Crime News
ಆನ್ಲೈನ್ ವಂಚನೆ ಪ್ರಕರಣ
ದಿನಾಂಕ: 03.12.2020 ರಿಂದ 18.12.2020 ರ ನಡುವಿನ ದಿನಗಳಲ್ಲಿ ಸೋಮವಾರಪೇಟೆ ತಾಲ್ಲೂಕು ಸುಂಟಿಕೊಪ್ಪ ಹರದೂರು ಎಸ್ಟೇಟ್ ನಿವಾಸಿ ಕುಮಾರ್ ಎಂಬುವವರ ಬ್ಯಾಂಕ್ ಖಾತೆಯಿಂದ ಅವರಿಗೆ ತಿಳಿಯದಂತೆ ಯಾರೋ ಅಪರಿಚಿತರು ₹. 35 ಲಕ್ಷ ಹಣವನ್ನು ಆನ್ಲೈನ್ ವಹಿವಾಟು ಮೂಲಕ ತೆಗೆದು ವಂಚನೆ ಮಾಡಿದ್ದು ಈ ಬಗ್ಗೆ ದಿನಾಂಕ: 04-01-2021 ರಂದು ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ರಸ್ತೆ ಅಪಘಾತ ಪ್ರಕರಣ
ದಿನಾಂಕ: 03.01.2021 ರಂದು ಸಿದ್ದಾಪುರ ಮಡಿಕೇರಿ ಮುಖ್ಯ ರಸ್ತೆಯ ನೆಲ್ಲಿಹುದಿಕೇರಿ ಬಳಿ ಕೆಎ-12-ಜೆ-2866 ರ ಬೈಕನ್ನು ಅದರ ಸವಾರ ಅಂಥೋಣಿ ರಾಜು ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಕೆಎ-41-ಇಸಿ-7764 ರ ಸ್ಕೂಟರ್ಗೆ ಡಿಕ್ಕಿಪಡಿಸಿದ ಪರಿಣಾಮ ಸ್ಕೂಟರ್ ಸವಾರರು ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ಸೀನ ಎಂಬುವವರು ನೀಡಿದ ಪುಕಾರಿನ ಮೇರೆ ಸಿದ್ದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಅಕ್ರಮ ಗಾಂಜಾ ಪ್ರಕರಣ
ದಿನಾಂಕ: 04-01-2021 ರಂದು ಗೋಣಿಕೊಪ್ಪ ಆರ್.ಎಂ.ಸಿ ಬಳಿ ಅಕ್ರಮವಾಗಿ ಮಾರಾಟ ಮಾಡಲು ಕೆಎ-12-ಎ-6183 ರ ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಗೋಣಿಕೊಪ್ಪ ಠಾಣೆ ಪಿಎಸ್ಐ ಮಂಚಯ್ಯ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ವಿ.ಎಸ್.ಗುರುದತ್ ಎಂಬುವವರ ವಿರುದ್ದ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.