Crime News

ರಸ್ತೆ ಅಪಘಾತ

ದಿನಾಂಕ 30/11/2020ರಂದು ಕೇರಳದ ಕಾಸರಗೋಡಿನ ನಿವಾಸಿ ಪ್ರದೀಪ್‌ ಶೆಟ್ಟಿ ಎಂಬವಗರು ಅಮಿತಾ ಶೆಟ್ಟಿ ಎಂಬವರೊಡನೆ ಮಡಿಕೇರಿಯಿಂದ ಕಾಸರಗೋಡು ಕಡೆಗೆ ಬೈಕಿನಲ್ಲಿ ಹೋಗುತ್ತಿರುವಾಗ ಕಾಟಕೇರಿ ಬಳಿ ಪ್ರದೀಪ್‌ ಶೆಟ್ಟಿರವರು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಬೈಕು ಬದಿಗೆ ವಾಲಿಕೊಂಡು ಬೈಕಿನಲ್ಲಿದ್ದ ಅಮಿತಾ ಶೆಟ್ಟಿರವರು ಗಾಯಗೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಕಳವು ಪ್ರಕರಣ

ದಿನಾಂಕ 19/11/2020ರಂದು ಭಾಗಮಂಡಲ ಬಳಿಯ ಕೋರಂಗಾಲ ಗ್ರಾಮದ ನಿವಾಸಿ ನಂಗಾರು ಕುಮಾರ ಎಂಬವರು ಪತ್ನಿಯೊಂದಿಗೆ ಕುಶಾಲನಗರಕ್ಕೆ ಮದುವೆಗೆಂದು ಹೋಗಿದ್ದು ಮರಳಿ ಮನೆಗೆ ಬರುವಾಗ ಮನೆಯೊಳಗೆ ಮಂಚದ ಮೇಲಿಟ್ಟಿದ್ದ ಬ್ಯಾಗಿನ ಒಳಗಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು ಅದರೊಳಗಿಟ್ಟಿದ್ದ ಸುಮಾರು ರೂ.1,08,000/- ಮೌಲ್ಯದ ಚಿನ್ನದ ಸರವನ್ನು ಯಾರೋ ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ದಾರಿ ತಡೆದು ಕೊಲೆ ಬೆದರಿಕೆ

ದಿನಾಂಕ 30/11/2020ರಂದು ವಿರಾಜಪೇಟೆ ಬಳಿಯ ಅರಪಟ್ಟು ಗ್ರಾಮದ ನಿವಾಸಿ ಅನ್ನಂಬೀರ ಅನುರಾಧ ಎಂಬವರು ಹುತ್ತರಿ ಹಬ್ಬಕ್ಕೆಂದು ಹೋಗುತ್ತಿರುವಾಗ ದಾರಿಯಲ್ಲಿ ಅನ್ನಂಬೀರ ಸತೀಶ್‌ ಎಂಬವರು ದಾರಿ ತಡೆದು ಹಳೆ ದ್ವೇ಼ಷದಿಂದ ಅಶ್ಲೀಲವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 30/11/2020ರಂದು ಪೊನ್ನಂಪೇಟೆ ಬಳಿಯ ಕಾನೂರು ಗ್ರಾಮದಲ್ಲಿ ರಂಜು ಎಂಬವರು ಅವರ ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಸ್ತೆಯಲ್ಲಿ ಹೋಗುತ್ತಿ ದ್ದ ಅಪರಿಚಿತ ವ್ಯಕ್ತಿಯೊಬ್ಬನಿಗೆ ಡಿಕ್ಕಿಪಡಿಸಿದ ಪರಿಣಾಮ ಆ ವ್ಯಕ್ತಿ ಹಾಗೂ ಬೈಕ್‌ ಚಾಲಕ ರಂಜುರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ವ್ಯಕ್ತಿ ಆತ್ಮಹತ್ಯೆ

ದಿನಾಂಕ 01/12/2020ರಂದು ಗೋಣಿಕೊಪ್ಪ ಬಳಿಯ ಹಾತೂರು ನಿವಾಸಿ ಕೊಕ್ಕಂಡ ಸೋಮಯ್ಯ ಎಂಬವರು ಮನೆಯಲ್ಲಿ ಕಳೆ ನಾಶಕ ಔಷಧಿಯನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪತ್ನಿ ಹಾಗೂ ಮಗ ಜೊತೆಯಲ್ಲಿ ಇಲ್ಲದ ಕಾರಣಕ್ಕೆ ಜುಗುಪ್ಸೆಗೊಂಡು ಸೋಮಯ್ಯನವರು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಕೆರೆಯಲ್ಲಿ ಮುಳುಗಿ ವ್ಯಕ್ತಿ ಸಾವು

