Crime News

ಕಳವು ಪ್ರಕರಣ

ದಿನಾಂಕ: 07-12-2020 ರಂದು ಮಡಿಕೇರಿ ನಗರದ ವೈದ್ಯಕೀಯ ಕಾಲೇಜು ವಿದ್ಯಾರ್ಥಿ ನಿಲಯದ ಕೊಠಡಿಗಳ ಬಾಗಿಲಿಗೆ ಹಾಕಿದ್ದ ಬೀಗವನ್ನು ಯಾರೋ ಕಳ‍್ಳರು ತೆಗೆದು ಕೊಠಡಿಯಲ್ಲಿದ್ದ ಲ್ಯಾಪ್‍ ಟಾಪ್, ಟ್ಯಾಬ್, ಇತರ ಕಂಪ್ಯೂಟರ್‍ ಉಪಕರಣಗಳು,ನಗದು ಸೇರಿದಂತೆ ಒಟ್ಟು ಅಂದಾಜು 1,47,000 ರೂ ಮೌಲ್ಯದ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ: 08-12-2020 ರಂದು ಮಡಿಕೇರಿ ತಾಲ್ಲೂಕು ನಾಪೋಕ್ಲು ಗ್ರಾಮದ ಮಲಬಾರ್‍ ಹೊಟೇಲ್‍ ಮುಂಭಾಗ ನಿಂತಿದ್ದ ಕೊಟ್ಟಮುಡಿ ಗ್ರಾಮದ ನಿವಾಸಿ ಫಾರೂಕ್‍ ಎಂಬುವವರಿಗೆ ಕಾರೇಕಾಡು ಗ್ರಾಮದ ನಿವಾಸಿ ಸುಹೇಲ್‍ ಎಂಬುವವರು ವೈಯಕ್ತಿಕ ವಿಚಾರದಲ್ಲಿ ವೈಷಮ್ಯದಿಂದ ತಲೆಗೆ ಹಲ್ಲೆ ಮಾಡಿ ಗಾಯಪಡಿಸಿ ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ನಾಪೋಕ್ಲು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.