Crime News

ರಸ್ತೆ ಅಪಘಾತ ಪ್ರಕರಣ

ದಿನಾಂಕ: 11-01-2021 ರಂದು ಮಡಿಕೇರಿ ತಾಲ್ಲೂಕು ಕೆದಕಲ್ ಗ್ರಾಮದ ಬಳಿ ಕೆಎ-09-ಜೆಡ್-1371 ರ ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಟಿಪ್ಪರ ಲಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡಿದ್ದು ಈ ಬಗ್ಗೆ ಲಾರಿ ಚಾಲಕ ಅರುಣ್‍ ಕುಮಾರ್‍ ಎಂಬುವರು ನೀಡಿದ ಪುಕಾರಿನ ಮೇರೆ ಸುಂಟಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಗನಿಂದಲೇ ತಂದೆಯ ಹತ್ಯೆ, ಆರೋಪಿ ಬಂಧನ.

ಕ್ಷುಲ್ಲಕ ಕಾರಣಕ್ಕೆ ಜಗಳವಾದಾಗ ಮಗ ತಂದೆಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೆಳಕುಮಾನಿ ಗ್ರಾಮದಲ್ಲಿ ನಡೆದಿದೆ. ಮಡಿಕೇರಿ ಗ್ರಾಮಾಂತರ ಠಾಣೇ ಪೊಲೀಸರು ಆರೋಪಿಯನ್ನು ಬಂಧಿಸಿರುತ್ತಾರೆ.

ದಿನಾಂಕ: 08-01-2021 ರಂದು ಮಡಿಕೇರಿ ತಾಲ್ಲಕು ಬೆಳಕುಮಾನಿ ಗ್ರಾಮದ ನಿವಾಸಿ ಶಿವಯ್ಯ ಎಂಬುವವರು ಮನೆಯಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿರುವುದಾಗಿ ಅವರ ಮಗ ಮಧುಕುಮಾರ್‍ ಮೃತರ ಹಿರಿಯ ಮಗ ಮನೋಹರ ರವರಿಗೆ ಫೋನ್‍ ಮಾಡಿ ಶಿವಯ್ಯ ರವರು ಕಾಲು ಜಾರಿ ಬಿದ್ದು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಮೃತ ಶರೀರದ ಮೇಲೆ ಗಾಯಗಳಿದ್ದುದರಿಂದ ಸಾವಿನ ಬಗ್ಗೆ ಅನುಮಾನವಿರುವುದಾಗಿ ಮನೋಹರ ರವರು ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಯು.ಡಿ.ಆರ್‍ ಪ್ರರಕಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ನಂತರ ದಿನಾಂಕ: 10-01-2021 ರಂದು ಮೃತರ ಹಿರಿಯ ಮಗ ಮನೋಹರ ರವರು ಪೂರಕ ದೂರನ್ನು ನೀಡಿ ದಿನಾಂಕ: 08-01-2021 ರಂದು ಶಿವಯ್ಯ ಮತ್ತು ಮಧುಕುಮಾರ್‍ ತವರ ನಡುವೆ  ಕ್ಷುಲ್ಲಕ ಕಾರಣಕ್ಕೆ ಜಗಳವಾದಾಗ ಮಧುಕುಮಾರ್‍ ಕತ್ತಿಯಿಂದ ಹಲ್ಲೆ ಮಾಡಿ ತಂದೆ ಶಿವುಯ್ಯ ರವರನ್ನು ಕೊಲೆ ಮಾಡಿರುವುದಾಗಿ ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆರೋಪಿ ಮಧುಕುಮಾರ್‍ ರವರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತಾರೆ.