Crime News

ಅಕ್ರಮ ಜೂಜಾಟ ಪ್ರಕರಣ.

ಕೊಡಗು ಜಿಲ್ಲೆ ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ  ರೆಸಾರ್ಟ್‍ನಲ್ಲಿ ಮೈಸೂರು ಹಾಗೂ ಮಂಡ್ಯ ಮೂಲದ ಪ್ರವಾಸಿ ವ್ಯಕ್ತಿಗಳು ಅಕ್ರಮವಾಗಿ ಇಸ್ಪೀಟ್‍ ಜೂಜಾಟವಾಡುತ್ತಿದ್ದ ಪ್ರಕರಣವನ್ನು ಕೊಡಗು ಜಿಲ್ಲಾ ಡಿ.ಸಿ.ಐ.ಬಿ ವಿಭಾಗದ ಪೊಲೀಸರು ಪತ್ತೆ ಮಾಡಿ 23 ವ್ಯಕ್ತಿಗಳನ್ನು ವಶ್ಕಕೆ ಪಡೆದು, ಜೂಜಾಟಕ್ಕೆ ಉಪಯೋಗಿಸಿದ ₹. 6,57,840 ನಗದು , ಮೊಬೈಲ್‍ ಫೋನ್‍ ಗಳು ಹಾಗೂ ವಾಹನಗಳನ್ನು ವಶಪಡಿಸಿಕೊಂಡು ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ದಿನಾಂಕ: 17-01-2021 ರಂದು ಸೋಮವಾರಪೇಟೆ ತಾಲ್ಲೂಕು 7 ನೇ ಹೊಸಕೋಟೆ ಗ್ರಾಮದಲ್ಲಿರುವ ಕೂರ್ಗ್‍ ಕೌಂಟಿ ರೆಸಾರ್ಟ್‍ನಲ್ಲಿ ಅಕ್ರಮ ಜೂಜಾಟ ನಡೆಯುತ್ತಿರುವ ಬಗ್ಗೆ ದೊರೆತ ಮಾಹಿತಿ ಮೇರೆ ಜಿಲ್ಲಾ ಡಿ.ಸಿ..ಐ .ಬಿ ವಿಭಾಗದ ಪೊಲೀಸರು ದಾಳಿ ಮಾಡಿ ರೆಸಾರ್ಟ್‍ನಲ್ಲಿ ಪ್ರತ್ಯೇಕ ಕೊಠಡಿಗಳಲ್ಲಿ ಹಣವನ್ನು ಪಣಕ್ಕಿಟ್ಟು ಇಸ್ಪೀಟ್‍ ಜೂಜಾಟವಾಡುತ್ತಿದ್ದ ಮೈಸೂರು, ಮಂಡ್ಯ ಮೂಲದ ಬಸವರಾಜು, ಆನಂದ, ಎಂ.ಆರ್‍ ವಿನಯ್‍ಕುಮಾರ್, ದೀಕ್ಷಿತ್, ಲೋಕೇಶ್, ಕೃಷ್ಣೇಗೌಡ, ಎಸ್.ಕುಮಾರ್, ಆನಂದ, ರವಿ, ವಿಜೇಂದ್ರ, ಸತೀಶ್, ಟಿ.ಕುಮಾರ್, ಟಿ.ಸಿ ಮಹೇಶ್, ವಿ. ವಿನಯ್, ನವೀನ್, ಮಂಜು, ನಾಗರಾಜು, ಟಿ.ಎಸ್, ಮಂಜುನಾಥ್, ಚಂದ್ರ, ಸಂತೋಷ್, ರವಿಕುಮಾರ್, ಮಂಜು, ಕುಮಾರ್  ಎಂಬ 23 ವ್ಯಕ್ತಿಗಳನ್ನು ವಶ್ಕಕೆ ಪಡೆದು, ಜೂಜಾಟಕ್ಕೆ ಉಪಯೋಗಿಸಿದ ಇಸ್ಪೀಟ್‍ ಎಲೆ, ₹. 6,57,840 ನಗದು , ಮೊಬೈಲ್‍ ಫೋನ್‍ ಗಳು ಹಾಗೂ ವಾಹನಗಳನ್ನು ವಶಪಡಿಸಿಕೊಂಡು ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಡಿ.ಸಿ.ಐ.ಬಿ ಪೊಲೀಸ್‍ ಇನ್ಸ್‍ ಪೆಕ್ಟರ್‍ ಕುಮಾರ್‍ ಆರಾಧ್ಯ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಬಿ.ಎಲ್‍ ಯೋಗೇಶ್‍ ಕುಮಾರ್, ಎಂ.ಎನ್‍ ನಿರಂಜನ್, ಕೆ.ಆರ್‍ ವಸಂತ್, ವಿ.ಜಿ ವೆಂಕಟೇಶ್, ಕೆ.ಎಸ್ ಅನಿಲ್‍ ಕುಮಾರ್, ಯು.ಎ ಮಹೇಶ್, ಬಿ.ಜಿ ಶರತ್ ರೈ, ಶಶಿಕುಮಾರ್ ಹಾಗು ಸುಂಟಿಕೊಪ್ಪ ಠಾಣೆಯ ಕಾವೇರಪ್ಪ, ಸತೀಶ್, ಪುನೀತ್, ಸಂಪತ್‍ ರವರು ಪಾಲ್ಗೊಂಡಿದ್ದರು. ಪೊಲೀಸ್‍ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ.

