News

ಜಿಲ್ಲಾ ಪೊಲೀಸರಿಂದ ಜನಜಾಗೃತಿ ಜಾಥಾ:
           ಸಾಂಕ್ರಾಮಿಕ ಪಿಡುಗಾಗುತ್ತಿರುವ ಕೋವಿಡ್-19 ಸೋಂಕಿನ ವಿರುದ್ಧ, ಮಾದಕ ದ್ರವ್ಯ ಸೇವನೆಯಂತಹ ದುಶ್ಚಟಗಳ ವಿರುದ್ಧ ಹಾಗು ಇತ್ತೀಚೆಗೆ ಹೆಚ್ಚುತ್ತಿರುವ ಸೈಬರ್ ಅಪರಾಧಗಳಿಗೆ ಬಲಿಯಾಗದಂತೆ ಸಾರ್ವಜನಿಕ ರಲ್ಲಿ ಜನಜಾಗೃತಿ ಮೂಡಿಸುವ ವಾಹನ ಜಾಥಾವನ್ನು ಪೊಲೀಸ್ ಇಲಾಖಾ ವತಿಯಿಂದ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕರವ ರಾದ ಶ್ರೀ ವಿಪುಲ್ ಕುಮಾರ್, ಐಪಿಎಸ್ ರವರ ನೇತೃತ್ವದಲ್ಲಿ ಇಂದು ಮಡಿಕೇರಿ ನಗರದಲ್ಲಿ ಕೈಗೊಳ್ಳಲಾಯಿತು.
ಕೋವಿಡ್-19 ಸೋಂಕಿನ ವಿರುದ್ಧ ತೆಗೆದುಕೊಳ್ಳಬೇಕಾಗ ಮುನ್ನೆಚ್ಚರಿಕೆ ಬಗ್ಗೆ, ಮಾದಕ ವಸ್ತು ಸೇವನೆಯ ಬಗ್ಗೆ ದುಷ್ಪರಿಣಾಮಗಳ ಬಗ್ಗೆ ಮತ್ತು ಸೈಬರ್ ಅಪರಾಧಗಳಿಗೆ ಬಲಿಯಾಗದಂತೆ ಜಾಗೃತಿ ಮೂಡಿಸುವ ಘೋಷಣಾ ಪತ್ರಗಳನ್ನು ಪೊಲೀಸ್ ಇಲಾಖೆಯ ವಿವಿಧ ವಾಹನಗಳಿಗೆ ಅಳವಡಿಸಿ ಜಿಲ್ಲಾ ಪೊಲೀಸ್ ಕಛೇರಿಯಿಂದ ಪ್ರಾರಂಭ ಗೊಂಡು ನಗರದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಇದೇ ಸಂದರ್ಭದಲ್ಲಿ ಜಾಥಾವು ನಗರದ ಕೋವಿಡ್ ಆಸ್ಪತ್ರೆ ಬಳಿ ತೆರಳಿ ಕೊರೋನಾ ವಾರಿಯರ್ಸ್ ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯಕೀಯ ಇಲಾಖೆಯ ಸಿಬ್ಬಂದಿಗಳಿಗೆ ಚಪ್ಪಾಳೆ ತಟ್ಟುವ ಮೂಲಕ ಅಭಿನಂದನೆಯನ್ನು ಸಲ್ಲಿಸಲಾಯಿತು.
ಜನ ಜಾಗೃತಿ ಜಾಥಾಕ್ಕೆ ದಕ್ಷಿಣ ವಲಯ ಐಜಿಪಿ ಶ್ರೀ ವಿಪುಲ್ ಕುಮಾರ್ ರವರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಕ್ಷಮಾ ಮಿಶ್ರಾ, ಐಪಿಎಸ್ ರವರು ಹಾಗು ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.

CRIME NEWS

ವ್ಯಕ್ತಿ ಆತ್ಮಹತ್ಯೆ

ದಿನಾಂಕ: 21-11-2020 ರಂದು ವಿರಾಜಪೇಟೆ ತಾಲ್ಲೂಕು ಕರಡ ಗ್ರಾಮದ ನಿವಾಸಿ ಅಮೀರ್‍ ಎಂಬುವವರು ವೈಯಕ್ತಿಕ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಅಸ್ವಸ್ಥಗೊಂಡವರನ್ನು ಚಿಕಿತ್ಸೆ ಆಸ್ಪತ್ರೆಗೆ ದಾಖಲಿಸದರೂ ಸಹಾ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಈ ಬಗ್ಗೆ ಮೃತರ ಪತ್ನಿ ನೀಡಿದ ದೂರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಕಾಣೆ ಪ್ರಕರಣ

ದಿನಾಂಕ: 22-11-2020 ರಂದು ವಿರಾಜಪೇಟೆ ತಾಲ್ಲೂಕು ಕೋತೂರು ಗ್ರಾಮದ ನಿವಾಸಿ ಹೆಮ್ಮಚ್ಚಿಮನೆ ಗಣೇಶ್‍ ಎಂಬುವವರು ಮನೆಯಿಂದ ಹೊರಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈ ವರೆಗೂ ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿದ್ದು ಈ ಬಗ್ಗೆ ನೀಡಿದ ದೂರಿನ ಮೇರೆ ಕುಟ್ಟ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.