Crime News

ಹೆಂಗಸು ಕಾಣೆ ಪ್ರಕರಣ ದಾಖಲು

ಪೊನ್ನಂಪೇಟೆ ಪೊಲೀಸ್ ಠಾಣಾ ಸರಹದ್ದಿನ ದೇವನೂರು ಗ್ರಾಮದ ಕಿಶನ್ ಮುದ್ದಪ್ಪನವರ ಲೈನು ಮನೆಯಲ್ಲಿ ವಾಸವಾಗಿರುವ ಚಿಕ್ಕನಾಯಕ ಎಂಬವರ ಪತ್ನಿ ದಿನಾಂಕ 16-12-2020ರಂದು ತಮ್ಮ ಊರಿಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿ  ಊರಿಗೂ ಹೋಗದೆ  ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೈಮೇಲೆ ಮರಬಿದ್ದು ವ್ಯಕ್ತಿ ಸಾವು

ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಚೌಡ್ಲು ಗ್ರಾಮದ ನಿವಾಸಿ ಹೆಚ್.ಎನ್. ವೆಂಕಟೇಶ್ ಎಂಬವರ ಅಣ್ಣ ವೆಂಗಟೇಶ್ ಎಂಬವರು ದಿನಾಂಕ 25-12-2020 ರಂದು ಗೌಡಳ್ಳಿ ಗ್ರಾಮದ ಪ್ರಸನ್ನ ಎಂಬವರ ತೋಟದಲ್ಲಿ ಸಿಲ್ವರ್ ಮರಗಳನ್ನು ತುಂಡರಿಸುತ್ತಿದ್ದ ವೇಳೆ ಮರದ ಕೊಂಬೆ ವೆಂಕಟೇಶ್ ರವರ ತಲೆಯ ಮೇಲೆ ಬಿದ್ದು ಗಂಭೀರ ಗಾಯಗೊಂಡು ಸೋಮವಾರಪೇಟೆ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಸಾವನಪ್ಪಿದ್ದು, ಶನಿವಾಸರಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.