Crime News

ಬೈಕ್‍ ಅಪಘಾತ, ಸವಾರ ಸಾವು.

ದಿನಾಂಕ: 18-11-2020 ರಂದು ಸೋಮವಾರಪೇಟೆ ತಾಲ್ಲೂಕು ಹುಲುಸೆ ಗ್ರಾಮದ ಬಳಿ ಹೆದ್ದಾರಿ ರಸ್ತೆಯಲ್ಲಿ ಕೆಎ-12-ಎಸ್-8159 ರ ಬೈಕನ್ನು ಸವಾರ ಶರತ್‍ ಕುಮಾರ್‍ ಎಂಬುವವರು ಅತಿವೇಗ ಮತ್ತ ಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದುದರಿಂದ ತೀವ್ರವಾಗಿ ಗಾಯಗೊಂಡವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬೈಕ್‍ ಸವಾರ ಮೃತಪಟ್ಟಿದ್ದು ಈ ಬಗ್ಗೆ ನೀಡಿದ ದೂರಿನ ಮೇರೆ ಕುಶಾಲನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಕಳವು ಪ್ರಕರಣ

ದಿನಾಂಕ: 17-11-2020 ರಂದು ಸೋಮವಾರಪೇಟೆ ತಾಲ್ಲೂಕು ಐಗೂರು ಗ್ರಾಮದ ನಿವಾಸಿ ರವಿ ಎಂಬುವವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ಮನೆಯ ಮೇಲ್ಛಾವಣಿ ಹಂಚನ್ನು ತೆಗೆದು ಒಳನುಗ್ಗಿ ಗಾಡ್ರೆಜ್‍ ಬೀರುವಿನಲ್ಲಿಟ್ಟಿದ್ದ 23,000 ರೂ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಅಕ್ರಮ ಗಾಂಜಾ ಸಾಗಾಟ ಪ್ರಕರಣ

ದಿನಾಂಕ 19.11.2020 ರಂದು ಅಕ್ರಮ ಮಾರಾಟಕ್ಕೆ ಕುಶಾಲನಗರದಿಂದ ಸುಂಟಿಕೊಪ್ಪಕ್ಕೆ KA12R6705 ಮೋಟಾರ್ ಸೈಕಲ್ ನಲ್ಲಿ ಗಾಂಜಾ ತೆಗೆದುಕೊಂಡು ಬರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸುಂಟಿಕೊಪ್ಪ ಠಾಣಾ ಪಿ.ಎಸ್.ಐ ಪುನೀತ್ ಡಿ.ಎಸ್ ರವರು ಠಾಣಾ ಸಿಬ್ಬಂದಿಗಳಾದ ಗಣೇಶ್,ಶ್ರೀನಿವಾಸ್,ಖಾದರ್,ಸತೀಶ್,ಪುನೀತ್,ಉದಯ್ ಕುಮಾರ್ ರವರೊಂದಿಗೆ ದಾಳಿ ಮಾಡಿ ಆರೋಪಿಗಳಾದ ಕುಶಾಲನಗರ ಮಾದಾಪಟ್ಟಣ ನಿವಾಸಿಗಳಾದ ವಿಜಯ್ ಕುಮಾರ್ ಮತ್ತು ಕಿರಣ್ ರವರನ್ನು 7ನೇ ಹೊಸಕೋಟೆ ಮೆಟ್ನಳ್ಳ ಜಂಕ್ಷನ್ ನಲ್ಲಿ ಹಿಡಿದು 20 ಪ್ಯಾಕೆಟ್ ಗಾಂಜಾ ವಶಪಡಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.