್‌ ಎಂಬವರು ದಿನಾಂಕ 09/11/2020ರಂದು ಮೈಸೂರಿಗೆ ಹೋಗಿ ದಿನಾಂಕ 10/11/2020 ರಂದು ಮರಳಿ ಮನೆಗೆ ಬಂದು ನೋಡುವಾಗ ಯಾರೋ ಕಳ್ಳರು ಮನೆಯ ಮುಂಬಾಗಿಲಿನ ಬೀಗ ಮುರಿದು ಬಾಗಿಲು ತೆರೆದು ಒಳ ನುಗ್ಗಿ ಮನೆಯೊಳಗಿನ ಬೀರುವಿನಲ್ಲಿದ್ದ ಸುಮಾರು ರೂ. 1.45 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 09/11/2020ರಂದು ವಿರಾಜಪೇಟೆ ಬಳಿಯ ರುದ್ರಗುಪ್ಪೆ ನಿವಾಸಿ ಪಣಿ ಎರವರ ಧರ್ಮ ಎಂಬವರೊಡನೆ ನೆರೆಮನೆಯ ಗಣೇಶ ಎಂಬಾತನು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ದಬ್ಬೆ ಕತ್ತಿಯಿಂದ ಧರ್ಮರವರ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿ ತಡೆಯಲು ಬಂದ ಧರ್ಮರವರ ತಾಯಿ ಕಮಲ ಎಂಬವರ ಮೇಲೆ ದಬ್ಬೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಸಿ ತನಿಖೆ ಕೈಗೊಂಡಿದ್ದಾರೆ.