Crime News

ರಸ್ತೆ ಅಪಘಾತ, ಸಾವು

ದಿನಾಂಕ 07/03/2021ರ ರಾತ್ರಿ ವೇಳೆ ಕುಶಾಲನಗರ ನಿವಾಸಿ ಎಸ್‌.ಟಿ. ಭೀಮಯ್ಯ ಎಂಬವರು ಅವರ ಮಾರುತಿ ವ್ಯಾನಿನಲ್ಲಿ ಸಂಸಾರ ಸಮೇತ ಗುಡ್ಡೆಹೊಸೂರಿನಿಂದ ಕುಶಾಲನಗರಕ್ಕೆ ಹೋಗುತ್ತಿರುವಾಗ ಅಮನ್‌ವನ ರೆಸಾರ್ಟ್‌ ಬಳಿ ಎದುರಿನಿಂದ ಒಂದು ಮಾರುತಿ ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಭೀಮಯ್ಯನವರ ವ್ಯಾಣಿಗೆ ಡಿಕ್ಕಿಪಡಿಸಿದ ಪರಿಣಾಮ ವ್ಯಾನಿನಲ್ಲಿದ್ದ ಭೀಮಯ್ಯ, ಅವರ ಪತ್ನಿ ತಂಗಮ್ಮ, ಉತ್ತಯ್ಯ, ಮಕ್ಕಳಾದ ಕರುಣ್‌, ತೋಷಿಕ ಎಂಬವರಿಗೆ ಗಾಯಗಳಾಗಿದ್ದು ಗಂಭೀರ ಗಾಯಗಳಾಗಿದ್ದ ಭೀಮಯ್ಯನವರನ್ನು ಚಿಕಿತ್ಸೆಗಾಗಿ ಸುಳ್ಯದ ಕೇವಿಜಿ ಆಸ್ಪತ್ರೆಗೆ ದಾಖಲಿಸಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಭೀಮಯ್ಯನವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಕಾಣೆ ಪ್ರಕರಣ

ಶನಿವಾರಸಂತೆ ಬಳಿಯ ಗೋಪಾಲಪುರ ನಿವಾಸಿ ರವೀಶ ಎಂಬವರು ದಿನಾಂಕ 23/02/2021ರಂದು ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವರು ಇದುವರೆಗೂ ಮನೆಗೆ ಬಾರದೆ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 07/03/2021ರಂದು ಕೇರಳದ ಪಾಣತ್ತೂರು ನಿವಾಸಿ ಶ್ರೀ ಕುಮಾರ ಎಂಬವರು ಭಾಗಮಂಡಲದ ತಾವೂರಿನಲ್ಲಿರುವ ಬೀಕಾನ್‌ ಎಂಬವರ ಮನೆಯಲ್ಲಿ ಸ್ನೇಹಿತ ಕಾಸರಗೋಡಿನ ಜೋಸೆಫ್‌ ಎಂಬವರೊಂದಿಗೆ ತಂಗಿದ್ದು ರಾತ್ರಿ ವೇಳೆ ಕೇರಳಕ್ಕೆ ಹೋಗುವ ವಿಚಾರದಲ್ಲಿ ಜಗಳವಾಗಿ ಜೋಸೆಫ್‌ರವರು ಕಬ್ಬಿಣದ ರಾಡಿನಿಂದ ಶ್ರೀಕುಮಾರ್‌ರವರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮನೆ ಕಳವು ಪ್ರಕರಣ

ತಿತಿಮತಿ ಬಳಿಯ ಮತ್ತಿಗೋಡು ಆನೆ ಶಿಬಿರದಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿರುವ ಸತೀಶ್‌ ಕುಮಾರ್‌ ಎಂಬವರು ಶಿಬಿರದಲ್ಲಿನ ಆನೆಗಳ ಆಹಾರದ ದಾಸ್ತಾನು ಕೊಠಡಿಗೆ ಬೀಗ ಹಾಕಿಕೊಂಡು ದಿನಾಂಕ 07/03/2021ರಂದು ಮನೆಗೆ ಬಂದಿದ್ದು ಮಾರನೇ ದಿನ ದಿನಾಂಕ 08/03/2021ರಂದು ಕರ್ತವ್ಯಕ್ಕೆ ಹಾಜರಾಗಿ ಆಹಾರದ ದಾಸ್ತಾನು ಕೊಟಡಿಯ ಬಳಿ ಹೋದಾಗ ರಾತ್ರಿ ವೇಳೆ ಯಾರೋ ಕೊಟಡಿಯ ಬೀಗ ಮುರಿದು ಒಳ ಪ್ರವೇಶಿಸಿ ಸುಮಾರು ರೂ. 17,500/- ಬೆಲೆಯ 10 ಚೀಲ ಅಕ್ಕಿ ಮತ್ತು 5 ಚೀಲ ಹುರುಳಿ ಕಾಳನ್ನು ಕಳವು ಮಾಡಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.