Crime News

ವ್ಯಕ್ತಿಯ ಆಕಸ್ಮಿಕ ಸಾವು

 ದಿನಾಂಕ 09/07/2018 ರಂದು ಭಾಗಮಂಡಲ ಬಳಿಯ ಬೇಂಗೂರು ನಿವಾಸಿ ಹೆಚ್‌.ಜಿ.ಪೂವ ಎಂಬವರು ಕುಂದಚೇರಿ ಗ್ರಾಮದ ಕೆದಂಬಾಡಿ ಸತೀಶ್ ಎಂಬವರ ತೋಟದಲ್ಲಿ ಕಬ್ಬಿಣದ ಏಣಿಯನ್ನು ಇಟ್ಟುಕೊಂಡು ಮರಗಸಿ ಕೆಲಸ ಮಾಡುತ್ತಿರುವಾಗ ವಿದ್ಯುತ್ ಹರಿದು ಆಕಸ್ಮಿಕವಾಗಿ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಕಾಣೆ ಪ್ರಕರಣ

ದಿನಾಂಕ 07/07/2018ರಂದು ವಿರಾಜಪೇಟೆ ಬಳಿಯ ಕೊಟ್ಟೋಳಿ ನಿವಾಸಿ ಸಿ.ಎಸ್.ಸುಬ್ಬಯ್ಯ ಎಂಬ 69 ವರ್ಷ ಪ್ರಾಯದ ವ್ಯಕ್ತಿಯು ವಿರಾಜಪೇಟೆ ಪಟ್ಟಣಕ್ಕೆ ಬಸ್ಸು ಹತ್ತಿ ಹೋಗಿದ್ದು ಮರಳಿ ಬಂದಿರುವುದಿಲ್ಲವೆಂದು ಅವರ ಪತ್ನಿ  ಲೀಲಾ ಸಿ.ಎಸ್. ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