ದಿನಾಂಕ 30/11/2020ರಂದು ವಿರಾಜಪೇಟೆ ಬಳಿಯ ತೋರ ಗ್ರಾಮದ ನಿವಾಸಿ ಲೋಕೇಶ ಎಂಬ ಯುವಕನು ಗ್ರಾಮದ ಕೆರೆಯೊಂದರಲ್ಲಿ ಸ್ನಾನ ಮಾಡಲೆಂದು ಕೆರೆಗೆ ಹಾರಿದ್ದು ಕೆರೆಯಲ್ಲಿ ಮುಳುಗಿ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 01/12/2020ರಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಶಿರಾಳಕೊಪ್ಪ ನಿವಾಸಿ ರಾಬಿಯಾಬಿ ಎಂಬವರು ಮಾರುತಿ ಓಮಿನಿ ವ್ಯಾನೊಂದರಲ್ಲಿ ಸುಂಟಿಕೊಪ್ಪ ಕಡೆಯಿಂದ ಹೋಗುತ್ತಿರುವಾಗ 7ನೇ ಹೊಸಕೋಟೆಯ ಮೆಟ್ನಳ್ಳ ಬಳಿ ಕುಶಾಲನಗರ ಕಡೆಯಿಂದ ಒಂದು ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಘರೂಕತೆಯಿಂದ ಚಾಲಿಸಿಕೊಂಡು ಬಂದು ರಾಬಿಯಾಬಿರವರು ಪ್ರಯಾಣಿಸುತ್ತಿದ್ದ ವ್ಯಾನಿಗೆ ಡಿಕ್ಕಿಪಡಿಸಿದ ಪರಿಣಾಮ ರಾಭಿಯಾಬಿ ಹಾಗೂ ವ್ಯಾನ್‌ ಚಾಲಕ ಚಾಂದ್‌ ಪಾಷಾ ಎಂಬವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಅಕ್ರಮ ಮದ್ಯ ಮಾರಾಟ

ದಿನಾಂಕ 01/12/2020ರಂದು ಕುಶಾಲನಗರ ಪಟ್ಟಣದ ಮಾದಾಪಟ್ನ ಬಳಿ ಅಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ ಗಿರಾಕಿಗಳಿಗೆ ಮದ್ಯ ಸೇವನೆ ಮಾಡಲು ಅವಕಾಶ ನೀಡುತ್ತಿರುವುದಾಗಿ ದೊರೆತ ಸುಳಿವಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯ ಪಿಎಸ್‌ಐ ಗಣೇಶ್‌ರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದಾಗ ಮಾದಾಪಟ್ನದ ನೀರಿನ ಟ್ಯಾಂಕ್‌ ಬಳಿ ಅಲ್ಲಿನ ನಿವಾಸಿಗಳಾದ ಸೋಮಶೇಖರ್‌ ಮತ್ತು ರಮೇಶ ಎಂಬವರು ಅಕ್ರಮವಾಗಿ ಸರ್ಕಾರದ ಪರವಾನಗಿ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಜನರಿಗೆ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿದ್ದುದನ್ನು ಪತ್ತೆ ಹಚ್ಚಿ 90 ಎಂಎಲ್‌ನ 15 ಪ್ಯಾಕೆಟು ಮದ್ಯ ಹಾಗೂ ರೂ.100/- ಹಣವನ್ನು ವಶಪಡಿಸಿಕೊಂಡು ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ವಂಚನೆ ಪ್ರಕರಣ

ಕುಶಾಲನಗರದ ಕಾವೇರಿ ಬ್ಲಾಕ್‌ ನಿವಾಸಿ ಶಂಕರ್‌ ಎಂಬವರ ಮನೆಗೆ ನಗರದ ಕಾಳಮ್ಮ ಕಾಲೋನಿ ನಿವಾಸಿ ಮಂಜುನಾಥ್‌ ಹಾಗೂ ಗೌಡ ಸಮಾಜ ಬಳಿಯ ನಿವಾಸಿ ಶಶಿಕಾಂತ್‌ ಎಂಬವರು ಬಂದು ಅವರು ಚೀಟಿ ನಡೆಸಲು ಪರವಾನಗಿ ಹೊಂದಿದ್ದು ಅವರು ನಡೆಸುತ್ತಿರುವ ಚೀಟಿಗೆ ಸೇರುವಂತೆ ಶಂಕರ್‌ರವರನ್ನು ಒತ್ತಾಯಿಸಿ ಅದರಂತೆ ಶಂಕರ್‌ರವರು ಚೀಟಿಗೆ ಸೇರಿಕೊಂಡು ಸುಮಾರು 12 ತಿಂಗಳ ಕಾಲ ಹಣವನ್ನು ಹಾಕಿದ್ದು ಒಟ್ಟು ರೂ.4,20,000/- ವನ್ನು ಚೀಟಿಗೆ ಹಾಕಿಸಿಕೊಂಡು ನಂತರ ಹಣವನ್ನು ಮರಳಿ ನೀಡದೆ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಮರದ ಕೊಂಬೆ ಬಿದ್ದು ವ್ಯಕ್ತಿ ಸಾವು

ದಿನಾಂಕ 01/12/2020ರಂದು ಶನಿವಾರಸಂತೆ ಬಳಿಯ ಮಾಲಂಬಿ ಗ್ರಾಮದ ಸುಬ್ರಮಣಿ ಎಂಬವರು ಭಾಗೀರಥಿ ಎಂಬವರ ತೋಟದಲ್ಲಿ ಸಿಲ್ವರ್‌ ಮರಗಳನ್ನು ಕುಯ್ದು ನೆಲಕ್ಕೆ ಬೀಳಿಸುವಾಗ ಮರದ ಕೊಂಬೆಯೊಂದು ಕೆಲಸ ಮಾಡುತ್ತಿದ್ದ ಸುಬ್ರಮಣಿರವರ ಮೇಲೆ ಬಿದ್ದು ಗಾಯಗೊಂಡ ಸುಬ್ರಮಣಿರವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.