ರಸ್ತೆ ಅಪಘಾತ, ಬೈಕ್‍ ಸವಾರ ಸಾವು.

ದಿನಾಂಕ: 17-01-2021 ರಂದು ಮಡಿಕೇರಿ ನಗರದ ಮಂಗಳೂರು ರಸ್ತೆಯಲ್ಲಿ ಕೆ.ಎಸ್‍.ಆರ್.ಟಿ.ಸಿ ಬಸ್ಸನ್ನು ಅದರ ಚಾಲಕ ಬಾಲಚಂದ್ರ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಬೈಕ್‍ ಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್‍ ಸವಾರ ಕೀರ್ತನ್‍ ಎಂಬುವವರು ಗಾಯಗೊಂಡು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದಾಗ ಮೃತಪಟ್ಟಿದ್ದು ಈ ಬಗ್ಗೆ ಜಗದೀಶ್‍ ಎಂಬುವವರು ನೀಡಿದ ದೂರಿನ ಮೇರೆ ಮಡಿಕೇರಿ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ದಿನಾಂಕ: 17-01-2021 ರಂದು ವಿರಾಜಪೇಟೆ ತಾಲ್ಲೂಕು ಅಮ್ಮತ್ತಿ ಒಂಟಿಅಂಗಡಿ ಗ್ರಾಮದ ನಿವಾಸಿ ಮಹಿಳೆಯೊಬ್ಬರು ಅವರ ಮನೆಯ ಹಿಂಭಾಗ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ವಿರಾಜಪೇಟೆ ಗ್ರಾಮಾಂತರ ಠಾಣೆ ಪಿಎಸ್‍ಐ ಸಿದ್ದಲಿಂದ ಬಾನಸೆ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ: 17-01-2021 ರಂದು ವಿರಾಜಪೇಟೆ ತಾಲ್ಲೂಕು ನಾಲ್ಕೇರಿ ಗ್ರಾಮದ ನಿವಾಸಿ ಹನೀಫ್ ಎಂಬುವವರಿಗೆ ಅದೇ ಗ್ರಾಮದ ನಿವಾಸಿಗಳಾದ ರಾಶಿದ್‍ ಮತ್ತು ಹಸೈನಾರ್‍ ಎಂಬುವವರು ಹಲ್ಲೆ ಮಾಡಿ ನೋವುಪಡಿಸಿದ್ದು ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ, ವೃದ್ದ ಸಾವು

ದಿನಾಂಕ: 17-01-2021 ರಂದು ಸೋಮವಾರಪೇಟೆ ತಾಲ್ಲೂಕು ಕೊಡ್ಲಿಪೇಟೆ ಗ್ರಾಮದ ಮಸೀದಿ ಬಳಿ ಮುಖ್ಯ ರಸ್ತೆಯಲ್ಲಿ ಕೆಎ-46-ಜೆ-1675 ರ ಬೈಕ್‍ ಗೆಕೆಎ-06-ಎಎ-5975 ರ ಟಿಪ್ಪರ್‍ ಲಾರಿಯು ಡಿಕ್ಕಿಪಡಿಸಿದ ಪರಿಣಾಮ ಹಿಂಬದಿ ಸವಾರ ಶಿವಣ್ಣ ಎಂಬುವವರು ರಸ್ತೆಗೆ ಬಿದ್ದಾಗ ಲಾರಿಯ ಚಕ್ರ ತಲೆಯ ಮೇಲೆ ಹರಿದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಟಿಪ್ಪರ್‍ ಲಾರಿ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿ ಲಾರಿಯನ್ನು ನಿಲ್ಲಿಸದೇ ಹೋಗಿದ್ದು ಈ ಬಗ್ಗೆ ಬೈಕ್‍ ಸವಾರ ರುದ್ರೇಶ ಎಂಬುವವರು ನೀಡಿದ ದೂರಿನ ಮೇರೆ ಶನಿವಾರಸಂತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಜೂಜಾಟ ಪ್ರಕರಣ

ದಿನಾಂಕ: 17-01-2021 ರಂದು ಸೋಮವಾರಪೇಟೆ ತಾಲ್ಲೂಕು ಗುಡ್ಡೆಹೊಸೂರು ಗ್ರಾಮದ ತೆಪ್ಪದ ಕಂಡಿ ಬಳಿ ಅಕ್ರಮವಾಗಿ ಇಸ್ಪೀಟ್‍ ಜೂಜಾಟವಾಡುತ್ತಿದ್ದ ಪ್ರಕರಣವನ್ನು ಕುಶಾಲನಗರ ಗ್ರಾಮಾಂತರ ಠಾಣೆ ಪಿಎಸ್‍ಐ ಶಿವಶಂಕರ್‍ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ರಮೇಶ್‍, ಜೆ.ಕೆ ರಮೇಶ್‍, ಮುಸ್ತಾಫ, ನವೀ ನ್‍ಕುಮಾರ್‍, ಹರೀಶ, ಸತೀಶ್‍ ಎಂಬುವವರ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.