Crime News
ರಸ್ತೆ ಅಪಘಾತ ಪ್ರಕರಣ
ದಿನಾಂಕ: 17-11-2020 ರಂದು ಮಡಿಕೇರಿ ತಾಲ್ಲೂಕು ಜೋಡುಪಾಲ ಗ್ರಾಮದ ಬಳಿ ಹೆದ್ದಾರಿ ರಸ್ತೆಯಲ್ಲಿ ಕೆಎ-19-ಬಿ-9575 ರ ಲಾರಿಯನ್ನು ಅದರ ಚಾಲಕ ದೇವರಾಜ್ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆ ಬದಿಯ ಬರೆಗೆ ಡಿಕ್ಕಿಪಡಿಸಿದ ಪರಿಣಾಮ ಲಾರಿಯಲ್ಲಿದ್ದ ಅನೋಜ್ ಎಂಬುವವರುಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಹಲ್ಲೆ ಪ್ರಕರಣ
ದಿನಾಂಕ: 13-11-2020 ರಂದು ಮಡಿಕೇರಿ ತಾಲ್ಲೂಕು ಹೊದವಾಡ ಗ್ರಾಮದ ಬೊಳಿಬಾಣೆ ನಿವಾಸಿ ಮ್ಯಾಥ್ಯೂ ಎಂಬುವವರ ತೋಟಕ್ಕೆ ದಾಮೋದರ ಆಚಾರಿ ಮತ್ತು ಕುಟುಂಬದವರು ಅಕ್ರಮ ಪ್ರವೇಶ ಮಾಡಿ ಬೇಲಿಯನ್ನು ಮುರಿದು ನಾಶಪಡಿಸಿ, ಮನೆಯ ಬಾಗಿಲಿನ ಬೀಗ ಮುರಿದು ಗೋದಾಮಿನಲ್ಲಿದ್ದ ತಂತಿಯನ್ನು ಹಾಗೂ ಅಡಿಕೆ ಮರದಲ್ಲಿದ್ದ ಅಡಿಕೆಯನ್ನು ಕಳವು ಮಾಡಿದ್ದು ಈ ಬಗ್ಗೆ ಕೇಳಲು ಹೋದಾಗ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ದಿನಾಂಕ: 17-11-2020 ರಂದು ನೀಡಿದ ಪುಕಾರಿನ ಮೇರೆ ನಾಪೋಕ್ಲು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಆನ್ಲೈನ್ ವಂಚನೆ ಪ್ರಕರಣ
ದಿನಾಂಕ: 09-11-2020 ರಂದು ವಿರಾಜಪೇಟೆ ತಾಲ್ಲೂಕು ಹೊಸಕೋಟೆ ಗ್ರಾಮದ ನಿವಾಸಿ ಅಜಯ್ ಎಂಬುವವರಿಗೆ ದೂರವಾಣಿ ಕರೆಮಾಡಿದ ವ್ಯಕ್ತಿಯೊಬ್ಬ ಶ್ರೀಕಾಂತ್ ಎಂಬುದಾಗಿ ಪರಿಚಯಿಸಿಕೊಂಡು ಡಿಜಿಟಲ್ ಸಿಎಸ್ಸಿ ಇಂಡಿಯಾ ಬ್ಯಾಂಕಿಂಗ್ ಸರ್ವಿಸ್ ನಲ್ಲಿ ರಿಜಿಸ್ಟ್ರೇಷನ್ ಮಾಡಿಸಿಕೊಡುವುದಾಗಿ ಹೇಳಿ ನಂಬಿಸಿ ಹಂತ ಹಂತವಾಗಿ 1,20,000 ರೂ ಹಣವನ್ನು ಆತನ ಖಾತೆ ಸಂದಾಯ ಮಾಡಿಕೊಂಡು ವಂಚನೆ ಮಾಡಿದ್ದು ಈ ಬಗ್ಗೆ ದಿನಾಂಕ: 17-11-2020 ರಂದು ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್ ಅಪರಾಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಬೈಕ್ ಡಿಕ್ಕಿ, ಪಾದಚಾರಿಗೆ ಗಾಯ.
ದಿನಾಂಕ: 17-11-2020 ರಂದು ಸೋಮವಾರಪೇಟೆ ತಾಲ್ಲೂಕು ಕೂಡುಮಂಗಳೂರು ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ಕೆಎ-13-ಇಎಸ್-3878 ರ ಬೈಕನ್ನು ಅದರ ಸವಾರ ಶರತ್ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ರಮೇಶ್ ಎಂಬುವವರಿಗೆ ಡಿಕ್ಕಿಪಡಿಸಿದ ಪರಿಣಾಮ ಪಾದಚಾರಿ ರಮೇಶ್ ಮತ್ತು ಸವಾರ ಶರತ್ ಗಾಯಗೊಂಡಿದ್ದು ಈ ಬಗ್ಗೆ ಮಹೇಶ್ ಎಂಬುವವರು ನೀಡಿದ ಪುಕಾರಿನ ಮೇರೆ ಕುಶಾಲನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಹಲ್ಲೆ ಪ್ರಕರಣ
ದಿನಾಂಕ: 16-11-2020 ರಂದು ಸೋಮವಾರಪೇಟೆ ತಾಲ್ಲೂಕು ಕೊಡ್ಲಿಪೇಟೆ ಗ್ರಾಮದ ನಿವಾಸಿ ಸಂದೀಪ್ ಎಂಬುವವರಿಗೆ ದರ್ಶನ್ ಎಂಬುವವರು ವೈಯಕ್ತಿಕ ವೈಷಮ್ಯದಿಂದ ಕತ್ತಿಯಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆನೀಡಿದ ಪುಕಾರಿನ ಮೇರೆ ಶನಿವಾರಸಂತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.