Crime News

ಬಾವಿಗೆ ಬಿದ್ದು ವ್ಯಕ್ತಿ ಸಾವು

ಗೋಣಿಕೊಪ್ಪ ಠಾಣಾ ಸರಹದ್ದಿನ ಧನುಗಾಲ ಗ್ರಾಮದ ಶ್ರೀಮತಿ ಪಂಜರಿ ಎರವರ ಗೌರ ರವರ ಗಂಡ ಪಂಜರಿ ಎರವರ ರಾಮ ಎಂಬವರು ದಿನಾಂಕ 21-12-2020 ರಂದು ಅವರ ಮನೆಯ ಬಳಿ ಇರುವ ಪಂಚಾಯ್ತಿ ಬಾವಿಯ ಕಟ್ಟೆಯ ಮೇಲೆ ಕುಳಿತುಕೊಂಡಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವನಪ್ಪಿದ್ದು,  ಸಂಬಂಧ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಶ್ರೀಮಂಗಲ ಠಾಣಾ ಸರಹದ್ದಿನ ನಾಲ್ಕೇರಿ ಗ್ರಾಮದ ಪಂಜರಿ ಎರವರ ಕೆ. ಚಾತ ಎಂಬವರ ಮಗ ಪಂಜರಿ ಎರವರ ಸೋಮ ಎಂಬಾತ ದಿನಾಂಕ 21-12-2020 ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣದ ವಿಚಾರದಲ್ಲಿ ಹಲ್ಲೆ

ವಿರಾಜಪೇಟೆ ನಗರ ಠಾಣಾ ಸರಹದ್ದಿನ  ವಿರಾಜಪೇಟೆ ನಗರದಲ್ಲಿ ವಾಸವಾಗಿರುವ ಕೆ.ಆರ್. ಸಂಪತ್ ಅಯ್ಯಂಗಾರ್ ರವರಿಗೆ ಅವರ ಸ್ನೇಹಿತ ತೆಲುಗರಬೀದಿ ನಿವಾಸಿ ಹರೀಶ್ ಎಂಬವರು ರೂ.4,55,000 ರೂ. ಹಣವನ್ನು ಪಡೆದು ಮರಳಿಸದೇ ಇದ್ದು, ಹಣವನ್ನು ಹಿಂತಿರುಗಿಸುವ ಬಗ್ಗೆ ವಿಚಾರಿಸಿದ ಕೆ.ಆರ್.ಸಂಪತ್ ಅಯ್ಯಂಗಾರ್ ವರರಿಗೆ ಹರೀಶ್ ರವರು ಅವಾಚ್ಯ ಶಬ್ದಗಳಿಂದ ಬೈದು ಬೆದರಿಸಿರುತ್ತಾರೆಂದು ರಾನ್ಯ ಉಚ್ಛ ನ್ಯಾಯಾಲಯಕ್ಕೆ ದೂರನ್ನು ಸಲ್ಲಿಸಿದ ಮೇರೆಗೆ ನ್ಯಾಯಾಲಯದ ನಿರ್ದೇಶನದ ಮೇರೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತೋಟಕ್ಕೆ ನುಗ್ಗಿ ಅಡಿಕೆ ಕಳವು

ಮಡಿಕೇರಿ ತಾಲೂಕಿನ ಹೊದವಾಡ ಗ್ರಾಮದ ನಿವಾಸಿ ಶ್ರೀಮತಿ ಗೀತಾ ರವವರಿಗೆ ಹೊದವಾದ ಗ್ರಾಮದಲ್ಲಿ 5 ಏಕ್ರೆ ತೋಟವಿದ್ದು ಸದರಿ ತೋಟದಿಂದ ದಿನಾಂಕ 13-11-2020 ರಂದು ಹೊದವಾಡ ಗ್ರಾಮದ ದಾಮೋದರ, ಕಮಲಹಾಸ, ಗಣೇಶ, ಮೊಯ್ದು, ಅಬ್ದುಲ್ ರೆಹಮಾನ್, ಮತ್ತು ಬೊಳ್ಳ ಎಂಬವರು ಅಕ್ರಮ ಪ್ರವೇಶ ಮಾದಿ ಸುಮಾರು 2 ಲಕ್ಷ ಮೌಲ್ಯದ ಅಡಿಕೆಯನ್ನು ಕಳವು ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದ್ವೇಷದ ಹಿನ್ನೆಲೆ ದಾರಿ ತಡೆದು ಹಲ್ಲೆ

ಕುಶಾಲನಗರ ಸಮೀಪದ ಕೂಡಿಗೆಯ ನಿವಾಸಿ ಎಂ.ಆರ್. ಫಯಾಜ್ ಎಂಬವರು ದಿನಾಂಕ 22-12-2020 ರಂದು ತನ್ನ ಪತ್ನಿಯೊಂದಿಗೆ ಸ್ಕೂಟರಿನಲ್ಲಿ ಸ್ವಂತ ಊರಾದ ಗರಗಂದೂರು ಗ್ರಾಮಕ್ಕೆ ಹೋಗುತ್ತಿದ್ದಾಗ ಆರೋಪಿಗಳಾದ ತಾಹಿರ್ ಖಾನ್ ಮತ್ತು ಅರುಣ ಎಂಬವರು ಆಟೋ ರಿಕ್ಷಾದಲ್ಲಿ ಬಂದು ಎಂ.ಆರ್. ಫಯಾಜ್ ರವರ ಸ್ಕೂಟರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುತ್ತೇವೆ ಎಂಬುದಾಗಿ ಕತ್ತಿಯಿಂದ ಹಲ್ಲೆ ಯತ್ನಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆಸ್ತಿ ವಿಚಾರ ವ್ಯಕ್ತಿ ಮೇಲೆ ಹಲ್ಲೆ

ಶನಿವಾರಸಂತೆ ಠಾಣಾ ವ್ಯಾಪ್ತಿ ಹೊಸಗುತ್ತಿ ಹೊಸಳ್ಳಿ ಗ್ರಾಮದ ನಿವಾಸಿ ಹೆಚ್.ಎಸ್. ರಂಗೇಗೌಡ ಎಂಬವರು ದಿನಾಂಕ 22-12-2020 ರಂದು ತಮ್ಮ ಮನೆಯ ಅಂಗಳದಲ್ಲಿ ಕೆಲಸ ಮಾಡಿಕೊಂಡಿರುವಾಗ ಆರೋಪಿಗಳಾದ ಬಸವರಾಜ ಮತ್ತು ಅರುಣ ಎಂಬವರು ಅಲ್ಲಿಗೆ ಬಂದು ಆಸ್ತಿ ವಿಚಾರದಲ್ಲಿ ಜಗಳ ಮಾಡಿ ಹಲ್ಲೆ ನಡೆಸಿದ್ದು ಅಲ್ಲದೆ ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.