Crime News

ಕಳವು ಪ್ರಕರಣ

ದಿನಾಂಕ: 17-12-2020 ರಂದು ಮಡಿಕೇರಿ ತಾಲ್ಲೂಕು ಕೆ.ಬಾಡಗ ಗ್ರಾಮದ ನಿವಾಸಿ ಮಾದಪ್ಪ ಎಂಬುವವರ ಅಂಗಡಿಯ ಬೀಗವನ್ನು ಯಾರೋ ಕಳ‍್ಳರು ಮುರಿದು ಒಳನುಗ್ಗಿಅಂಗಡಿಯಲ್ಲಿದ್ದ ₹. 34,426 ಮೌಲ್ಯದ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

ದಿನಾಂಕ: 18-12-2020 ರಂದು ಸೋಮವಾರಪೇಟೆ ತಾಲ್ಲೂಕು ಮುಳ್ಳುಸೋಗೆ ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ಕೆಎ-12-ಎ-9930 ರ ಪಿಕ್‍ ಅಪ್‍ ವಾಹನವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಕೆಎ-12-ಬಿ-6543 ರ ಾಟೋ ರಿಕ್ಷಾ ಹಿಂಬದಿಗೆ ಡಿಕ್ಕಿಪಡಿಸಿದ ಪರಿಣಾಮ ಮಹಿಳೆಯೊಬ್ಬರು ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕುಶಾಲನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.