Crime News

ಅಕ್ರಮ ಗಾಂಜಾ ಸಾಗಾಟ ಪ್ರಕರಣ

ಜಿಲ್ಲೆಯ ವಿರಾಜಪೇಟೆ ನಗರದ ಪಂಜರ್ ಪೇಟೆಯಲ್ಲಿ ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನಿಸಿದ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ ವಿರಾಜಪೇಟೆ ನಗರ ಪೊಲೀಸರು ಆರೋಪಗಳನ್ನು ಮಾಲು ಸಮೇತ ಬಂಧಿಸಿದ್ದಾರೆ.

ದಿನಾಂಕ 12.11.2020 ರಂದು ವಿರಾಜಪೇಟೆ ಠಾಣಾಧಿಕಾರಿ ಹೆಚ್.ಎಸ್.ಬೋಜಪ್ಪ ರವರಿಗೆ ಬಂದ ಮಾಹಿತಿ ಮೇರೆಗೆ ಠಾಣ ವಿರಾಜಪೇಟೆ ನಗರದ ಪಂಜರಪೇಟೆಯ ವಿರಾಜಪೇಟೆ ಗೋಣಿಕೊಪ್ಪ ಮುಖ್ಯ ರಸ್ತೆಯ ಎಡಭಾಗದಲ್ಲಿ ಗಾಂಜಾ ಮಾರಾಟ ಮಾಡಲು ಮೋಟಾರ್ ಬೈಕ್ ನೊಂದಿಗೆ ನಿಂತುಕೊಂಡಿದ್ದ ನಾಲ್ಕು ಜನ ಆರೋಪಿಗಳಾದ ಮಹಮದ್ ಅಲ್ತಾಫ್, ತಂದೆ ದಿ: ಅಬ್ದುಲ್ ಲತೀಫ್, ಪ್ರಾಯ 37 ವರ್ಷ, ಬೇಕರಿ ಕೆಲಸ, ಹಾಲಿ ವಾಸ ಉದಯಗಿರಿ ಮೈಸೂರು, ಅಬ್ದುಲ್ ಮುನಾಫ್,ತಂದೆ ದಿ: ಉಮ್ಮರ್, 36 ವರ್ಷ ಹಾಲಿ ಮೈಸೂರು ಜನತಾ ನಗರ ಸ್ವಂತ ಊರು ಕಲ್ಲುಬಾಣೆ ವಿರಾಜಪೇಟೆ, ಅಭಿಷೇಕ್, ತಂದೆ ಪೌತಿ ಲೋಕೇಶ್,ಪ್ರಾಯ 25 ವರ್ಷ ಕೂಲಿ ಕೆಲಸ, ಸುಂಕದಕಟ್ಟೆ ವಿರಾಜಪೇಟೆ, ಕೆ.ಬಿ. ಶಫೀಕ್ ತಂದೆ ಕೆ.ಎಂ ಬಶೀರ್, 22 ವರ್ಷ, ಅರ್ಜಿ ಗ್ರಾಮ, ವಿರಾಜಪೇಟೆ ಇವರುಗಳನ್ನು ವಶಕ್ಕೆ ಪಡೆದು ಇವರುಗಳಿಂದ ಒಟ್ಟು 2 ಕೆಜಿ 50 ಗ್ರಾಂ ತೂಕದ ಗಾಂಜಾ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಒಂದು ಮೋಟಾರ್ ಬೈಕ್ ವಶಪಡಿಸಿ ಕೊಂಡಿದ್ದಾರೆ.

ಕಾರ್ಯಾಚರಣೆಯನ್ನು ವಿರಾಜಪೇಟೆ ಡಿವೈ.ಎಸ್.ಪಿ ಜಯಕುಮಾರ್ ರವರ ನಿರ್ದೇಶನದಂತೆ ವಿರಾಜಪೇಟೆ ಸಿಪಿಐ ಕ್ಯಾತೇಗೌಡ ರವರ ಮತ್ತು ನಗರ ಠಾಣೆಯ ಪಿಎಸ್ಐ ಹೆಚ್.ಎಸ್. ಬೋಜಪ್ಪನವರ ನೇತೃತ್ವದಲ್ಲಿ ನಡೆಸಿದ್ದು ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಟಿ.ಟಿ.ಮಧು, ಎನ್.ಎಸ್.ಲೋಕೇಶ, ಟಿ.ಎಸ್. ಗಿರೀಶ್, ಪಿ.ಎಂ.ಮುಸ್ತಫ ಮತ್ತು ಚಾಲಕ ಯೋಗೇಶ್ ಪಾಲ್ಗೊಂಡಿದ್ದು ಇವರ ಕಾರ್ಯವೈಖರಿಯನ್ನು ಪ್ರಶಂಸಿಸಲಾಗಿದೆ.

 ವಿದ್ಯುತ್‍ ತಂತಿ ತಗುಲಿ ಜಾನುವಾರು ಸಾವು

ದಿನಾಂಕ: 12-11-2020 ರಂದು ವಿರಾಜಪೇಟೆ ತಾಲ್ಲೂಕು ಮತ್ತೂತು ಗ್ರಾಮದ ನಿವಾಸಿ ಸ್ಮರಣ್ ಸುಭಾಷ್ ಎಂಬುವವರಿಗೆ ಸೇರಿದ ಹಸುವಿನ ಮೇಲೆ  ವಿದ್ಯುತ್ ತಂತಿ ತುಂಡಾಗಿ ಬಿದ್ದು ವಿದ್ಯುತ್ ಸ್ಪರ್ಷಗೊಂಡು ಮೃತಪಟ್ಟಿರುತ್ತದೆ. ಹಸುವಿನ ಸಾವಿಗೆ ವಿದ್ಯುತ್‍ ಇಲಾಖೆಯ ನಿರ್ಲಕ್ಷತೆ ಕಾರಣ ಎಂಬದಾಗಿ ಸೆಸ್ಕ್‍ ಅಧಿಕಾರಿಗಳ ವಿರುದ್ದ ನೀಡಿದ ಪುಕಾರಿನ ಮೇರೆ ಪೊನ್ನಂಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಅಕ್ರಮ ಮದ್ಯ ಮಾರಾಟ ಪ್ರಕರಣ

ದಿನಾಂಕ: 12-11-2020 ರಂದು ಸೋಮವಾರಪೇಟೆ ತಾಲ್ಲೂಕು ನಲ್ಲೂರು  ಗ್ರಾಮದ  ನಿವಾಸಿ ಪ್ರದೀಪ್ ಎಂಬುವವರು ಅವರ ಮನೆಯ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ  ಅಕ್ರಮವಾಗಿ ಸಾರ್ವಜನಿಕರಿಗೆ ಸೇವನೆಗೆ ಅವಕಾಶ ಮಾಡುತ್ತಿದ್ದ ಪ್ರಕರಣವನ್ನು ಕುಶಾಲನಗರ ಗ್ರಾಮಾಂತರತ ಠಾಣೆ ಪಿಎಸ್‍ಐ ಶಿವಶಂಕರ್ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.