Crime News

ಅಕ್ರಮ ಗಾಂಜಾ ಮಾರಾಟ ಪ್ರಕರಣ ಪತ್ತೆ, ಆರೋಪಿ ಬಂಧನ.

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸುಂದರನಗರ ಜಂಕ್ಷನ್ ನಲ್ಲಿರುವ ಬಸ್ಸು ತಂಗುದಾಣದಲ್ಲಿ ಸುಮಾರು 1 ಕೆ.ಜಿ 290 ಗ್ರಾಂ ಗಾಂಜಾವನ್ನು ಅಕ್ರಮವಾಗಿ ವಶದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಕುಶಾಲನಗರ ಸುತ್ತ-ಮುತ್ತ ಹಾಗೂ ಶಾಲಾ ಕಾಲೇಜಿನ ಆವರಣಗಳಲ್ಲಿ ಗಾಂಜಾ ಸೇವನೆ ಅಧಿಕವಾಗಿರುವುದಾಗಿ  ಮಾಹಿತಿಗಳು ತಿಳಿದುಬಂದಿದ್ದರಿಂದ ಗಾಂಜಾ ಸೇವನೆಗೆ ಸರಬರಾಜು ಮಾಡುತ್ತಿರುವ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ ಕ್ಷೀಪ್ರ ಕಾರ್ಯಾಚರಣೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಚೇತನ್ ಎಂ.ತಂದೆ ಲೇಟ್ ಪೌತಿ ಮಾದೇವ  20 ವರ್ಷ, ಕೂಲಿ ಕೆಲಸ, ವಾಸ ಬಸವನತ್ತೂರು ಕೂಡುಮಂಗಳೂರು ಗ್ರಾಮ ಎಂಬುವವರನ್ನು ವಶಕ್ಕೆ ಪಡೆದು ಆತನ ವಶದಲ್ಲಿದ್ದ 1 ಕೆ.ಜಿ 290 ಗ್ರಾಂ ಗಾಂಜಾ, ಕೆಎ-12 ಕ್ಯೂ-7276 ನಂಬರಿನ ಬೈಕ್, 1 ಮೊಬೈಲ್‍ ಫೋನ್‍ ವಶಪಡಿಸಿಕೊಂಡು ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಈ  ಪ್ರಕರಣವನ್ನು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ  ಪಿಎಸ್ಐ ಶಿವಶಂಕರ್ ರವರ ನೇತೃತ್ವದಲ್ಲಿ ಪ್ರೋಪೇಷನರಿ ಪಿ.ಎಸ್.ಐ ಶ್ರವಣ.ಎಸ್.ಡಿ, ಎಎಸ್ಐ ಸ್ವಾಮಿ, ಸಿಬ್ಬಂದಿಯವರಾದ ಪ್ರಸನ್ನ, ದಯಾನಂದ, ಸಜಿ, ಎ.ಮಂಜುನಾಥ್, ವಿವೇಕ್ , ಶಾಫಿನ್ ಅಹಮ್ಮದ್ ರವರು ಪತ್ತೆ ಮಾಡಿದ್ದು ಪ್ರಕರಣವನ್ನು ಪತ್ತೆ ಮಾಡಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ.        ಕಳವು ಪ್ರಕರಣ

ದಿನಾಂಕ: 21-01-2021 ರಂದು ವಿರಾಜಪೇಟೆ ತಾಲ್ಲೂಕು ಕರಡ ಗ್ರಾಮದ ನಿವಾಸಿ ವಿಶ್ವನಾಥ್‍ ಎಂಬುವವರ ಮನೆಯ ಮೇಲ್ಛಾವಣಿ ಹಂಚನ್ನು ಯಾರೋ ಕಳ್ಳರು ತೆಗೆದು ಒಳನುಗ್ಗಿ ಕಬ್ಬಿಣದ ಪೆಟ್ಟಿಗೆಯನ್ನು ಒಡೆದು ಅದರಲ್ಲಿದ್ದ ಒಟ್ಟು 71, 000 ರೂ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ದೂರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ದಾರಿ ತಡೆದು ಬೆದರಿಕೆ ಪ್ರಕರಣ

ದಿನಾಂಕ: 21-01-2021 ರಂದು ಹುಣಸೂರು ನಿವಾಸಿ ಪುರುಷೋತ್ತಮ ಎಂಬುವವರಿಗೆ ವಿರಾಜಪೇಟೆ ತಾಲ್ಲೂಕು ತೆರ್ಮೆಕಾಡು ಗ್ರಾಮದ ಬಳಿ ವಿರಾಜಪೇಟೆ ಪಟ್ಟಣದ ಆಟೋ ಚಾಲಕ ಸುರೇಶ್ ಎಂಬುವವರು ಇನ್ನೊಬ್ಬ ವ್ಯಕ್ತಿಯೊಂದಿಗೆ ಆಟೋದಲ್ಲಿ ಹೋಗಿ ಆಟೊ ಬಾಡಿಗೆ ವಿಚಾರದಲ್ಲಿ ವೈಷಮ್ಯದಿಂದ ದಾರಿತಡೆದು ಬೆದರಿಕೆ ಹಾಕಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ: 20-01-2021 ರಂದು ಸೋಮವಾರಪೇಟೆ ತಾಲ್ಲೂಕು ಕೊಡಗರಹಳ್ಳಿ ಗ್ರಾಮದ ನಿವಾಸಿ  ಸುನಿಲ್‍ ಕುಮಾರ್‍ ಎಂಬುವವರು ಅವರ ಕಾರಿನಲ್ಲಿ ಬಾಡಿಗೆಗೆ ನಾಕೂರು ಶಿರಂಗಾಲ ಗ್ರಾಮಕ್ಕೆ ಹೋಗಿದ್ದಾಗ ಮನೋಜ್‍. ಸಚಿನ್, ವಿನು, ಅಪ್ಪಿ ಮತ್ತು ಇಬ್ಬರು ವ್ಯಕ್ತಿಗಳು ಕ್ಷುಲ್ಲಕ ಕಾರಣಕ್ಕೆ ಕಲ್ಲಿನಿಂದ ಹಲ್ಲೆ ಮಾಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಸುಂಟಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳವು ಪ್ರಕರಣ

