Crime News

ಪಿಕ್ಅಪ್ ವಾಹನಕ್ಕೆ ಕಾರು ಡಿಕ್ಕಿ

ದಿನಾಂಕ 19-12-2020 ರಂದು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಇಬ್ನಿವಳವಾಡಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಮಹಮ್ಮದ್ ಮಜರುಲ್ಲಾ ಎಂಬವರು ತಮ್ಮ ಬಾಪ್ತು ಪಿಕ್ ಅಪ್ ವಾಹನದಲ್ಲಿ ಹೋಗುತ್ತಿದ್ದಾಗ  ಮಡಿಕೇರಿ ಕಡೆಯಿಂದ ಬಂದ ಸ್ವಿಪ್ಟ್ ಕಾರು ಡಿಕ್ಕಿಯಾದ ಪರಿಣಾಮ ಎರಡೂ ವಾಹನಗಳು ಜಖಂಗೊಂಡು ಕಾರಿನಲ್ಲಿದ್ದ ಸ್ವಪ್ನ ಎಂಬವರಿಗೆ ಗಾಯಗಳಾಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ

ದಿನಾಂಕ 19-12-2020 ರಂದು ಸಿದ್ದಾಪುರ ನಿವಾಸಿ ಶ್ರೀಮತಿ ಕೆ.ವಿ.ಸೌಮಿನಿ ಎಂಬವರ ಮಗಳಾದ ಶ್ರೀಮತಿ ಶಮ್ಯ ಎಂಬವರ ಮೇಲೆ ಕೆ.ವಿ. ಸೌಮಿನಿಯವರ ಗಂಡನ ತಮ್ಮ ಸುಬ್ರಮಣಿ, ಅವರ ಪತ್ನಿ ಪ್ರಮಿಳಾ, ಮತ್ತು ಅವರ ತಾಯಿ ಕಮಾಲಾಕ್ಷಿ ರವರು ಸೇರಿ ಹಲ್ಲೆ ನಡೆಸಿದ್ದು ಅಲ್ಲದೆ  ಜಗಳ ಬಿಡಿಸಲು ಹೋದ ಕೆ.ವಿ. ಸೌಮಿನಿರವ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಿಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮಹಿಳೆ ಮೇಲೆ  ದೌರ್ಜನ್ಯ

ಮಡಿಕೇರಿನಗರದ ಐ.ಟಿ.ಐ. ಬಳಿ ವಾಸವಾಗಿರುವ ಶ್ರೀಮತಿ ದೇಚಮ್ಮ @ ಡೈನಾ ಎಂಬವರ ಮೇಲೆ ಆಕೆಯ ಗಂಡ ನಂಜಪ್ಪ @ ಭರತ್, ಅತ್ತೆ ಪಾರ್ವತಿ, ಮಾವ ಮುದ್ದಪ್ಪ ರವರು ಸೇರಿ ಮಾನಸಿಕ ಹಾಗು ದೈಹಿಕ ಹಿಂಸೆ ನೀಡುತ್ತಿದ್ದು, ಅಲ್ಲದೆ ಕತ್ತು ಹಿಸುಕಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕೊಡಗು ಜಿಲ್ಲಾ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸ್ಕೂಟಿಗೆ ಕಾರು ಡಿಕ್ಕಿ

ದಿನಾಂಕ 19-12-2020 ರಂದು ವಿರಾಜಪೇಟೆ ನಗರದ ಮೀನುಪೇಟೆಯ ನಿವಾಸಿ ಚಂದನ್ ಎಂಬವರು ತಮ್ಮ ಸ್ಕೂಟಿಯಲ್ಲಿ ವಿರಾಜಪೇಟೆಗೆ ಹೋಗುತ್ತಿದ್ದಾದ ಕೊಮ್ಮೆತ್ತೋಡು ಎಂಬಲ್ಲಿ ಹಿಂದಿನಿಂದ ಬರುತ್ತಿದ್ದ ಮಾರುತಿ-800 ಕಾರು ಸ್ಕೂಟಿಗೆ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರ ಚಂದನ್ ರವರ ತಲೆಗೆ ಪೆಟ್ಟಾಗಿ ವಿರಾಜಪೇಟೆ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೋಟದಿಂದ ಸಿಲ್ವರ್ ಮರ ಹಾಗು ಅಡಿಕೆ ಕಳವು:

