Crime News
ರಸ್ತೆ ಅಪಘಾತ, ಬೈಕ್ ಸವಾರ ಸಾವು.
ದಿನಾಂಕ: 20-11-2020 ರಂದು ಸೋಮವಾರಪೇಟೆ ಪಟ್ಟಣದ ಬಾಣಾವಾರ ರಸ್ತೆಯ ಕೆ.ಇ.ಬಿ ಜಂಕ್ಷನ್ ಬಳಿ ಕೆಎ-12-ಎಸ್-0252 ರ ಬೈಕನ್ನು ಅದರ ಸವಾರ ರಕ್ಷಿತ್ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಸ್ಕೂಟರ್ ಗೆ ಡಿಕ್ಕಿಪಡಿಸಿ ನಂತರ ರಸ್ತೆ ಬದಿಯ ಮೋರಿಗೆ ಡಿಕ್ಕಿಯಾಗಿದ್ದರಿಂದ ಗಾಯಗೊಂಡವನನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು ಈ ಬಗ್ಗೆ ಮಂಜುನಾಥ್ ಎಂಬುವವರು ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ರಸ್ತೆ ಅಪಘಾತ ಪ್ರಕರಣ
ದಿನಾಂಕ: 20-11-2020 ರಂದು ಮಡಿಕೇರಿ ತಾಲ್ಲೂಕು ಬೆಟ್ಟಗೇರಿ ಗ್ರಾಮದ ಬಳಿ ಮುಖ್ಯು ರಸ್ತೆಯಲ್ಲಿ ಕೆಎ-02-ಹೆಚ್ಎಕ್ಸ್-0803 ಸ್ಕೂಟರನ್ನು ಅದರ ಸವಾರ ಕಾರ್ತಿಕ್ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಆಟೋ ರಿಕ್ಷಾಕ್ಕೆ ಡಿಕ್ಕಿಪಡಿಸಿ ಬಿದ್ದ ಪರಿಣಾಮ ಸ್ಕೂಟರ್ ಸವಾರ ಗಾಯಗೊಂಡಿದ್ದು ಈ ಬಗ್ಗೆ ಆಟೋ ರಿಕ್ಷಾ ಚಾಲಕ ಲಿತನ್ ಎಂಬುವವರು ನೀಡಿದ ಪುಕಾರಿ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.