Crime News

ನಕಲಿ ಸಹಿ ಮಾಡಿ ವಂಚನೆ.

ವಿರಾಜಪೇಟೆ ತಾಲೋಕು, ಹಾತೂರು ಗ್ರಾಮದ ನಿವಾಸಿ ಕೊಕ್ಕಂಡ ಎಂ. ಕುಟ್ಟಪ್ಪ ಎಂಬವರಿಗೆ ಹಾತೂರು ಗ್ರಾಮದಲ್ಲಿ ಆಸ್ತಿ ಇದ್ದು, ಅವರ ಕುಟುಂಬದವರಾದ ಕೊಕ್ಕಂಡ ಬೆಳ್ಳಿಯಪ್ಪನವರು ಕೊಕ್ಕಂಡ ಎಂ.ಕುಟ್ಟಪ್ಪನವರ ನಕಲಿ ಸಹಿಯನ್ನು ಬಳಸಿ ಜಾಗದ ಆರ್‍.ಟಿ.ಸಿ.ಯನ್ನು ಮಾಡಿಸಿಕೊಂಡಿದ್ದು, ಇದಕ್ಕೆ ಪೊನ್ನಂಪೇಟೆ ವೃತ್ತದ ಕಂದಾಯ ನರೀಕ್ಷಕರು ಹಾಗು ಗ್ರಾಮ ಲೆಕ್ಕಾಧಿಕಾರಿಯವರುಗಳು ಸಹಕರಿಸಿ ದಾಖಲಾತಿಗಳನ್ನು ಮಾಡಿಕೊಟ್ಟಿರುತ್ತಾರೆಂದು ಕೊಕ್ಕಂಡ ಎಂ.ಕುಟ್ಟಪ್ಪನವರು ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಬೈಕಿಗೆ ಜೀಪು ಡಿಕ್ಕಿ ಸವಾರನಿಗೆ ಗಾಯ:

ವಿರಾಜಪೇಟೆ ತಾಲೋಕು ಬೇಟೋಳಿ ಗ್ರಾಮದ ಎವರ್ ಗ್ರೀನ್ ರೆಸಾರ್ಟ್ ನಲ್ಲಿ ಸ್ವಾಗತಗಾರನಾಗಿ ಕೆಲಸ ನಿರ್ವಹಿಸುತ್ತಿರುವ ಬಿ.ಕೆ. ಸಂಜು ಎಂಬವರು ದಿನಾಂಕ 4-7-2018 ರಂದು ವಿರಾಜಪೇಟೆ ನಗರದಿಂದ ನಾಂಗಾಲ ರೆಸಾರ್ಟ್‍ಕಡೆಗೆ ತಮ್ಮ ಬಾಪ್ತು ಮೋಟಾರ್ ಸೈಕಲಿಲ್ಲಿ ಹೋಗುತ್ತಿದ್ದಾಗ ಬಿಟ್ಟಂಗಾಲ ಗ್ರಾಮದ ನಾಂಗಾಲ ಜಂಕ್ಷನ್ ಬಳಿ ಎದುರುಗಡೆಯಿಂದ ಜೀಪನ್ನು ಅದರ ಚಾಲಕ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬಿ.ಕೆ.ಸಂಜುರವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್‍ ಗೆ ಡಿಕ್ಕಿಪಡಿಸಿದ ಪರಿಣಾಮ ಸದರಿ ಸಂಜುರವರು ಬೈಕ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.