Crime News

ವ್ಯಕ್ತಿ ಕಾಣೆ ಪ್ರಕರಣ

ಮಡಿಕೇರಿ ತಾಲ್ಲೂಕು ಕೂಡ್ಲೂರು ಚೆಟ್ಟಳ್ಳಿ ಗ್ರಾಮದ ನಿವಾಸಿ ಕುಶಾಂತ್‍ ಕುಮಾರ್‍ ಎಂಬುವವರು ಕುಶಾಲನಗರದ ಎಸ್.ಎಲ್..ಎನ್ ಪೆಟ್ರೋಲ್‍ ಬಂಕ್‍ ನಲ್ಲಿ ಮೇನೇಜರ್‍ ಕೆಲಸ ಮಾಡಿಕೊಂಡಿದ್ದು ದಿನಾಂಕ: 12-01-2021 ರಂದು ಮನೆಯಿಂದ ಬೈಕಿನಲ್ಲಿ ಹೋದವರೂ ಕೆಲಸಕ್ಕೂ ಹೋಗದೇ ವಾಪಾಸ್ಸು ಮನೆಗೂ ಬಾರದೇ ಕಾಣೆಯಾಗಿದ್ದು ಈ ಬಗ್ಗೆ ಕಾರ್ಯಪ್ಪ ಎಂಬುವವರು ನೀಡಿದ ದೂರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲಿಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ದಿನಾಂಕ: 16-01-2021 ರಂದು ಸೋಮವಾರಪೇಟೆ ತಾಲ್ಲೂಕು ಕೂಡಿಗೆ  ಗ್ರಾಮದ  ನಿವಾಸಿ  ಮಹೇಶ ಎಂಬುವವರು ಅವರ ಅವರ ಮನೆಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ  ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯಸೇವನೆಗೆ ಅವಕಾಶ ಮಾಡುತ್ತಿದ್ದ ಪ್ರಕರಣವನ್ನು ಕುಶಾಲನಗರ ಗ್ರಾಮಾತರ ಠಾಣೆ ಪಿಎಸ್‍ಐ ಶಿವಶಂಕರ್ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.