Crime News

ಬೈಕ್ ಕಳವು ಪ್ರಕರಣ

ದಿನಾಂಕ: 14-01-2021 ರಂದು ಮಡಿಕೇರಿ ತಾಲ್ಲೂಕು ಮೂರ್ನಾಡು ಗ್ರಾಮದ ನಿವಾಸಿ  ಭರತ್ ಎಂಬುವವರು ಅವರ ಮನೆಯ ಮುಂದೆ ನಿಲ್ಲಿಸಿದ್ದ ಸ್ನೇಹಿತ ಕರುಣಾಕರ ಎಂಬುವವರ ಕೆಎ-19-ಇಡಿ-6070 ನೋಂದಣಿ ಸಂಖ್ಯೆಯ ಬೈಕನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ದಿನಾಂಕ: 18-01-2021 ರಂದು ಕರುಣಾಕರ ರವರು ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

ದಿನಾಂಕ: 18-01-2021 ರಂದು ಸೋಮವಾರಪೇಟೆ ತಾಲ್ಲೂಕು ಹೊಸತೋಟ ಗ್ರಾಮದ ಬಳಿ ಮುಖ‍್ಯ ರಸ್ತೆಯಲ್ಲಿ ಕೆಎ-05-ಎಂಬಿ-0789 ರ ಕಾರನ್ನು ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಕೆಎ-12-ಹೆಚ್-9629 ರ ಬೈಕ್ ಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್‍ ಸವಾರರಿಬ್ಬರು ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಸುಂಟಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ, ವೃದ್ದ ಸಾವು.

ದಿನಾಂಕ: 17-01-2021 ರಂದು ಕುಶಾಲನಗರ ಪಟ್ಟಣದ ಕೆ.ಎಸ್‍.ಆರ್‍,ಟಿ,ಸಿ ಬಸ್‍ ನಿಲ್ದಾಣದ ಬಳಿ ಕೆಎ-19-ಎಫ್-3052 ರ ಬಸ್ಸನ್ನು ಅದರ ಚಾಲಕ ದುಡುಕುತನದಿಂದ ಚಾಲನೆ ಮಾಡಿದ ಹಾಗೂ ಬಸ್ಸಿನ ನಿರ್ವಾಹಕನ ನಿರ್ಲಕ್ಷತೆಯಿಂದ ವೃದ್ದ ಪ್ರಯಾಣಿಕರಾದ ತಿಮ್ಮಶೆಟ್ಟಿ ಎಂಬುವವರು ಬಸ್ಸಿನಿಂದ ಕೆಳಗೆ ಬಿದ್ದು ಗಾಯಗೊಂಡವರನ್ನು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದಾಗ  ಮೃತಪಟ್ಟಿದ್ದು ಈ ಬಗ್ಗೆ ನೀಡಿದ ದೂರಿನ ಮೇರೆ ಕುಶಾಲನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.