Crime News
ಅಕ್ರಮ ಶ್ರೀ ಗಂಧ ಮಾರಾಟ ಯತ್ನ, ಆರೋಪಿಗಳ ಬಂಧನ.
ಶ್ರೀಗಂಧದ ಮರ ಕಳ್ಳತನ ಮಾಡಿ ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಪ್ರಕರಣವನ್ನು ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
ದಿನಾಂಕ: 08-01-2021 ರಂದು ವಿರಾಜಪೇಟೆ ಗ್ರಾಮಾಂತರ ಠಾಣೆ ಎಎಸ್ಐ ಶ್ರೀಧರ್ ಮತ್ತು ಸಿಬ್ಬಂದಿಯವರು ಗಸ್ತು ಕರ್ತವ್ಯದಲ್ಲಿರುವಾಗ ವಿರಾಜಪೇಟೆ ತಾಲ್ಲೂಕು ಅಮ್ಮತ್ತಿ ಗ್ರಾಮದ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಕೆಎ-12-ಎಂ-0044 ನೋಂದಣಿ ಸಂಖ್ಯೆಯ ಕಾರನ್ನು ತಪಾಸಣೆ ಮಾಡಿದಾಗ ಶ್ರೀಗಂಧ ಮರದ ತುಂಡುಗಳು ಕಂಡುಬಂದಿದ್ದು ಆರೋಪಿಗಳಾದ ಸುಜಯ್, ಅರ್ಜುನ್, ಮುತ್ತಪ್ಪ ಮತ್ತು ಮಹದೇವಸ್ವಾಮಿ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ ಕಿಶನ್ ಎಂಬುವವರ ಕಾಫಿ ತೋಟದಿಂದ ಕಳವು ಮಾಡಿದ್ದ ₹. 35,000 ಮೌಲ್ಯದ ಶ್ರೀಗಂಧ ಮರದ ತುಂಡುಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ವಾಹನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಓರ್ವ ಆರೀಪಿ ತಲೆಮರೆಸಿಕೊಂಡಿದ್ದು, ಮಾಡಲಾದ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತಾರೆ.
ರಸ್ತೆ ಅಪಘಾತ ಪ್ರಕರಣ
ದಿನಾಂಕ: 07-01-2021 ರಂದು ವಿರಾಜಪೇಟೆ ತಾಲ್ಲೂಕು ಮಾಕುಟ್ಟ ಕೂಟುಪೊಳೆ ಬಳಿ ಕೆಎಲ್-59-ಎಸ್-9408 ರ ಕಾರನ್ನು ಅದರ ಚಾಲಕ ಅಭಿ ಥೋಮಸ್ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಗೆ ಡಿಕ್ಕಿಪಡಿಸಿದ ಪರಿಣಾಮ ಬಾಲಕಿ ಗಾಯಗೊಂಡಿದ್ದು ಈ ಬಗ್ಗೆ ನಿಡಿದ ಪುಕಾರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.