ಪೊನ್ನಂಪೇಟೆ ಠಾಣಾ ಸರಹದ್ದಿನ ನಿಟ್ಟೂರು ಗ್ರಾಮದ ನಿವಾಸಿ ಮಾಪಂಡ ಪೂವಯ್ಯ, ಎಂಬವರ ಸ್ವಾದೀನದಲ್ಲಿರುವ ಸರ್ವೆ ನಂ 77/7, ರ 5.04 ಏಕ್ರೆ ಜಾಗದಲ್ಲಿ  ದಿನಾಂಕ 14-11-2020 ರಂದು ಆರೋಪಿಗಳಾದ ಮಲ್ಲೇಂಗಡ ವಿನೀಶ್, ಪೊನ್ನಪ್ಪ, ಶೃತಿ, ಪದ್ಮಾವತಿ, ಲತಾ, ಮೂಕಳೆಮಾಡ ಅಯ್ಯಣ್ಣ ಮತ್ತು ಅವರ ಕೂಲಿ ಕಾರ್ಮಿಕರು ರವರುಗಳು ಸೇರಿ ಕೆಎ-12-7095 ರ ಟ್ರಾಕ್ಟರ್ ಮತ್ತು ಕೆಎ-12-6876ರ ಲಾರಿಯಲ್ಲಿ  ಅಂದಾಜು ಮೌಲ್ಯ 1.20 ಲಕ್ಷ  ಮೌಲ್ಯದ ಒಂದು ಲೋಡ್ ಸಿಲ್ವರ್ ಮರವನ್ನು ಕಳವುಮಾಡಿಕೊಂಡು ಹೋಗಿದ್ದು, ಹಾಗೂ ದಿನಾಂಕ 24-11-2020 ರಂದು ಮದ್ಯಾಹ್ನ  ಅಂದಾಜು ರೂ.13,000 ಮೌಲ್ಯದ ಅಡಿಕೆಯನ್ನು ಕಳವು ಮಾಡಿಕೊಂಡು ಹೋಗಿದ್ದು, ಮತ್ತೆ ದಿನಾಂಕ 14-12-2020 ರಂದು ಸಂಜೆ ಪುನಃ ಅಂದಾಜು ರೂ.14,000 ಮೌಲ್ಯದ 350 ಕೆ.ಜಿ ಯಷ್ಟು ಅಡಿಕೆಯನ್ನು ಆರೋಪಿಗಳು ಕಳವು ಮಾಡಿಕೊಂಡು ಹೋಗಿರುತ್ತಾರಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪಾದಾಚಾರಿ ಮಹಿಳೆಗೆ ಬೈಕ್ ಡಿಕ್ಕಿ

ದಿನಾಂಕ 18-12-2020 ರಂದು ಸೋಮವಾರಪೇಟೆ ತಾಲೂಕು ಬಾಣವಾರದ ನಿವಾಸಿ ಎಸ್.ಎಲ್ ನಂಜಪ್ಪ ಎಂಬವರ ತಾಯಿ ಯಶೋದ ರವರು ಅಜ್ಜಳ್ಳಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-12 ಹೆ 1139ರ ಮೋಟಾರ್ ಬೈಕಿನ ಸವಾರ ಬೈಕನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಶೋದರವರಿಗೆ ಡಿಕ್ಕಿಪಡಿಸಿದ ಪರಿಣಾಮ ಯಶೋದರವರಿಗೆ ಪೆಟ್ಟಾಗಿದ್ದು ಅವರನ್ನು ಮೈಸೂರಿನ ಡಿ.ಎಂ.ಆರ್ ಆಸ್ಪತ್ರೆಗೆ ದಾಖಲು ಮಾಡಿದ್ದು, ಈ ಸಂಬಂಧ  ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.