Crime News

ಹಲ್ಲೆ ಪ್ರಕರಣ

ದಿನಾಂಕ: 28-01-2021 ರಂದು ಮಡಿಕೇರಿ ತಾಲ್ಲೂಕು ಐಕೊಳ ಗ್ರಾಮದ ನಿವಾಸಿ ರಾಜು ಎಂಬುವವರಿಗೆ ಅದೇ ಗ್ರಾಮದ ನಿವಾಸಿ ರಂಜಿತ್ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಅವಾಚ್ಯಪದಗಳಿಂದ ಬೈದು ಹಲ್ಲೆ ಮಾಡಿ ಗಾಯಪಡಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ: 29-01-2021 ರಂದು ವಿರಾಜಪೇಟೆ ಪಟ್ಟಣದ ನಿವಾಸಿ ವಕೀಲರಾದ ಖಲೀಲ್‍ ಅಹಮ್ಮದ್ , ಜಾಕ್ಸನ್, ಸಜೀಶ್, ವಿಜು, ದಿನೇಶ್, ರಾಜು ಮತ್ತು ಇತರರು ಹಾಗೂ ವಿರಾಜಪೇಟೆ ನಿವಾಸಿಗಳಾದ ಮೊಹಮ್ಮದ್, ಕ್ರೈನ್‍ ರಜಾಕ್, ಆಲಿ, ಕೋಡಾಪುಡಿ ಅಬ್ದುಲ್‍ ರೆಹಮಾನ್, ಉಸ್ಮಾನ್, ಬದ್ರಿಯಾ ಉಮ್ಮರ್, ಖಾದರ್ ಪಾಷಾ, ಅಲಿಂ, ಉಸ್ಮಾನ್, ಜುಮಾ ಮಸೀದಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಇತರರು ವೈಯಕ್ತಿಕ ಕಾರಣದಿಂದ ಪರಸ್ಪರ ಹಲ್ಲೆ ಮಾಡಿ ಕೊಂಡು ಬೆದರಿಕೆ ಹಾಕಿದ್ದು ಈ ಬಗ್ಗೆ ಉಭಯ ಕಡೆಯವರು ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ: 29-01-2021 ರಂದು ಮಡಿಕೇರಿ ತಾಲ್ಲೂಕು ಮರಗೋಡು ಗ್ರಾಮದ ನಿವಾಸಿ ಪೊನ್ನಮ್ಮ ಎಂಬುವವರಿಗೆ ಅದೇ ಗ್ರಾಮದ ನಿವಾಸಿ ರೂಪೇಶ್‍ ಎಂಬುವವರು ಕ್ಷುಲ್ಲಕ ಕಾರಣಕ್ಕೆ ದೊಣ್ಣೆಯಿಂದ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.