Crime News

ಸ್ಕೂಟರಿಗೆ ಬೈಕ್ ಡಿಕ್ಕಿ:

ವಿರಾಜಪೇಟೆ ತಾಲೋಕು ಅಮ್ಮತ್ತಿ ಗ್ರಾಮದಲ್ಲಿ ವಾಸವಾಗಿರುವ ಮಹಮ್ಮದ್ ರಶೀದ್ ಎಂಬವರು ದಿನಾಂಕ 6-7-2018 ರಂದು ಸ್ಕೂಟರ್‍ ನಲ್ಲಿ ಅಮ್ಮತ್ತಿಯ ಕಡೆಗೆ ಹೋಗುತ್ತಿದ್ದಾಗ ರಂಗಸಮುದ್ರದ ಚಿಕ್ಲಿಹೊಳೆ ಜಂಕ್ಷನ್ ಬಳಿ ತಲುಪುವಾಗ್ಗೆ ಹಿಂದಿನಿಂದ ವ್ಯಕ್ತಿಯೋರ್ವ ಮೋಟಾರ್‍ ಸೈಕಲನ್ನು ಅತೀ ವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಟಿಕೊಂಡು ಬಂದು ಮಹಮ್ಮದ್ ರಶೀದ್‍ ರವರು ಚಲಾಯಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಸ್ಕೂಟರ್ ಸವಾರ ರಸ್ತೆಯಮೇಲೆ ಬಿದ್ದು ಗಾಯಗೊಂಡಿದ್ದು, ಈ ಸಂಬಂಧವಾಗಿ ಕುಶಾಲನಗರ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನಿಲ್ಲಿಸಿದ್ದ ಲಾರಿಗೆ ಕಂಟೈನರ್ ಡಿಕ್ಕಿ:

ಆಂದ್ರಪ್ರದೇಶ ಮೂಲದ ವ್ಯಕ್ತಿ ವಾಜೀದ್ ಪಾಷ ಎಂಬವರು ದಿನಾಂಕ 7-7-2018 ರಂದು ಬೆಳಗ್ಗೆ 9-00 ಗಂಟೆ ಸಮಯದಲ್ಲಿ ತಮ್ಮ ಲಾರಿಯನ್ನು ಮಡಿಕೇರಿ ಕಡೆಯಿಂದ ಮಂಗಳೂರಿನ ಕಡೆಗೆ ಚಾಲಿಸಿಕೊಂಡು ಹೋಗಿ ಮದೆ ಗ್ರಾಮದ ದೇವರಕೊಲ್ಲಿ ಎಂಬಲ್ಲಿ ರಸ್ತೆ ಬದಿಯಲ್ಲಿ ತಮ್ಮ ಲಾರಿಯನ್ನು ನಿಲ್ಲಿಸಿ ಹೋಗಿದ್ದು, ಸ್ವಲ್ಪ ಸಮಯದ ಬಳಿಕ ಲಾರಿಯ ಬಳಿ ಬಂದಾಗ ಲಾರಿಯ ಮುಂಭಾಗ ಜಖಂಗೊಂಡಿರುವುದು ಕಂಡು ಬಂದಿದ್ದು, ಸದರಿ ಲಾರಿಯ ಮುಂದೆ ನಿಲುಗಡೆಗೊಳಿಸಿದ್ದ ಲಾರಿಯನ್ನು ಹಿಂದಕ್ಕೆ ಚಲಾಯಿಸಿದ ಸಂದರ್ಭದಲ್ಲಿ ವಾಜೀದ್ ಬಾಷರವರ ಲಾರಿಗೆ ಡಿಕ್ಕಿಯಾಗಿ ಜಖಂಗೊಂಡಿರುವುದಾಗಿದ್ದು, ಈ ಸಂಬಂಧ ಸದರಿ ಲಾರಿ ಚಾಲಕ ವಾಜೀದ್ ಪಾಷರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.