ದಿನಾಂಕ; 20-01-2021 ರಂದು ರಾತ್ರಿ ಮಡಿಕೇರಿ ತಾಲ್ಲೂಕು ಮೇಕೇರಿ ಗ್ರಾಮ ಪಂಚಾಯಿತಿ ಕಛೇರಿಯ ಕಿಟಕಿಯ ಬಾಗಿಲನ್ನು ಯಾರೋ ಕಳ‍್ಳರು ತೆರೆದು ಒಳಗಿದ್ದ ₹. 10,000 ಬೆಲೆ ಬಾಳುವ ಕಂಪ್ಯೂಟರ್‍ ಮೋಡೆಮ್‍ ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಪಿ.ಡಿ.ಒ ರವರು ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ದಾರಿ ತಡೆದು ಬೆದರಿಕೆ.

ದಿನಾಂಕ: 21-01-2021 ರಂದು ಹುಣಸೂರು ನಿವಾಸಿ ಪುರುಷೋತ್ತಮ ಎಂಬುವವರಿಗೆ ವಿರಾಜಪೇಟೆ ತಾಲ್ಲೂಕು ತೆರ್ಮೆಕಾಡು ಗ್ರಾಮದ ಬಳಿ ವಿರಾಜಪೇಟೆ ಪಟ್ಟಣದ ಆಟೋ ಚಾಲಕ ಸುರೇಶ್ ಎಂಬುವವರು ಇನ್ನೊಬ್ಬ ವ್ಯಕ್ತಿಯೊಂದಿಗೆ ಆಟೋದಲ್ಲಿ ಹೋಗಿ ಆಟೊ ಬಾಡಿಗೆ ವಿಚಾರದಲ್ಲಿ ವೈಷಮ್ಯದಿಂದ ದಾರಿತಡೆದು ಬೆದರಿಕೆ ಹಾಕಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

ದಿನಾಂಕ: 20-01-2021 ರಂದು ಮಡಿಕೇರಿ ತಾಲ್ಲೂಕು ಚೆಯ್ಯಂಡಾಣೆ ಗ್ರಾಮದ ಬಳಿ ಮುಖ‍್ಯ ರಸ್ತೆಯಲ್ಲಿ ಕೆಎ-12-ಬಿ-5541 ರ ಪಿಕ್‍ಅಪ್‍ ವಾಹನವನ್ನು ಅದರ ಚಾಲಕ ದಿಲೀಪ್‍ ಎಂಬುವವರು ಅತಿವೇಗ ಮತ್ತು ಅಜಾರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರಿಗಡೆಯಿಂದ ಬರುತ್ತಿದ್ದ ಕೆಎ-12-ಜೆ-3124ರ ಬೈಕ್‍ ಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್‍ ಸವಾರ ಸೋಮಶೇಖರ್‍ ಹಾಗೂ ಜೀಪ್‍ ಚಾಲಕ ಗಾಯಗೊಂಡಿದ್ದು ಈ ಬಗ್ಗೆ ಹಿಂಬದಿ ಸವಾರ ಯೋಗೇಶ್‍ ಎಂಬುವವರು ನೀಡಿದ ಪುಕಾರಿನ ಮೇರೆ ನಾಪೋಕ್ಲು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳವು ಪ್ರಕರಣ

ದಿನಾಂಕ: 20-01-2021 ರಂದು ವಿರಾಜಪೇಟೆ ತಾಲ್ಲೂಕು ಕರಡಿಗೋಡು ಗ್ರಾಮದಲ್ಲಿರುವ ಇವಾಲ್ಟ್‍ ಬ್ಯಾಕ್‍ ರೆಸಾರ್ಟ್‍ ನ ಕೊಠಡಿಯೊಂದರಲ್ಲಿ ತಂಗಿದ್ದ ಬೆಂಗಳೂರು ಮೂಲದ ಪ್ರವಾಸಿಗರಾದ ನಾಗರಾಜು ಎಂಬುವವರಿಗೆ ಸೇರಿದ ₹. 10,000 ನಗದು ಹಾಗೂ ₹. 1,35,000 ಮೌಲ್ಯದ ಚಿನ್ನಾಭರಣಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ರೆಸಾರ್ಟ್‍ ಮೇನೆಜರ್‍ ಜೋಯ್‍ ದೀಪ್‍ ಎಂಬುವವರು ನೀಡಿದ ಪುಕಾರಿನ ಮೇರೆ ಸಿದ್ದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.