Crime News

ವ್ಯಕ್ತಿಯ ಜಾಗಕ್ಕೆ ಅಕ್ರಮ ಪ್ರವೇಶ

ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ ಅರೆಕಾಡು ಗ್ರಾಮದಲ್ಲಿ ಎಂ.ಸಿ.ಪೊನ್ನಪ್ಪರವರಿಗೆ ಸೇರಿದ ಜಾಗಕ್ಕೆ ದಿನಾಂಕ 23-10-2020 ರಂದು ಹೊಸ್ಕೇರಿ ಅರೆಕಾಡು ಗ್ರಾಮ ಪಂಚಾಯ್ತಿಯ ಪಿ.ಡಿ.ಒ. ಹಾಗು ಇತರರು ಸೇರಿ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಿದ್ದು ಈ ವಿಚಾರವನ್ನು ಪ್ರಶ್ನಿಸಿದ ಎಂ.ಸಿ.ಪೊನ್ನಪ್ಪ ಎಂಬವರನ್ನು ಬೆದರಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಸಾಗಾಟ

ದಿನಾಂಕ 21-12-2020 ರಂದು ಮಡಿಕೇರಿ ಗ್ರಾಮಾಂತರ ಠಾಣೆಯ ಅಪರಾಧ ವಿಭಾಗದ ಪಿ.ಎಸ್.ಐ. ಎಂ.ಕೆ. ಸದಾಶಿವ ರವರು ಚುನಾವಣಾ ಸಂಬಂಧ ಕರಿಕೆ ಗ್ರಾಮದಲ್ಲಿ ಗಸ್ತು ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ದೊರೆತ ಖಚಿತ ವರ್ತಮಾನದ ಮೇರೆಗೆ ಕರಿಕೆ ಕಡೆಯಿಂದ ಭಾಗಮಂಡಲ ಕಡೆಗೆ ಬರುತ್ತಿದ್ದ  ಜೀಪನ್ನು ತಡೆದು ಪರಿಶೀಲಿದಾಗ 90 ಎಂ.ಎಲ್.ನ 96 ಮದ್ಯದ ಟೆಟ್ರಾ ಪ್ಯಾಕೇಟ್ ಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದು ಪತ್ತೆಯಾಗಿದ್ದು, ಕರಿಕೆ ಗ್ರಾಮದ ಎ.ಪಿ. ಅಶ್ವಥ್ ಎಂಬವರನ್ನು ಬಂಧಿಸಿ  ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಅಂದಾಜು 2,686/- ರೂ. ಮೌಲ್ಯದ ಮದ್ಯದ ಪ್ಯಾಕೇಟ್ ಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಜೀಪನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮನೆಯಿಂದ ಹೊರಹಾಕಿ  ಕೊಲೆ ಬೆದರಿಕೆ

ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಹೊಸ್ಕೇರಿ ಗ್ರಾಮದ ವಾಸಯ್ಯ ಎಂಬವರ ಲೈನು ಮನೆಯಲ್ಲಿ ರೇಖಾ, ಆಕೆಯ ಗಂಡ ಮತ್ತು ಮಕ್ಕಳು ವಾಸವಾಗಿದ್ದು, ದಿನಾಂಕ 21-12-2020 ರಂದು ಆರೋಪಿಗಳಾದ ಹರೀಶ್, ವಿಮಾ ಹರೀಶ್ ಪ್ರಮೋದ್ ಮತ್ತು ಇತರರು ಸೇರಿ ರೇಖಾರವರು ವಾಸವಾಗಿರುವ ಲೈನು ಮನೆಗೆ ಬಂದು ಮನೆಯನ್ನು ಖಾಲಿ ಮಾಡಲು ಹೇಳಿ ಬೆಕರಿಕೆಯನ್ನು ಹಾಕಿದ್ದು ಅಲ್ಲದೆ ಜಾತಿ ನಿಂದನೆಯನ್ನು ಮಾಡಿ ಬಲಾತ್ಕಾರವಾಗಿ ಮನೆಯಿಂದ ಹೊರಗೆ ಹಾಕಿದ್ದೂ ಅಲ್ಲದೆ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಷುಲ್ಲಕ ಕಾರಣಕ್ಕೆ ಜಗಳ

ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಹಿತ್ತಲಕೇರಿ ಗ್ರಾಮದ ಚಂದ್ರರಾಜು ಎಂಬವರ ಪತ್ನಿ ಕಮಲ ರವರ ಬಾಪ್ತು ಹಸುವೊಂದು ಹೀರಣ್ಣಯ್ಯ ಎಂಬವರ ಮನೆಯ ಅಂಗಳಕ್ಕೆ ನುಗ್ಗಿದ ವಿಚಾರದಲ್ಲಿ  ಚಂದ್ರರಾಜು ಮತ್ತು ಇತರ 10 ಜನರ ಹಾಗು  ಹೀರಣ್ಣಯ್ಯ ಮತ್ತು ಇತರೆ 8 ಜನರ ನಡುವೆ ಜಗಳ ನಡೆದು ಪರಸ್ಪರ ಕೈಗಳಿಂದ ಹಾಗು ದೊಣ್ಣೆಯಿಂದ ಹಲ್ಲೆ ಮಾಡಿಕೊಂಡು ಪರಸ್ಪರ ಕೊಲೆ ಬೆದರಿಕೆ ಹಾಕಿಕೊಂಡಿರುವ ಬಗ್ಗೆ ಎರಡೂ ಕಡೆಯವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ  2 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಲಾರಿ – ಬೈಕ್ ನಡುವೆ ಅಪಘಾತ, ಸಾವಿಗೀಡಾದ ಸವಾರ.

ಬೆಂಗಳೂರಿನ ಕೋರಮಂಗಲದಲ್ಲಿರುವ ಟೆಕ್ಸ್ ನ್ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಸಿದ್ದಾಂತ್ ಭಾಸ್ಕರ್ ರವರ ತಮ್ಮ ಸಿದ್ದಾರ್ಥ್ ಭಾಸ್ಕರ್ ಎಂಬವರು ದಿನಾಂಕ 21-12-2020 ರಂದು ಹೀರೋ ಹೋಂಡಾ ಮೋಟಾರ್ ಸೈಕಲಿನಲ್ಲಿ ಬೆಂಗಳೂರಿಗೆ ವಿರಾಜಪೇಟೆ-ಗೋಣಿಕೊಪ್ಪ ಮಾರ್ಗವಾಗಿ ಹೋಗುತ್ತಿದ್ದಾಗ ಗೋಣಿಕೊಪ್ಪದ ಭದ್ರಗೊಳ ಎಂಬಲ್ಲಿ ಮೈಸೂರು ಕಡೆಯಿಂದ ಬಂದ ಲಾರಿಯು ಸಿದ್ದಾರ್ಥ್ ಭಾಸ್ಕರ್ ರವರು ಸವಾರಿ ಮಾಡುತ್ತಿದ್ದ  ಮೋಟಾರ್ ಸೈಕಲಿಗೆ ಡಿಕ್ಕಿಯಾದ ಪರಿಣಾಮ ಸಿದ್ದಾರ್ಥ್ ಭಾಸ್ಕರ್ ಗಂಭೀರವಾಗಿ ಗಾಯಗೊಂಡು ಸಾವನಪ್ಪಿದ್ದು, ಈ ಸಂಬಂಧ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿರುತ್ತಾರೆ.

ನೇಣುಬಿಗಿದುಕೊಂಡು ಮಹಿಳೆ ಆತ್ಮಹತ್ಯೆ

ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಾವಾಡಿ ಗ್ರಾಮದ ಮಂಡೆಪಂಡ ವಿಜು ಎಂಬವರ ಲೈನುಮನೆಯಲ್ಲಿ ವಾಸವಾಗಿರುವ ಪಣಿ ಎರವರ ಪುಟ್ಟು ಎಂಬವರ ಪತ್ನಿ ಗೌರಿ ಎಂಬ ಮಹಿಳೆ ದಿನಾಂಕ 21-12-2020 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.