Crime News

ಹಲ್ಲೆ ಪ್ರಕರಣ

ದಿನಾಂಕ: 29-11-2020 ರಂದು ಮಡಿಕೇರಿ ತಾಲ್ಲೂಕು ಬಿಳಿಗೇರಿ ಗ್ರಾಮದ ನಿವಾಸಿಗಳಾದ ಶೇಷ, ಗಿರಿ, ದರ್ಶನ್‍, ಅರುಣ, ಮಿತ್ರ, ಮಾಚಯ್ಯ, ನಂಜಪ್ಪ, ಮಧು, ಮನೋಜ್‍ ಮತ್ತು ಇತರರು ಹಾಗೂ ನಿಶ್ಚಲ್ ಮತ್ತು ಆತನ ಸ್ನೇಹಿತರು ಕ್ಷುಲ್ಲಕ ಕಾರಣಕ್ಕೆ ವೈಷಮ್ಯದಿಂದ ಪರಸ್ಪರ ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಿಕೊಂಡು ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ಉಭಯ ಕಡೆಯವರು ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳವು ಪ್ರಕರಣ

ದಿನಾಂಕ: 30-11-2020 ರಂದು ಪೊನ್ನಂಪೇಟೆ ತಾಲ್ಲೂಕು ಗೋಣಿಕೊಪ್ಪ ಗ್ರಾಮದ ಶಾಫಿ ಜುಮ್ಮ ಮಸೀದಿ ಮುಂದಿನ ಕಾಂಪ್ಲೆಕ್ಸ್ ನಲ್ಲಿರುವ ಸಲಾಂ ಎಂಬುವವರ ಅಂಗಡಿಯಿಂದ 30,000 ರೂ ನಗದು ಮತ್ತು ಮೊಬೈಲ್ ಹಾಗೂ ಮುದಸಿರ್ ಎಂಬುವವರ ಮನೆಯಿಂದ ಗ್ರಾಹಕರು ರಿಪೇರಿಗೆ ನೀಡಿದ್ದ  6,000 ರೂ ಮೌಲ್ಯದ 7 ಹಳೆಯ ವಾಚುಗಳನ್ನು ಯಾರೋ ಕಳ್ಳರುಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಅಕ್ರಮ ಮದ್ಯ ಮಾರಾಟ ಪ್ರಕರಣ

ದಿನಾಂಕ: 30-11-2020 ರಂದು ಸೋಮವಾರಪೇಟೆ ತಾಲ್ಲೂಕು ನಂಜರಾಯಪಟ್ಟಣ  ಗ್ರಾಮದ  ನಿವಾಸಿ ಮೊಣ್ಣಪ್ಪ  ಎಂಬುವವರು ಅವರ ಅಂಗಡಿಯಲ್ಲಿ ಮದ್ಯವನ್ನು ಇಟ್ಟುಕೊಂಡು ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಕುಶಾಲನಗರ ಗ್ರಾಮಾಂತರ ಠಾಣೆ ಪಿಎಸ್‍ಐ ಶಿವಶಂಕರ್ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ಅಕ್ರಮ ಜೂಜಾಟ ಪ್ರಕರಣ

ದಿನಾಂಕ: 30-11-2020 ರಂದು ಸೋಮವಾರಪೇಟೆ ತಾಲ್ಲೂಕು ಬಸವನಹಳ‍್ಳಿ ಗ್ರಾಮದ  ಹೊಸಕಾಡು ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಇಸ್ಪೀಟ್‍ ಜೂಜಾಟವಾಡುತ್ತಿದ್ದ ಪ್ರರಕಣವನ್ನು ಕುಶಾಲನಗರ ಗ್ರಾಮಾಂತರ ಠಾಣೆ ಪಿಎಸ್‍ಐ ಶಿವಶಂಕರ್‍ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ, ಇಸ್ಪೀಟ್‍ ಕಾರ್ಡ್‍ ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ದಿನಾಂಕ: 30-11-2020 ರಂದು ಸೋಮವಾರಪೇಟೆ ತಾಲ್ಲೂಕು ಸುಂಟಿಕೊಪ್ಪ  ಗ್ರಾಮದ  ಕಾಂಡನಕೊಲ್ಲಿ ರಸ್ತೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಗರಗಂದೂರು ಗ್ರಾಮದ ರಾಜಪ್ರಭಾ ಪೈಸಾರಿ ನಿವಾಸಿ ನಾಗೇಶ್‍ ಎಂಬುವವರು ಅಕ್ರಮವಾಗಿ ಮದ್ಯ ಇಟ್ಟುಕೊಂಡುಸಾರ್ವಜನಿಕರಿಗೆ ಮದ್ಯ ಸೇವನೆಗೆ ಅವಕಾಶ ಮಾಡುತ್ತಿದ್ದ ಪ್ರಕರಣವನ್ನು ಸುಂಟಿಕೊಪ್ಪ ಠಾಣೆ ಪೊಲಿಸರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ಕಳವು ಪ್ರಕರಣ

ದಿನಾಂಕ: 16-11-2020 ರಂದು ಸೋಮವಾರಪೇಟೆ ತಾಲ್ಲೂಕು ವಳಗುಂದ ಗ್ರಾಮದ ನಿವಾಸಿ ರಮೇಶ್‍ ಎಂಬುವವರಿಗೆ ಸೇರಿದ 76,000 ರೂ ಮೌಲ್ಯದ 1 ಮರ ಕುಯ್ಯುವ ಯಂತ್ರ ಮತ್ತು 6 ಅಲ್ಯುಮಿನಿಯಂ ಏಣಿಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ದಿನಾಂಕ: 30-11-2020 ರಂದು ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.