Crime News

ಅಕ್ರಮ ಮರಳು ಸಾಗಾಟ ಪ್ರಕರಣ

ದಿನಾಂಕ: 14-12-2020 ರಂದು ವಿರಾಜಪೇಟೆ ತಾಲ್ಲೂಕು ಮೈತಾಡಿ ಗ್ರಾಮದ ಬಳಿ ಕಾವೇರಿ ಹೊಳೆಯಿಂದ ಅಕ್ರಮವಾಗಿ ಮರಳು ತೆಗೆದು ಸಾಗಾಟ ಮಾಡಲು ಕೆಎ-12-ಟಿ-5944 ರ ಟ್ರ್ಯಾಕ್ಟರ್ ಗೆ ಮರಳು ಸಾಗಾಟ ತುಂಬಿಸುತ್ತಿರುವಾಗ ವಿರಾಜಪೇಟೆ ಗ್ರಾಮಾಂತರ ಠಾಣೆ ಪಿಎಸ್‍ಐ ಮತ್ತು ಸಿಬ್ಬಂದಿಯವರಯ ದಾಳಿ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ: 14-12-2020 ರಂದು ಸೋಮವಾರಪೇಟೆ ಪಟ್ಟಣದ ಎಂ.ಡಿ ಬ್ಲಾಕ್‍ ನಿವಾಸಿಗಳಾದ ಶ‍್ರೇಯಸ್‍ , ಪವನ್‍ ಮತ್ತು ಸುನಿಲ್‍ ಎಂಬುವವರು ಸ್ನೇಹಿತರೊಂದಿಗೆ ಹಾನಗಲ್ಲು ಗ್ರಾಮದ ರವಿ ಎಂಬುವವರು ಆಯೋಜಿಸಿದ್ದ ಪಾರ್ಟಿಗೆ ಹೋಗಿದ್ದಾಗ ಅಲ್ಲಿದ್ದ  ಲೋಹಿತ್‍ಗೌಡ ಮತ್ತು ಆತನ ಸ್ನೇಹಿತರು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ಮೂವರಿಗೂ ದೊಣ್ಣೆ, ಬಾಟಲಿಯಿಂದ ಹಲ್ಲೆ ಮಾಡಿ ಗಾಯಪಡಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕ್‍ ಕಳವು ಪ್ರಕರಣ

ದಿನಾಂಕ: 12-12-2020 ರಂದು ಸೋಮವಾರಪೇಟೆ ತಾಲ್ಲೂಕು ಕೂಡುಮಂಗಳೂರು ಗ್ರಾಮದ ಪುರುಷೋತ್ತಮ ರೈ ಎಂಬುವವರ ಕಾಂಕ್ರೀಟ್‍ ಪ್ಲಾಂಟ್‍ ಗೇಟಿನ ಮುಂಭಾಗ ಅವರ ಕೆಲಸಗಾರ ವೆಲನ್‍ ಎಂಬುವವರು ನಿಲ್ಲಿಸಿದ್ದ ಕೆಎ-12-ಜೆ-5776 ರ ಬೈಕನ್ನು ಯಾರೋ ಕ‍ಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆನ್‍ ಲೈನ್‍ ವಂಚನೆ ಪ್ರಕರಣ

ದಿನಾಂಕ: 27-12-2020 ರಂದು ಸೋಮವಾರಪೇಟೆ ತಾಲ್ಲೂಕು  ಕುಶಾಲನಗರ ಹೌಸಿಂಗ್‍ ಬೋರ್ಡ್‍ ನಿವಾಸಿ ಸುಜಿತ್ ಎಂಬುವವರ ಮೊಬೈಲ್ ಗೆ  ONLINE INDIA MART  ಎಂಬ ವೆಬ್‍ ಸೈಟ್‍ ನಿಂದ  ಎಂಬುದಾಗಿ ಪರಿಚಯಿಸಿಕೊಂಡ ವ್ಯಕ್ತಿ ಕಡಿಮೆ ಬೆಲೆಗೆ LED TV ಕೊಡುವುದಾಗಿ ಹೇಳಿ ಕೊಟಕ್‍ ಮಹಿಂದ್ರಾ ಬ್ಯಾಂಕ್‍ ಖಾತೆ ಸಂಖ್ಯೆ 6813197678 ಕ್ಕೆ ಹಣ ಸಂದಾಯ ಮಾಡಲು ತಿಳಿಸಿದಂತೆ ತನ್ನ ತಂದೆಯ  ಖಾತೆಯಿಂದ  16,600/- ಹಣವನ್ನು AMAZON PAY ಮುಖಾಂತರ ಸಂದಾಯ ಮಾಡಿರುತ್ತಾರೆ. ನಂತರ ಟಿವಿಯನ್ನು ಕಳುಹಿಸದೇ ಇದ್ದು, ಕರೆ ಮಾಡಿದಾಗ ಕರೆ ಸ್ವೀಕರಿಸದೇ ಮೋಸ ಮಾಡಿರುವ ಬಗ್ಗೆ ದಿನಾಂಕ: 14-12-2020 ರಂದು ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.