Crime News

ಕಳವು ಪ್ರಕ್ರಣ

ದುಬಾರೆ ಮೀಸಲು ಆರಣ್ಯ ವ್ಯಾಪ್ತಿಯ ಮಾಲ್ದಾರೆ ಅರಣ್ಯ ಅಂಚಿನಲ್ಲಿರುವ ಕರಡಿಗೋಡು ಗ್ರಾಮದ ಏರೋಲ್ ಜೇಮ್ಸ್ ಫಾಯಸ್ ಎಂಬುವವರ ಕಾಫಿ ತೋಟದಲ್ಲಿರುವ ಮರಕ್ಕೆ ಆನೆಗಳ ಚಲನ ವಲನ ಗಮನಿಸುವ ಸಂಬಂದ ಅರಣ್ಯ ಇಲಾಖೆಯವರು 6000 ರೂ ಬೆಲೆಯ ಕ್ಯಾಮೆರಾವನ್ನು ದಿನಾಂಕ 22-06-2018 ರಂದು ಅಳವಡಿದ್ದು, ಸದರಿ ಕ್ಯಾಮೆರಾವನ್ನು ಯಾರೋ ಕಳವು ಮಾಡಿದ್ದು, ಈ ಬಗ್ಗೆ ಮಾಲ್ದಾರೆ ಶಾಖೆಯ ಉಪ ವಲಯ ಅರಣ್ಯಾಧಿಕಾರಿಯವರಾದ ಮಂಜುನಾಥ್ ಗೂಳಿಯವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

ದಿನಾಂಕ 28-06-2018 ರಂದು ಸುಂಟಿಕೊಪ್ಪಲುವಿನ ಕಲ್ಲೂರು ಗ್ರಾಮದ ನಿವಾಸಿಯಾದ ರಾಜೇಶ್ ಎಂಬುವವರು ಮಾರುತಿ 800 ಕಾರಿನಲ್ಲಿ ನಾಕೂರು ಶಿರಂಗಾಲ ಗ್ರಾಮದ ನಿವಾಸಿಯಾದ ಸುರೇಶ, ಅವರ ಪತ್ನಿ ವಿನುತಾ, ಮಕ್ಕಳಾದ ಅಕುಲ್ ಮತ್ತು ದೀಕ್ಷಾರವರನ್ನು ಕೂರಿಸಿಕೊಂಡು ಸುಂಟಿಕೊಪ್ಪಕ್ಕೆ ಹೋಗುತ್ತಿರುವಾಗ 7ನೇ ಹೊಸಕೋಟೆಯ ಮೆಟ್ನಳ್ಳ ಜಂಕ್ಷನ್ ನ ಹತ್ತಿರ ತಲುಪುವಾಗ ಎದುರುಗಡೆಯಿಂದ ಗೂಡ್ಸ್ ಆಟೋ ರಕ್ಷಾವನ್ನು ಅದರ ಚಾಲಕ ಕುಶಾಲನಗರದ ಬೈಚನ ಹಳ್ಳಿಯ ನಿವಾಸಿಯಾದ ನಿಸಾರ್ ರವರು ಅಜಾಗರೂಕತೆಯಿಂದ ಚಾಲನೆ ಮಾಡಿ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದ ಸುರೇಶ, ವಿನುತಾ, ಅಕುಲ್ ಮತ್ತು ದೀಖ್ಷಾರವರಿಗೆ ಗಾಯಗಳಾಗಿದ್ದು ಈ ಬಗ್ಗೆ  ರಾಜೇಶ್ ರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿಯ ಶವ ಪತ್ತೆ

ಸೋಮವಾರಪೇಟೆ ತಾಲೂಕಿನ ಕುಶಾಲನಗರದ ಸುಂದರನಗರದ ನಿವಾಸಿಗಳಾದ ಅನಿಲ್ ಕುಮಾರ್, ಅರುಣ, ಮಂಜು, ವಿಜಯ, ಜಾನ್ಸನ್ ಮತ್ತು ಮನೋಜ್ ರವರು ದಿನಾಂಕ 22-06-2018 ರಂದು ಶಾಂತಳ್ಳಿ ಗ್ರಾಮಕ್ಕೆ ಮದುವೆ ಸಮಾರಂಭಕ್ಕೆ ಹೋಗಿದ್ದವರು ವಾಪಾಸ್ಸು ಬರುವಾಗ ಮಲ್ಲಳ್ಳಿ ಜಲಪಾತವನ್ನು ನೋಡಲು ಹೋದವರು ಹರಿಯುವ ನೀರಿನಲ್ಲಿ ಫೋಟೋಗಳನ್ನು ತೆಗೆಯುತ್ತಿರುವಾಗ ಮನೋಜ್ ರವರು ನೀರಿನಲ್ಲಿ ಕೊಚ್ಚಿ ಹೋಗಿ ಕಾಣೆಯಾಗಿದ್ದವರ ಮೃತ ಶರೀರವು ದಿನಾಂಕ 29-06-2018 ರಂದು ಸುಮಾರು 1 ಕಿ ಮೀ ದೂರದಲ್ಲಿ ಪತ್ತೆಯಾಗಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಜೂಜಾಟ

ದಿನಾಂಕ 28-06-2018 ರಂದು ಕುಶಾಲನಗರದ ಕೂಡ್ಲೂರುವಿನ ಕೈಗಾರಿಕಾ ಪ್ರದೇಶದ ಎಸ್.ಎನ್.ಎಲ್ ವರ್ಕ್ಸ್ ಪಕ್ಕ ತೋಡಿನ ಬಳಿ ಅಕ್ರಮವಾಗಿ ಜೂಜಾಟ ಆಡುತ್ತಿರುವುದಾಗಿ ಸಿಕ್ಕಿದ ಮಾಹಿತಿ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕರಾದ ನವೀನ್ ಗೌಡರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆಟವಾಡುತ್ತಿದ್ದ ಕೂಡ್ಲೂರು ಗ್ರಾಮದವರಾದ ಹರೀಶ್, ಸಾಹುಲ್, ಮತ್ತು ಕೀರ್ತಿ ಎಂಬುವವರನ್ನು ದಸ್ತಗಿರಿ ಮಾಡಿ ಸ್ಥಳದಿಂದ 2,000 ರೂ ನಗದು ಹಣವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಅಪಘಾತ ಪ್ರಕರಣ

ದಿನಾಂಕ 29-06-2018 ರಂದು ಗೋಣಿಕೊಪ್ಪಲುವಿನ ಪಟೇಲ್ ನಗರದ ನಿವಾಸಿಯಾದ ಮನೋಜ್ ಕುಮಾರ್ ರವರು ಮೋಟಾರು ಸೈಕಲಿನಲ್ಲಿ ಹರಿಶ್ಚಂದ್ರಪುರದಿಂದ ಗೋಣಿಕೊಪ್ಪ ನಗರಕ್ಕೆ ಹೋಗುತ್ತಿರುವಾಗ ಅನಿಶ್ ಮಾದಪ್ಪ ಪೆಟ್ರೋಲ್ ಬಂಕ್ ಬಳಿ ತಲುಪುವಾಗ ಕಾರನ್ನು ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಮೋಟಾರು ಸೈಕಲಿಗೆ ಡಿಕ್ಕಿಪಡಿಸಿ ನಿಲ್ಲಿಸದೇ ಹೋಗಿದ್ದು, ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.