Crime News

ಕಳವು ಪ್ರಕರಣ

ದಿನಾಂಕ 25-06-2018 ರ ರಾತ್ರಿ ಸಮಯದಲ್ಲಿ ಸೋಮವಾರಪೇಟೆಯಲ್ಲಿರುವ ಬಿ.ಟಿ.ಸಿ.ಜಿ ಪದವಿ ಪೂರ್ವ ಕಾಲೇಜಿನ ಕಚೇರಿ ಮತ್ತು ಪ್ರಾಂಶುಪಾಲರ ಕೊಠಡಿಯ ಬೀಗವನ್ನು ಮುರಿದು ಒಳ ನುಗ್ಗಿ ಪುಸ್ತಕಗಳು, ಬೀಗ, ಕೀಗಳು, 250 ರೂ ನಗದು ಹಣ, ಒಂದು ಮೊಬೈಲ್, ಎಸ್.ಎಸ್.ಎಲ್.ಸಿ ಯ ಅಂಕಪಟ್ಟಿಗಳನ್ನು ಯಾರೋ ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ದಿನಾಂಕ 28-06-2018 ರಂದು ಪ್ರಾಂಶುಪಾಲರಾದ ಶರಣ್ ರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರರಕಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

ದಿನಾಂಕ 28-06-2018 ರಂದು ಮಂಗಳೂರಿನ ನಿವಾಸಿ ಎಡ್ಮಂಡ್ ಡಿಸೋಜ ಎಂಬುವವರು ಬೆಂಗಳೂರಿಗೆ ಕಾರಿನಲ್ಲಿ ಹೋಗುತ್ತಿರುವಾಗ ಸುಂಟಿಕೊಪ್ಪದ 7ನೇ ಹೊಸಕೋಟೆ ಎಂಬಲ್ಲಿಗೆ ತಲುಪುವಾಗ ಹಿಂದಿನಿಂದ ಬಂದ ಕಾರನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿಪಡಿಸಿದ ಪರಿಣಾಮ ಕಾರಿನ ಹಿಂಭಾಗ ಜಖಂಗೊಂಡಿದ್ದು ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹೆಂಗಸು ನಾಪತ್ತೆ

ದಿನಾಂಕ 27-06-2018 ರಂದು ಮಡಿಕೇರಿ ತಾಲೂಕಿನ ಬೇತು ಗ್ರಾಮದ ನಿವಾಸಿಯಾದ ರಾಮೇಗೌಡ ಎಂಬುವವರ ತಾಯಿ 68 ವರ್ಷ ಪ್ರಾಯದ ಜಯಮ್ಮ ಎಂಬುವವರು ಮಾನಸಿಕ ಅಸ್ವಸ್ಥರಾಗಿದ್ದವರು ಮನೆಯಿಂದ ಕಾಣೆಯಾಗಿದ್ದು  ಈ ಬಗ್ಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.