Crime News

ಅಕ್ರಮ ಜೂಜಾಟ ಪ್ರಕರಣ

ದಿನಾಂಕ: 15-11-2020 ರಂದು ವಿರಾಜಪೇಟೆ ತಾಲ್ಲೂಕು ಕೆದಮುಳ್ಳೂರು ಗ್ರಾಮದ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಇಸ್ಪೀಟ್‍ ಜೂಜಾಟವಾಡುತ್ತಿದ್ದ ಪ್ರರಕಣವನ್ನು ವಿರಾಜಪೇಟೆ ವೃತ್ತ ನಿರೀಕ್ಷಕರು ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

 ಸ್ಕೂಟರ್ ಗೆ ಲಾರಿ ಡಿಕ್ಕಿ, ಸವಾರ ಸಾವು.

ದಿನಾಂಕ: 15-11-2020 ರಂದು ವಿರಾಜಪೇಟೆ ಪಟ್ಟಣದ ಪಂಜರ ಪೇಟೆ ಬಳಿ ಮುಖ್ಯ ರಸ್ತೆಯಲ್ಲಿ ಕೆಎ-12-ಬಿ-1374 ರ ಲಾರಿಯನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಕೆಎ-51-ಹೆಚ್ಇ-0152 ರ ಸ್ಕೂಟರ್‍ ಗೆ ಡಿಕ್ಕಿಪಡಿಸಿದ ಪರಿಣಾಮ ಸವಾರ ಗಾಯಗೊಂಡು ಮೃತಪಟ್ಟಿದ್ದು ಈ ಬಗ್ಗೆ ಪವನ್‍ ಎಂಬುವವರು ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ವ್ಯಕ್ತಿ ಕಾಣೆ ಪ್ರಕರಣ

ದಿನಾಂಕ: 12-11-2020 ರಂದು ಸೋಮವಾರಪೇಟೆ ತಾಲ್ಲೂಕು ಕೊಡಗರಹಳ್ಳಿ ಗ್ರಾಮದ ನಿವಾಸಿ ನವೀನ್‍ ಎಂಬುವವರು ಯಾರಿಗೂ ಹೇಳದೇ ಮನೆಯಿಂದ ಹೊರೆಗೆ ಹೋದವರು ಈವರೆಗೂ ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿದ್ದು ಈ ಬಗ್ಗೆ ತಂದೆ ಚಂದ್ರ ಎಂಬುವವರು ನೀಡಿದ ದೂರಿನ ಮೇರೆ ಸುಂಟಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.